ವಲಸಿಗರನ್ನು ತಡೆಯಲು 4 ಮೀಟರ್ ಎತ್ತರದ ಗೋಡೆ
ಲಂಡನ್, ಸೆ. 7: ವಲಸಿಗರು ಟ್ರಕ್‌ಗಳ ಮೇಲೆ ಹಾರುವುದನ್ನು ತಡೆಯುವುದಕ್ಕಾಗಿ ಉತ್ತರದ ಫ್ರಾನ್ಸ್‌ನ ಕ್ಯಾಲೈಸ್ ಬಂದರಿನಲ್ಲಿ ಗೋಡೆ ನಿರ್ಮಿಸುವ ಕಾರ್ಯವನ್ನು ಬ್ರಿಟನ್ ಆರಂಭಿಸಲಿದೆ ಎಂದು ಆಂತರಿಕ ಸಚಿವಾಲಯ ಬುಧವಾರ ತಿಳಿಸಿದೆ.
ನಾಲ್ಕು ಮೀಟರ್ ಎತ್ತರ ಮತ್ತು ಒಂದು ಕಿಲೋಮೀಟರ್ ಉದ್ದದ ತಡೆ ಗೋಡೆಯನ್ನು ಬಂದರಿನ ಸಂಪರ್ಕ ರಸ್ತೆಯಲ್ಲಿ ಕಟ್ಟಲಾಗುವುದು. ನಿರ್ಮಾಣ ಕಾರ್ಯ ಈ ತಿಂಗಳಲ್ಲಿ ಆರಂಭಗೊಳ್ಳುವುದು ಹಾಗೂ ಈ ವರ್ಷದ ಕೊನೆಯ ವೇಳೆಗೆ ಪೂರ್ಣಗೊಳ್ಳುವುದು ಎಂದು ಅಧಿಕಾರಿಗಳು ತಿಳಿಸಿದರು.
ಫ್ರಾನ್ಸ್‌ನೊಂದಿಗೆ ಮಾರ್ಚ್ ತಿಂಗಳಲ್ಲಿ ಮಾಡಿಕೊಂಡ ಒಪ್ಪಂದದಂತೆ, ಗೋಡೆ ನಿರ್ಮಾಣದ ವೆಚ್ಚವನ್ನು ಬ್ರಿಟನ್ ಸರಕಾರ ಭರಿಸುವುದು. ಯುರೋಪ್‌ಗೆ ಭಾರೀ ಸಂಖ್ಯೆಯಲ್ಲಿ ವಲಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ, ಯುರೋಪ್‌ನಲ್ಲಿ ತಲೆಎತ್ತುತ್ತಿರುವ ಇನ್ನೊಂದು ಗೋಡೆ ಇದಾಗಲಿದೆ. ಈ ಗೋಡೆಗೆ 2.7 ಮಿಲಿಯ ಯುರೋ (ಸುಮಾರು 20 ಕೋಟಿ ರೂಪಾಯಿ) ವೆಚ್ಚ ತಗಲುತ್ತದೆ ಎಂದು ಅಂದಾಜಿಸಲಾಗಿದೆ.
Next Story





