ನಿಖಾಬ್ ಧರಿಸಿದ್ದ ಎಂಟು ತಿಂಗಳ ಗರ್ಭಿಣಿಯ ಹೊಟ್ಟೆಗೆ ತುಳಿದ ದುಷ್ಕರ್ಮಿಗಳು !
.jpg&MaxW=780&imageVersion=16by9&NCS_modified=20160908154506.jpeg)
ಬಾರ್ಸಿಲೋನ, ಸೆ. 8 : ನಿಖಾಬ್ ( ಮುಖ ಮುಚ್ಚುವ ಬಟ್ಟೆ) ಧರಿಸಿದ್ದನ್ನು ಸಹಿಸದ ಬಲಪಂಥೀಯ ದುಷ್ಕರ್ಮಿಗಳು ಎಂಟು ತಿಂಗಳ ಗರ್ಭಿಣಿಯೊಬ್ಬರ ಮೇಲೆ ಹಲ್ಲೆ ನಡೆಸಿ ಆಕೆಯ ಹೊಟ್ಟೆಗೆ ತುಳಿದ ಆಘಾತಕಾರಿ ಘಟನೆ ಇತ್ತೀಚಿಗೆ ಇಲ್ಲಿ ನಡೆದಿದೆ.
ತನ್ನ ಪತಿ ಹಾಗು ಇಬ್ಬರು ಮಕ್ಕಳೊಂದಿಗೆ ಈ ಗರ್ಭಿಣಿ ಮಹಿಳೆ ನಡೆದುಕೊಂಡು ಹೋಗುತ್ತಿರುವಾಗ ಈ ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಇದನ್ನು ತಡೆಯಲು ಬಂದ ಆಕೆಯ ಪತಿಯ ಮೇಲೆಯೂ ಈ ದುಷ್ಕರ್ಮಿಗಳು ಕೈ ಮಾಡಿದ್ದಾರೆ.
ಈ ಸಂಬಂಧ ಪೊಲೀಸರು ಇಬ್ಬರನ್ನು ವಶಕ್ಕೆ ತೆಗೆದೊಕೊಂಡು ಅವರ ಮೇಲೆ ದ್ವೇಷ ಹಲ್ಲೆ, ಗಾಯ ಮಾಡಿರುವ ಹಾಗು ಬೇಧ ಭಾವ ಮಾಡಿರುವ ಆರೋಪ ಹಾಕಿದ್ದಾರೆ.
ಇತ್ತೀಚಿಗೆ ಇಂತಹ ದ್ವೇಷ ಹಲ್ಲೆ ಪ್ರಕರಣಗಳು ಸ್ಪೇನ್ ನಲ್ಲಿ ತೀವ್ರವಾಗಿ ಹೆಚ್ಚುತ್ತಿವೆ. ಸ್ಪ್ಯಾನಿಷ್ ಫೆಡೆರೇಶನ್ ಆಫ್ ಇಸ್ಲಾಮಿಕ್ ರಿಲಿಜಿಯಸ್ ಎಂಟಿಟೀಸ್ ನ ಮುಖ್ಯಸ್ಥ ಮುನೀರ್ ಬ್ಯಾಂಜೇಲೊನ್ ಅವರು ಕಳೆದ ವರ್ಷ ಈ ರೀತಿಯ ಒಟ್ಟು 534 ಪ್ರಕರಣಗಳು ನಡೆದಿವೆ ಎಂದು ಹೇಳಿದ್ದಾರೆ.
Next Story





