ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ: ಎಚ್.ಡಿ. ದೇವೇಗೌಡ
ತೀರ್ಪಿನ ವಿರುದ್ಧ ಹೋಗಲು ಸಾಧ್ಯವಿಲ್ಲ

ಚಿಕ್ಕಮಗಳೂರು, ಸೆ.7: ಕಾವೇರಿ ನದಿ ನೀರಿನ ಹಂಚಿಕೆಗೆ ಸಂಬಂಧಿಸಿದಂತೆ ಸೌಹಾರ್ದ ಸೂತ್ರವನ್ನು ಪಾಲಿಸುವಂತೆ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳಿಗೆ ಸಲಹೆ ನೀಡಿರುವ ಸುಪ್ರೀಂ ಕೋರ್ಟ್ ಸ್ವಲ್ಪ ಪ್ರಮಾಣದಲ್ಲಾದರೂ ನೀರು ಬಿಡಬೇಕೆಂದು ನೀಡಿರುವ ತೀರ್ಪಿನ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಹರಿಸುವುದು ಅನಿವಾರ್ಯ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅಭಿಪ್ರಾಯ ವ್ಯಕ್ತಪಡಿಸಿದರು.
ಅವರು ನಗರದ ಡಿಸಿಸಿ ಬ್ಯಾಂಕ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾವೇರಿ ನದಿ ನೀರಿನ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಈ ವಿಚಾರವಾಗಿ ಬಹಳ ದೂರ ಹೋಗಿದ್ದೇವೆ. ನಮ್ಮಲ್ಲಿ ಐಕ್ಯತೆಯಿಲ್ಲದ ರಾಜಕೀಯ ಬೆಳವಣಿಗೆ ಒಂದು ದುರಂತವಾಗಿದೆ. ರಾಜ್ಯದಲ್ಲಿ ಮೂರು ರಾಜಕೀಯ ಪಕ್ಷಗಳು ಹಾಗೂ ಅನೇಕ ಕನ್ನಡಪರ ಸಂಘ- ಸಂಸ್ಥೆಗಳಿದ್ದರೂ ಈ ಎಲ್ಲರೂ ಒಟ್ಟಿಗೆ ಸೇರಿ ಒಂದು ನಿರ್ಣಯಕ್ಕೆ ಬರುವ ಪ್ರವೃತ್ತಿಯನ್ನು ಬೆಳೆಸಿಕೊಂಡಿಲ್ಲ. ಈ ವಿಚಾರವಾಗಿ ನಾನು ಯಾರನ್ನೂ ದೂರುವುದಿಲ್ಲ. ಅವರವರ ಭಾವನೆಗಳಿಗೆ ತಕ್ಕಂತೆ ಕೆಲಸ ಮಾಡುತ್ತಿದ್ದಾರೆ ಎಂದರು.
ಕರ್ನಾಟಕ ಸರಕಾರ ಹತ್ತು ಸಾವಿರ ಕ್ಯೂಸೆಕ್ಸ್ ನೀರನ್ನು ಐದು ದಿನ ಬಿಡುತ್ತೇವೆಂದು ಹೇಳಿದ್ದರು. ಈಗ ತಮಿಳುನಾಡಿನವರು ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ ನ್ಯಾಯಾಲಯ ನೀವೂ ಬದುಕಿ ಅವರನ್ನು ಬದುಕಲು ಬಿಡಿ ಎಂದು ತೀರ್ಪು ನೀಡಿದೆ. ಸಾಂಬಾ ಬೆಳೆಗೆ ತೊಂದರೆಯಾಗಿರುವ ಕಾರಣ ನೀರಿನ ಅಗತ್ಯತೆಯಿದೆ ಎಂದು ತಮಿಳುನಾಡಿನವರು ವಾದ ಮಂಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನೀರು ಹರಿಸುವುದು ಅನಿವಾರ್ಯವಾಗಿದೆ.
