2000ಕ್ಕೂ ಹೆಚ್ಚು ಜಾನುವಾರುಗಳ ಮಾರಾಟ: ಏಳು ಕೋಟಿ ವಹಿವಾಟು

ಪೆರುಂಬಾವೂರ್, ಸೆಪ್ಟಂಬರ್ 8: ಜಿಲ್ಲೆಯ ಹಳೆಯ ಜಾನುವಾರು ಸಂತೆಯಾದ ಪೆರುಂಬಾವೂರ್ ಸಂತೆಯಲ್ಲಿ ಬಕ್ರೀದ್ ಪ್ರಯುಕ್ತ ಜಾನುವಾರುಗಳ ಹರಾಜು ದಾಖಲೆಯ ಮೊತ್ತಕ್ಕೆ ನಡೆದಿದೆ ಎಂದು ವರದಿಯಾಗಿದೆ. ಏಳುಕೋಟಿ ರೂಪಾಯಿ ಮೊತ್ತದ ಜಾನುವಾರುಗಳು ಮಾರಾಟವಾಗಿದೆ. ಮಂಞಪೆಟ್ಟಿ ನಿವಾಸಿ ಅನಸ್ ತನ್ನ ಕೋಣವನ್ನು 1,65,000 ರೂಪಾಯಿಗೆ ಮಾರಿದ್ದಾರೆ. ಅಡಿಮಾಲಿಯ ವ್ಯಕ್ತಿಗಳನ್ನು ಇದನ್ನು ಖರೀದಿಸಿದ್ದಾರೆ. 2000ದಷ್ಟು ಜಾನುವಾರುಗಳು ಸಂತೆಯಲ್ಲಿ ಮಾರಾಟವಾಗಿದೆ. ಅಸ್ಸಾಂ, ಒಡಿಸ್ಸಾ, ತಮಿಳ್ನಾಡುಗಳಿಂದ ಇಲ್ಲಿಗೆ ಜಾನುವಾರು ಸಾಗಾಟ ನಡೆಸಲಾಗಿದೆ.
ಪೆರುಂಬಾವೂರ್ ಜಾನುವಾರು ಸಂತೆ ಹಿಂದಿನಕಾಲದಿಂದಲ್ಲೇ ಪ್ರಸಿದ್ಧಿಯನ್ನು ಪಡೆದುಕೊಂಡಿದೆ. ವರ್ಷಗಳುದ್ದಕ್ಕೂ ನಡೆಯುವ ಸಂತೆಯ ನಿರ್ವಹಣೆಯನ್ನು ನಗರಸಭೆ ಹರಾಜು ಹಾಕಿ ಇತರರಿಗೆ ವಹಿಸಿಕೊಡುತ್ತಿದೆ. ಪೆರುಂಬಾವೂರು ಸಂತೆಯನ್ನು ಚಾಯಮ್ಮಾಡಿ ಮುಹಮ್ಮದ್ ಮತ್ತು ಪುತ್ರ ಈ ಸಲ ನಡೆಸುತ್ತಿದ್ದಾರೆ.ಪೆರುಂಬಾವೂರ್ ಸಂತೆ ಕೇರಳದಲ್ಲಿ ಅಳಿದುಳಿದ ಪ್ರಾಚೀನ ಸಂತೆಗಳಲ್ಲೊಂದು ಆಗಿದೆ.
ಕರ್ನಾಟಕದಿಂದ ಜಾನುವಾರು ತರುವುದನ್ನು ಈ ಬಾರಿ ನಿಷೇಧಿಸಿರುವುದರಿಂದಾಗಿ ಈ ಸಲ ಜಾನುವಾರುಗಳು ಸಂಖ್ಯೆ ಸ್ವಲ್ಪ ಕಡಿಮೆಯಿತ್ತೆಂದು ವರದಿ ತಿಳಿಸಿದೆ.







