ಡಿ.12ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಕೇಜ್ರಿವಾಲ್-ಸಿಸೋಡಿಯಾಗೆ ಆದೇಶ
ಹೊಸದಿಲ್ಲಿ, ಸೆ.7: ಇಲ್ಲಿ ನಡೆಸಿದ ಚಳವಳಿ ಯೊಂದರ ವೇಳೆ ಪ್ರತಿಬಂಧಕಾಜ್ಞೆ ಉಲ್ಲಂಘಿಸಿದ ಹಾಗೂ ಸಾರ್ವಜನಿಕ ಸೇವಕ ರಿಗೆ ಕರ್ತವ್ಯ ನಿರ್ವಹಿಸಲು ಅಡ್ಡಿಪಡಿಸಿದ ಆರೋಪಿಗಳಾದ ದಿಲ್ಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಹಾಗೂ ಎಎಪಿ ನಾಯಕ ಸಂಜಯ್ ಸಿಂಗ್‌ರಿಗೆ ಡಿಸೆಂಬರ್‌ನಲ್ಲಿ ನಗರದ ನ್ಯಾಯಾಲಯವೊಂದರ ಮುಂದೆ ಹಾಜರಾಗುವಂತೆ ಇಂದು ಆದೇಶ ನೀಡಲಾಗಿದೆ.
ನಗರ ನ್ಯಾಯಾಧೀಶ ಹರ್ವಿಂದರ್ ಸಿಂಗ್ ಈ ಆದೇಶ ನೀಡಿದ್ದು, ಆರೋಪಿಗಳಿಗೆ ಸ್ವತಃ ಹಾಜರಾತಿಯಿಂದ ವಿನಾಯಿತಿ ನೀಡಿದ್ದಾರೆ.
ವಿಚಾರಣೆಯ ವೇಳೆ ಇತರ ಎಎಪಿ ನಾಯಕರಾದ ರಾಖಿಬಿರ್ಲಾ, ಸೋಮನಾಥ ಭಾರ್ತಿ ಹಾಗೂ ಆಶುತೋಷ್ ನ್ಯಾಯಾ ಲಯದಲ್ಲಿ ಹಾಜರಿದ್ದರು.
ನ್ಯಾಯಾಲಯವು ಮುಂದಿನ ವಿಚಾರಣೆ ಯನ್ನು ಡಿ.12ಕ್ಕೆ ನಿಗದಿಪಡಿಸಿದೆ.
ದಿಲ್ಲಿ ಪೊಲೀಸರು ಪ್ರಕರಣದ ಸಂಬಂಧ ಆರೋಪ ಪಟ್ಟಿ ದಾಖಲಿಸಿದ್ದು, ಎಲ್ಲ ಆರೋಪಿಗಳನ್ನೂ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ.
Next Story





