1200 ಕೋಳಿಗಳನ್ನು ಕೊಂದು ಹಾಕಿದ ಬೀದಿ ನಾಯಿಗಳು
ಮಾಳ,ಸೆ.8: ಕುಯೂರು ತುಂಬರಶ್ಶೇರಿಯಲ್ಲಿ ಬೀದಿನಾಯಿಗಳು ಫಾರ್ಮ್‌ಕೋಳಿಗಳನ್ನು ಸಾಮೂಹಿಕವಾಗಿ ಕೊಂದು ಹಾಕಿದ ಘಟನೆ ನಡೆದಿದೆ. ಕುಯೂರು ತುಂಶ್ಶೇರಿ ಪುದುಕ್ಕಾಡನ್ ಮುಕುಂದನ್‌ರ ಕೋಳಿಸಾಕಣೆ ಕೇಂದ್ರಕ್ಕೆ ನುಗ್ಗಿದ ನಾಯಿಗಳ ಗುಂಪು ಕೋಳಿಗಳನ್ನು ಸರ್ವನಾಶ ಮಾಡಿ ಪರಾರಿಯಾಗಿವೆ ಎಂದು ವರದಿಯಾಗಿದೆ.
ಸುಮಾರು ಹದಿನೈದು ದಿವಸ ಪ್ರಾಯವಾಗಿದ್ದ ಒಟ್ಟು 1,200ಕೋಳಿಗಳನ್ನು ನಾಯಿಗಳು ಕೊಂದಿವೆ. ಬುಧವಾರ ಬೆಳಗ್ಗೆ ಏಳುಗಂಟೆಗೆ ಈ ಘಟನೆ ನಡೆದಿದ್ದು ಗುಂಪಾಗಿ ಬಂದ ಬೀದಿನಾಯಿಗಳು ಕೋಳಿ ಫಾರ್ಮ್‌ಗೆ ಹಾಕಿದ್ದ ಬಲೆಯನ್ನು ಕಿತ್ತುಹಾಕಿ ಒಳನುಗ್ಗಿದ್ದವು. ನಾಯಿ ಮತ್ತು ಕೋಳಿಗಳ ಕೂಗುಕೇಳಿ ಫಾರ್ಮ್ ಮಾಲಕ ಮುಕುಂದನ್ ಧಾವಿಸಿ ಬಂದಿದ್ದು,ನಾಯಿಗಳನ್ನು ಓಡಿಸಿದ್ದಾರೆ ಎಂದು ವರದಿ ತಿಳಿಸಿದೆ
Next Story





