ನೇತಾಜಿ ಕಾರು ದುರಸ್ತಿ ಆರಂಭ
ಕೋಲ್ಕತಾ, ಸೆ.7: ಆಗಿನ ಬ್ರಿಟಿಷ್ ಸರಕಾರದಿಂದ ಗೃಹಬಂಧನಕ್ಕೊಳಗಾಗಿದ್ದ ನೇತಾಜಿ ಸುಭಾಶ್ಚಂದ್ರ ಬೋಸ್, 1941ರಲ್ಲಿ ತನ್ನ ಪೂರ್ವಿಕರ ಮನೆಯಿಂದ ‘ಮಹಾಪಲಾಯನ’ ಮಾಡಲು ಬಳಸಿದ್ದ ಕಾರನ್ನು ಅವರ ಕುಟುಂಬವೀಗ ದುರಸ್ತಿ ಮಾಡಿಸುತ್ತಿದೆ.
ನೇತಾಜಿಯವರ ಇಲ್ಲಿನ ಪೂರ್ವಿಕರ ಮನೆಯಲ್ಲಿ ನಿಲ್ಲಿಸಲಾಗಿರುವ ಈ ನಾಲ್ಕು ಬಾಗಿಲುಗಳ ಜರ್ಮನ್ ವಾಂಡರರ ಸೆಡಾನ್ ಕಾರಿನ ದುರಸ್ತಿಗೆ ಜರ್ಮನಿಯ ವಾಹನ ತಯಾರಿಕೆ ಸಂಸ್ಥೆ ಆಡಿಯನ್ನು ನೇಮಿಸಲಾಗಿದೆಯೆಂದು ನೇತಾಜಿ ರಿಸರ್ಚ್ ಬ್ಯೂರೊದ(ಎನ್‌ಆರ್‌ಬಿ) ಅಧಿಕಾರಿಗಳು ತಿಳಿಸಿದ್ದಾರೆ.
ಅವರೀಗ ಪಯಿಟಿಂಗ್, ಹಳೆ ಬಿಡಿಭಾಗಗಳ ಬದಲಾವಣೆ ಇತ್ಯಾದಿ ಕೆಲಸಗಳನ್ನು ಆರಂಭಿಸಿದ್ದಾರೆ. ಭಾರೀ ರಾಷ್ಟ್ರೀಯ ಮಹತ್ವವಿರುವ ಕಾರಿನ ಆಯುಷ್ಯ ಹೆಚ್ಚಿಸುವುದು ತಮ್ಮ ಏಕೈಕ ಬಯಕೆಯಾಗಿದೆ. ಅದು 100 ಅಥವಾ 200 ಮೀ.ಗಳಷ್ಟು ಸಣ್ಣ ದೂರವನ್ನು ಕ್ರಮಿಸುವಷ್ಟು ಶಕ್ತವಾಗಬೇಕೆಂಬುದು ತಮ್ಮ ಬಯಕೆಯಾಗಿದೆಯೆಂದು ಎನ್‌ಆರ್‌ಬಿಯ ಕಾರ್ಯದರ್ಶಿ ಕಾರ್ತಿಕ್ ಚಕ್ರವರ್ತಿ ಹೇಳಿದ್ದಾರೆ.
ಡಿಸೆಂಬರ್‌ನೊಳಗೆ ಕಾರು ದುರಸ್ತಿ ಪೂರ್ಣಗೊಳ್ಳುವ ನಿರೀಕ್ಷೆಯಿದೆಯೆಂದು ಅವರು ತಿಳಿಸಿದ್ದಾರೆ.





