ಡಿ.ಕೆ.ಎಸ್.ಸಿ ಆಲ್ ಖೊಬರ್ ಘಟಕದಿಂದ ಹಿರಿಯ ಉದ್ಯಮಿ ಜನಾಬ್ ಮಹಮ್ಮದ್ ಶರೀಫ್ ಬಜ್ಪೆರವರಿಗೆ ಸನ್ಮಾನ

ದಕ್ಷಿಣ ಕರ್ನಾಟಕ ಸುನ್ನಿ ಸೆಂಟರಿನ ಎಲ್ಲಾ ಕಾರ್ಯಗಳಿಗೆ ಉದಾರ ಮನಸ್ಸಿನಿಂದ ಸಹಾಯ ಮಾಡುತ್ತಿರುವ ಹಾಗೂ ದೀನೀ ಪ್ರಿಯರು ಮತ್ತು ಹಿರಿಯ ಉದ್ಯಮಿ ಆದ ಜನಾಬ್ ಮಹಮ್ಮದ್ ಶರೀಫ್ ಬಜ್ಪೆ, ಅಲ್ ಕೋಬರ್ ರವರು ಕುಟುಂಬ ಸಮೇತ ಪವಿತ್ರ ಹಜ್ ಯಾತ್ರೆಗೆ ಹೋಗುವ ಸಂದರ್ಭದಲ್ಲಿ ಅವರಿಗೆ ಡಿ.ಕೆ.ಎಸ್.ಸಿ ಅಲ್ ಕೋಬರ್ ಘಟಕದ ಪರವಾಗಿ ದಿನಾಂಕ 6/9/2016 ರ ಮಂಗಳವಾರ ರಾತ್ರಿ 9 ಗಂಟೆಗೆ ಡಿ.ಕೆ.ಎಸ್.ಸಿ ಅಲ್ ಕೋಬರ್ ಕಚೇರಿಯಲ್ಲಿ ಸನ್ಮಾನ ಸಮಾರಂಭವನ್ನು ಎರ್ಪಾಡಿಸಲಾಗಿತ್ತು.
ಅಲ್ ಕೋಬರ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಹಮಾನ್ ಪಾಣಜೆರವರ ದುವಾ ದೊಂದಿಗೆ ಸಭೆಯು ಆರಂಭವಾಯಿತು. ಡಿ.ಕೆ.ಎಸ್.ಸಿ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರು ಮತ್ತು ಅಲ್ ಕೋಬರ್ ಘಟಕದ ಓರ್ಗನೈಸರು ಆದ ಜನಾಬ್ ಜೈನುದ್ದೀನ್ ವಿಟಲ್ ರವರು ಸಭೆಗೆ ಬಂದಂತಹ ಉದ್ಯಮಿ ಜನಾಬ್ ಮಹಮ್ಮದ್ ಶರೀಫ್ ಮತ್ತು ದಮ್ಮಾಮ್ ವಲಯ ಸಮಿತಿಯಿಂದ ಬಂದಂತಹ ಇಕ್ಬಾಲ್ ಮಳ್ಳುರುರವರನ್ನು ಸ್ವಾಗತ್ತಿಸುತ್ತಾ ಜನಾಬ್ ಮಹಮ್ಮದ್ ಶರೀಫ್ ಬಜ್ಪೆ ರವರ ಪವಿತ್ರ ಹಜ್ ಮಕ್ಬುಲ್ ಮಬ್ರುರಾಗಲಿ ಎಂದು ದುವಾ ಮಾಡಿದರು. ಅಲ್ ಕೋಬರ ಘಟಕದ ಅಧ್ಯಕ್ಷರಾದ ಜನಾಬ್ ಅಬ್ದುಲ್ ರಹಮಾನ್ ಪಾಣಜೆ ರವರು ಮಾತನಾಡಿ ಸದಕ ಧಾನ ಧರ್ಮ ಮಾಡುವವರಿಗೆ ಅಲ್ಲಾಹು ತಕ್ಕದಾದ ಪ್ರತಿಫಲ ಖಂಡಿತವಾಗಿಯು ನೀಡಿಯೇ ನೀಡುತ್ತಾನೆ ಎಂದು ಉದಾರಹಣೆ ಸಹಿತ ವಿವರಿಸಿದರು. ಸುನ್ನಿ ಸೆಂಟರ್ ಗೆ ಎಲ್ಲಾ ಕಾರ್ಯದಲ್ಲೂ ಉದಾರ ಮನಸ್ಸಿನಿಂದ ಸಹಾಯ ಮಾಡುತ್ತಿರುವ ಜನಾಬ್ ಮಹಮ್ಮದ್ ಶರೀಫ್ ಬಜ್ಪೆರವರನ್ನು ಪ್ರಶಂಸಿಸುತ್ತಾ ಮುಂದೆ ಕೂಡ ದಾನ ದರ್ಮ ಕಾರ್ಯಕ್ಕೆ ಉದಾರ ಮನಸ್ಸು ನೀಡಲಿ ಎಂದು ಪ್ರಾರ್ಥಿಸಿದರು.
ಜನಾಬ್ ಇಕ್ಬಾಲ್ ಮಳ್ಳುರು ಮಾತನಾಡಿ ಅಲ್ ಕೋಬರ್ ಘಟಕದ ಕಾರ್ಯ ವೈಖರಿಯನ್ನು ಪ್ರಶಂಸಿಸುತ್ತಾ ನಮ್ಮ 5 ನೆ ಫರ್ಳ್ ಕಾರ್ಯ ಹಜ್ಜ್ ಎಂದು ವಿವರಿಸುತ್ತ ಇಬ್ರಾಯಿಂ ನೆಬಿ (ಅಲೈಸಲಾಂ) ರವರ ಕರೆಯೊಲೆಗೆ ಒಗೊಟ್ಟು ನಮೆಗೆಲ್ಲಾರಿಗೂ ಹಜ್ ನೆರವೇರಿಸಲು ಅಲ್ಲಾಹು ಅನುಕೂಲ ಮಾಡಿ ಕೊಡಲಿ ಎಂದು ದುವಾ ಮಾಡಿದರು. ನಂತರ ಜನಾಬ್ ಮಹಮ್ಮದ್ ಶರೀಫ್ ಬಜ್ಪೆ ರವರಿಗೆ ಶಾಲು ಹೋದಿಸಿ ಸನ್ಮಾನ ಮಾಡಲಾಯಿತು.
ಸಭೆಯಲ್ಲಿ ಅಲ್ ಕೋಬರ ಘಟಕದ ಅಧ್ಯಕ್ಷರಾದ ಅಬ್ದುಲ್ ರಹಮಾನ್ ಪಾಣಜೆ , ಉಪಾಧ್ಯಕ್ಷರಾದ ಉಮ್ಮರ್ ರೋಯಲ್ ಪ್ರಧಾನ ಕಾರ್ಯಧರ್ಶಿ ಮಹಮ್ಮದ್ ರೋಯಲ್ ಉಪ ಕಾರ್ಯದರ್ಶಿ ಹಸನ್ ಕೊಟ್ಟಿಗೆರೆ , ಖಜಾಂಚಿ ಹನೀಫ್ ಮೂಡಿಗೆರೆ ಮತ್ತು ಒರ್ಗಾನೈಸರಾದ ಜೈನುದ್ದೀನ್ ವಿಟಲ್ , ಉಸ್ಮಾನ್ ಅರಮೆಕ್ಸ್, ಮತ್ತು ಇಸ್ಮಾಯಿಲ್ ಅರಮೆಕ್ಸ್ ಉಪಸ್ಥಿತರಿದ್ದರು.