50 ವರ್ಷದ ದಾಖಲೆಗಳ ಪ್ರಕಾರ ತಮಿಳುನಾಡಿನಲ್ಲಿ 1 ವರ್ಷವೂ ಕೂಡಾ ನಾರ್ಥ್ ಈಸ್ಟ್ ಮಾನ್ಸೂನ್ ಕೈಕೊಟ್ಟಿಲ್ಲ. ಹಾಗಾಗಿ ಅವರಿಗೆ ನೀರಿನ ಸಮಸ್ಯೆ ಉದ್ಭವಿಸುವುದಿಲ್ಲ ಈಗ ನ್ಯಾಯಾಲಯದ ಆದೇಶದ ಪ್ರಕಾರ ನೀರು ಹರಿಸಿದರೆ ತಾಲೂಕು ಕೇಂದ್ರ, ಜಿಲ್ಲಾ ಕೇಂದ್ರ ಸೇರಿದಂತೆ ರಾಜ್ಯದ ಪ್ರತೀ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಎದುರಾಗುವ ಸಾಧ್ಯತೆಗಳಿವೆ. ರಾಜ್ಯದ ಬಹುತೇಕ ನಾಲೆಗಳು ಒಣಗಿ ಹೋಗಿವೆ. ರಾಜ್ಯದ ರೈತರು ಬೆಳೆ ಉಳಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ ಎಂದರು.
ತಮಿಳುನಾಡಿನವರು ವರ್ಷಕ್ಕೆ 3 ಬೆಳೆ ಬೆಳೆಯುತ್ತಾರೆ. ಅವರಿಗೆ ನವೆಂಬರ್ ಕೊನೆಯವರೆಗೆ ಮಳೆ ಬೀಳುತ್ತದೆ. ಇವುಗಳನ್ನೆಲ್ಲಾ ನ್ಯಾಯಾಧೀಕರಣದ ಮುಂದೆ ಹೇಳಬೇಕಿತ್ತು. ಈಗ ಅವರಿಗೆ ನೀರು ಕೊಡದಿದ್ದರೆ ನಾವು ತೊಂದರೆಗೆ ಸಿಲುಕಬೇಕಾಗುತ್ತದೆ. ನಾನು ಯಾರ ಮೇಲೂ ಆಪಾದನೆ ಮಾಡುವುದಿಲ್ಲ. ಸರ್ವ ಪಕ್ಷಗಳ ಸಭೆ ಸಂದಭರ್ದಲ್ಲೂ ಇದೇ ವಿಚಾರವನ್ನು ತಿಳಿಸುವ ಮೂಲಕ ತೀರ್ಪಿನ ವಿರುದ್ಧ ಹೋಗಲು ಸಾಧ್ಯವಿಲ್ಲ ಎಂದು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ ಎಂದರು.
ತಮಿಳುನಾಡಿನಲ್ಲಿ ಎಷ್ಟೇ ರಾಜಕೀಯ ಪಕ್ಷಗಳಿದ್ದರೂ ಅವರ ನಡುವೆ ಎಷ್ಟೇ ವೈರತ್ವವಿದ್ದರೂ ಇಂತಹ ವಿಚಾರಗಳಲ್ಲಿ ಎಲ್ಲರೂ ಸೇರಿ ಒಂದು ನಿಲುವು ತೆಗೆದುಕೊಳ್ಳುತ್ತಾರೆ. ತಮಿಳುನಾಡಿನವರು ಕಾವೇರಿ ವಿಚಾರವಾಗಿ ಈವರೆಗೂ ಒಡಕಿನ ಶಬ್ದವನ್ನು ಹೊರಹಾಕಿಲ್ಲ. ರಾಜಕೀಯ ಪೈಪೋ ಟಿಯನ್ನು ಬದಿಗಿಟ್ಟು ಹೋರಾಟ ಮಾಡುತ್ತಾರೆ. ನಮ್ಮಲ್ಲಿ ಒಂದೇ ಧ್ವನಿಯಲ್ಲಿ ಯಾರೂ ಮಾತನಾಡುತ್ತಿಲ್ಲ. ಇದರಿಂದಾಗಿ ಪ್ರತಿಕೂಲ ವಾತಾವರಣ ನಿರ್ಮಾಣವಾಗುತ್ತಿದೆ. ಬಡ, ದಲಿತ ಕುಟುಂಬಗಳಿಂದ ಧರಣಿ
