ದುಲೀಪ್ ಟ್ರೋಫಿ: ಇಂಡಿಯಾ ಬ್ಲೂ ಫೈನಲ್‌ಗೆ
ಗ್ರೇಟರ್‌ನೊಯ್ಡ, ಸೆ.7: ಇಂಡಿಯಾ ಗ್ರೀನ್ ವಿರುದ್ಧ ಪಂದ್ಯ ಡ್ರಾನಲ್ಲಿ ಕೊನೆಗೊಂಡಿದ್ದರೂ ಮೊದಲ ಇನಿಂಗ್ಸ್‌ನ ಮುನ್ನಡೆಯ ಆಧಾರದಲ್ಲಿ ಇಂಡಿಯಾ ಬ್ಲೂ ತಂಡ ದುಲೀಪ್ ಟ್ರೋಫಿಯಲ್ಲಿ ಫೈನಲ್‌ಗೆ ತಲುಪಿದೆ.
ಬ್ಲೂ ತಂಡ ಫೈನಲ್‌ನಲ್ಲಿ ಇಂಡಿಯಾ ರೆಡ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಬ್ಲೂ ತಂಡ ಮಯಾಂಕ್ ಅಗರವಾಲ್, ಜಾಕ್ಸನ್ ಹಾಗೂ ಚೇತೇಶ್ವರ ಪೂಜಾರ ಶತಕದ ನೆರವಿನಿಂದ 707 ರನ್ ಗಳಿಸಿತ್ತು. ಗ್ರೀನ್ ತಂಡವನ್ನು ಕೇವಲ 237 ರನ್‌ಗೆ ಆಲೌಟ್ ಮಾಡಿದ್ದ ಬ್ಲೂ ಮೊದಲ ಇನಿಂಗ್ಸ್‌ನಲ್ಲಿ 470 ರನ್ ಮುನ್ನಡೆ ಸಾಧಿಸಿತ್ತು. .
Next Story





