ಮಹಿಳೆಯರ ಪ್ರವೇಶ: ಸುಪ್ರೀಂಕೋರ್ಟ್ ಹೇಳಿದರೂ ಸಾಧ್ಯವಿಲ್ಲ ಎಂದ ಶಬರಿಮಲೆ ಪ್ರಧಾನ ಕಾರ್ಯದರ್ಶಿ
.jpg)
ತಿರುವನಂತಪುರಂ,ಸೆ.8: ಆಚಾರನುಷ್ಠಾನಗಳಿಗೆ ವಿರುದ್ಧವಾಗಿ ಶಬರಿಮಲೆಗೆ ಮಹಿಳೆಯರ ಪ್ರವೇಶ ಸುಪ್ರೀಂಕೋರ್ಟ್ ಬಯಸಿದರೂ ಸಾಧ್ಯವಿಲ್ಲ ಎಂದು ಶಬರಿಮಲೆ ಅಯ್ಯಪ್ಪ ಸೇವಾಸಮಾಜಂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸ್ವಾಮಿ ಅಯ್ಯಪ್ಪ ದಾಸ್ ಹೇಳಿದ್ದಾರೆ. ಆಚಾರಗಳು ಅನುಷ್ಠಾನಮಾಡಲಿಕ್ಕಿರುವುದಾಗಿದೆ. ಅವು ಹೇರಿಕೆ ನಡೆಸಲಿಕ್ಕಿರುವುದಲ್ಲ. ವಿಶ್ವಾಸಗಳು ಮತ್ತು ಪ್ರಮಾಣಗಳಿಗೆ ಅದರದ್ದೇ ಆದ ಪ್ರಾಮುಖ್ಯತೆಗಳಿವೆ. ಅವುಗಳನ್ನು ಉಲ್ಲಂಘಿಸಿ ಕೆಲವರು ತಮ್ಮ ಹಿತಾಸಕ್ತಿಗಳನ್ನು ಹೇರಿಕೆ ಮಾಡಲು ಯತ್ನಿಸಿದರೆ ಭಕ್ತರು ವಿರೋಧಿಸಲಿದ್ದಾರೆ. ಶಬರಿಮಲೆ ವಿಷಯವನ್ನು ಪರಿಗಣಿಸುವಾಗ ಸುಪ್ರೀಂಕೋರ್ಟ್ ಈ ವಿಷಯವನ್ನು ಕೂಡ ಗಮನಿಸುತ್ತದೆ ಎಂದು ನಿರೀಕ್ಷೆಯಿದೆ ಎಂದು ಅಯ್ಯಪ್ಪದಾಸ್ ಹೇಳಿದ್ದಾರೆ. ಶಬರಿಮಲೆ ಮಹಿಳಾ ಪ್ರವೇಶಕ್ಕೆ ಅನುಮತಿಸಬಹುದೆಂಬ ಸರಕಾರಿ ನಿಲುವನ್ನು ಪ್ರತಿಭಟಿಸಿ ಹಿಂದೂ ಐಖ್ಯ ವೇದಿಕೆ ಸೆಕ್ರಟರಿಯೇಟ್‌ಗೆ ನಡೆಸಿದ ಮಾರ್ಚ್‌ನ್ನು ಉದ್ಘಾಟಿಸಿ ಅಯ್ಯಪ್ಪದಾಸ್ ಈ ರೀತಿ ಹೇಳಿದ್ದಾರೆ.
ಇತರ ಧರ್ಮೀಯರ ವಿಶ್ವಾಸಗಳ ರಕ್ಷಣೆಗೆ ಸರಕಾರ ಮುಂದೆ ಬರುವಾಗ ಹಿಂದೂ ಸಮಾಜವನ್ನು ಮಾತ್ರ ನಿರ್ಲಕ್ಷಿಸುತ್ತಿರುವುದು ಪ್ರತಿಭಟನಾರ್ಹವಾಗಿದೆ ಎಂದು ಅಯ್ಯಪ್ಪದಾಸ್ ಹೇಳಿದ್ದಾರೆ.ಮುಸ್ಲಿಂ ಮಹಿಳೆಯರು ಹಜ್ ಮತ್ತು ಉಮ್ರಾದಲ್ಲಿ ಭಾಗವಹಿಸಬಹುದು. ಅವರು ಆಧ್ಯಾತ್ಮಿಕ ಕಾರ್ಯಕ್ಕಾಗಿ ಅವರು ಮಕ್ಕಕ್ಕೆ ಹೋಗುತ್ತಾರೆ. ಆದರೆ ಮರಳಿ ಬಂದ ಮೇಲೆ ಅವರಿಗೆ ಮಸೀದಿ ಪ್ರವೇಶವನ್ನು ನಿಷೇಧಿಸಲಾಗುತ್ತದೆ.ಈ ವಿಷಯದಲ್ಲಿ ಯಾರಿಗೂ ಭಿನ್ನಾಭಿಪ್ರಾಯಗಳಿಲ್ಲ. ಹಿಂದೂಗಳ ವಿಷಯದಲ್ಲಿ ಮಾತ್ರ ಯಾಕೆ ಪ್ರತ್ಯೇಕ ಹಿತಾಸಕ್ತಿಯಿದೆ ಎಂದು ಅವರು ಪ್ರಶ್ನಿಸಿದ್ದಾರೆ. ಇದರ ವಿರುದ್ಧ ಭಕ್ತರು ಒಗ್ಗಟ್ಟಾಗಿರಬೇಕೆಂದು ಅಯ್ಯಪ್ಪದಾಸ್ ಕರೆನೀಡಿದ್ದಾರೆಂದು ವರದಿಯಾಗಿದೆ.







