ಥಾಣೆ: ವ್ಯಕ್ತಿಯನ್ನು ಥಳಿಸಿ ಕೊಂದ ‘ಅರ್ಚಕ’
ಥಾಣೆ,ಸೆ.7: ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದನೆನ್ನ ಲಾದ 25ರ ಹರೆಯದ ಯುವಕನೋರ್ವನನ್ನು ಅರ್ಚಕ ಸೇರಿದಂತೆ ಮೂವರು ಥಳಿಸಿ ಕೊಂದಿರುವ ಘಟನೆ ಥಾಣೆ ಜಿಲ್ಲೆಯ ಉಲ್ಲಾಸ ನಗರದಲ್ಲಿ ನಡೆದಿದೆ. ಈ ಪೈಕಿ ಅರ್ಚಕ ಯುವಕನನ್ನು ತಾನು ಮಾಟಮಂತ್ರಗಳ ಮೂಲಕ ಗುಣಪಡಿಸುವುದಾಗಿ ಹೇಳಿಕೊಂಡಿದ್ದ.
ಅರ್ಚಕನ ಮಾತನ್ನು ನಂಬಿದ್ದ ಸಂತೋಷ ಸೂರ್ಯ ವಂಶಿಯ ಕುಟುಂಬದವರು ಆತನನ್ನು ಮಂಗಳವಾರ ಬೆಳಗಿನ ಜಾವ ದೇವಸ್ಥಾನವೊಂದರ ಸಮೀಪದ ಅರ್ಚಕನ ಮನೆಗೆ ಕರೆದೊಯ್ದಿದ್ದರು. ಗಂಟೆಗಳ ಕಾಲ ಯುವಕನನ್ನು ದಿಗ್ಬಂಧನದಲ್ಲಿರಿಸಿದ್ದ ಅರ್ಚಕ,ಆತನ ಪುತ್ರ ಮತ್ತು ತೃತೀಯ ಲಿಂಗಿಯೋರ್ವ ಸೇರಿಕೊಂಡು ದೆವ್ವವನ್ನು ಬಿಡಿಸುವ ನೆಪದಲ್ಲಿ ದೊಣ್ಣೆ, ಕಬ್ಬಿಣದ ಸರಳು ಮತ್ತು ಬೆಲ್ಟ್‌ಗಳಿಂದ ಆತನನ್ನು ಥಳಿಸಿ ಚಿತ್ರಹಿಂಸೆ ನೀಡಿದ್ದರು. ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ಥಾಣೆ ಪೊಲೀಸ್ ವಕ್ತಾರೆ ಸುಖದಾ ನಾರ್ಕರ್ ತಿಳಿಸಿದರು.
ಮೂವರೂ ಆರೋಪಿಗಳನ್ನು ಉಲ್ಲಾಸ ನಗರ ಪೊಲೀಸರು ಬಂಧಿಸಿದ್ದಾರೆ.
Next Story





