ತವರಿನಲ್ಲೇ ' ಜನರಲ್ ಡಯರ್ , ಗೋ ಬ್ಯಾಕ್ ' ಪೋಸ್ಟರ್
ಅಮಿತ್ ಶಾ ಕಾರ್ಯಕ್ರಮದಲ್ಲಿ ಪಟೇಲರಿಂದ ಭಾರೀ ಪ್ರತಿಭಟನೆ

ಸೂರತ್ , ಸೆ. ೮ : ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಭಾಗವಹಿಸಿದ್ದ ತಮ್ಮ ಸಮುದಾಯದ ಸಭೆಯೊಂದರಲ್ಲಿ ಪಾಟೀದಾರರು ಪೀಠೋಪಕರಣಗಳನ್ನು ಎಳೆದಾಡಿ, ಷಾ ವಿರೋಧಿ ಹಾಗು ಹಾರ್ದಿಕ್ ಪಟೇಲ್ ಪರ ಘೋಷಣೆ ಕೂಗಿರುವ ಘಟನೆ ಗುರುವಾರ ನಡೆದಿದೆ. ಇದಕ್ಕೂ ಮೊದಲು ಸೂರತ್ ನ ಹಲವೆಡೆ ' ಜನರಲ್ ಡಯರ್ ( ಜಲಿಯನ್ ವಾಲಾ ಬಾಗ್ ಹತ್ಯಾಕಾಂಡ ಮಾಡಿಸಿದ ಬ್ರಿಟಿಷ್ ಅಧಿಕಾರಿ ) , ಗೋ ಬ್ಯಾಕ್ ' ಎಂಬ ಪೋಸ್ಟರ್ ಗಳು ಅಮಿತ್ ಶಾರನ್ನು ಸ್ವಾಗತಿಸಿವೆ.
ಗುಜರಾತ್ ನ ಹೊಸ ಸರಕಾರದಲ್ಲಿ ಪಟೇಲ್ ಸಚಿವರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಅಮಿತ್ ಷಾ ಭಾಗವಹಿಸಿದ್ದರು. ಆದರೆ ಈ ಹಿಂದೆ ಬಿಜೆಪಿಯ ಪ್ರಬಲ ಬೆಂಬಲಿಗರಾಗಿದ್ದು, ಇದೀಗ ಮೀಸಲಾತಿಯ ವಿಷಯದಲ್ಲಿ ಪಕ್ಷದ ಕಟು ವಿರೋಧಿಗಳಾಗಿ ಮಾರ್ಪಟ್ಟಿರುವ ಪಾಟಿದಾರರು ( ಪಟೇಲರು ) ಇಡೀ ಕಾರ್ಯಕ್ರಮವನ್ನು ಗೊಂದಲದ ಗೂಡಾಗಿಸಿಬಿಟ್ಟರು.
ಸಭಿಕರನ್ನು ಶಾಂತವಾಗಿರುವಂತೆ ಮತ್ತು ಕಾರ್ಯಕ್ರಮ ಮುಗಿಯುವವರೆಗೆ ಕುಳಿತುಕೊಳ್ಳುವಂತೆ ಬಿಜೆಪಿ ನಾಯಕರು ಕೆಳೆಕೊಂಡರೂ ಅದನ್ನು ಯಾರೂ ಗಣನೆಗೆ ತೆಗೆದುಕೊಳ್ಳಲಿಲ್ಲ.
Next Story