ನಿವೇಶನ ಒದಗಿಸಲು ಗ್ರಾಮಸ್ಥರು ಒತ್ತಾಯ
ಚಿಕ್ಕಮಗಳೂರು, ಸೆ.7: ಗ್ರಾಮದಲ್ಲಿರುವ ಸರಕಾರಿ ಜಮೀನಿನಲ್ಲಿ ಗ್ರಾಮದ ಬಡ ಮತ್ತು ದಲಿತ ಕುಟುಂಬಗಳಿಗೆ ನಿವೇಶನ ಒದಗಿಸುವಂತೆ ಒತ್ತಾಯಿಸಿ ಕೂದುವಳ್ಳಿ ಗ್ರಾಮದ ಗ್ರಾಮಸ್ಥರು ಬುಧವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ತಾಲೂಕಿನ ವಸ್ತಾರೆ ಹೋಬಳಿಯ ಕೂದುವಳ್ಳಿ ಗ್ರಾಮದಲ್ಲಿ ಸುಮಾರು 150ಕ್ಕೂ ಹೆಚ್ಚು ದಲಿತ ಕುಟುಂಬಗಳು ವಾಸವಾಗಿದು,್ದ ತಮ್ಮ ಪೂರ್ವಿಕರ ಕಾಲದಿಂದಲೂ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಸರಕಾರದಿಂದ ದಲಿತ ಬಡವರಿಗೆ ಮಂಜೂರಾದ ಆಶ್ರಯ ಮನೆಗಳು ನಿವೇಶನಗಳಿಲ್ಲದೇ ಸರಕಾರಕ್ಕೆ ವಾಪಸಾಗುತ್ತಿವೆ.
ಗ್ರಾಮದ ಸ.ನಂ 168ರಲ್ಲಿ 70 ಎಕರೆ ಸರಕಾರಿ ಜಮೀನಿದ್ದು, ಈ ಭೂಮಿಯಲ್ಲಿ ದಲಿತ ಬಡ ಕುಟುಂಬಗಳಿಗೆ ನಿವೇಶನ ಒದಗಿಸಿ, ಇನ್ನುಳಿದ ಜಾಗದಲ್ಲಿ ದನಕರುಗಳ ಮೇವಿಗೆ ಮತ್ತು ಸ್ಮಶಾನ ಭೂಮಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕು ಂದು ಮನವಿಯಲ್ಲಿ ತಿಳಿಸಿದ್ದಾರೆ.
ಕಳೆದ ಹತ್ತು ವರ್ಷಗಳಿಂದಲೂ ಮನವಿ ಪತ್ರ ನೀಡುವುದರ ಮೂಲಕ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸರಕಾರದ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಗ್ರಾಮದಲ್ಲಿ ಸರಕಾರಿ ಭೂಮಿಯಿದ್ದರೂ ಭೂರಹಿತರಿಗೆ ಹಂಚಲು ಆಗದೆ ಇರುವಂತಹ ಸ್ಥ್ಥಿತಿ ಗ್ರಾಮ ಪಂಚಾಯತ್‌ಗೆ ಒದಗಿದೆ ಎಂದು ಪ್ರತಿಭಟನಾಕಾರರು ತಿಳಿಸಿದರು.
ಪ್ರತಿಭಟನೆಯಲ್ಲಿ ದಲಿತ ಮುಖಂಡ ಬಾಲಕೃಷ್ಣ, ಗ್ರಾಮದ ಮುಖಂಡರುಗಳಾದ ಮಂಜುನಾಥ್, ಯೋಗೇಶ್, ಸುರೇಶ್, ರಂಗನಾಥ್, ಕುಮಾರ್ ಮತ್ತಿತರರು ಉಪಸ್ಥಿತರಿದ್ದರು.







