ವೇಳಾಪಟಿ್ಟ ಬದಲಾವಣೆ
ಬೆಂಗಳೂರು, ಸೆ.8: ಕೆಪಿಎಸ್ಸಿ ಪ್ರಸಕ್ತ ಸಾಲಿನ ದ್ವಿತೀಯ ಅಧಿವೇಶನದ ಇಲಾಖಾ ಪರೀಕ್ಷೆಗಳಿಗೆ ಈಗಾಗಲೇ ಅರ್ಜಿ ಆಹ್ವಾನಿಸಿ ಅಧಿಸೂಚನೆ ಹೊರಡಿಸಿದ್ದು, ಕಾರಣಾಂತರಗಳಿಂದ ಕೆಲವು ಇಲಾಖಾ ಪರೀಕ್ಷೆಗಳನ್ನು ಮುಂದೂಡಲಾಗಿದೆ.
ಸೆ.2ರಂದು ಅಖಿಲ ಭಾರತ ಕಾರ್ಮಿಕ ಮುಷ್ಕರಕ್ಕೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಇಲಾಖಾ ಅಧಿವೇಶನ ಪರೀಕ್ಷೆಯನ್ನು ಸೆ.19ಕ್ಕೆ ನಡೆಸಲಾಗುವುದು, ಸೆ.9ರ ಕರ್ನಾಟಕ ಬಂದ್‌ಗೆ ಕರೆ ಕೊಟ್ಟ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಪರೀಕ್ಷೆಯನ್ನು ಸೆ.20ಕ್ಕೆ ಹಾಗೂ ಬಕ್ರೀದ್ ಸೆ.12ರ ಬದಲು ಸೆ.13ರಂದು ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ ಅಂದು ನಡೆಯಬೇಕಿದ್ದ ಇಲಾಖಾ ಅಧಿವೇಶನ ಪರೀಕ್ಷೆಯನ್ನು ಸೆ.12ರಂದು ನಡೆಸಲು ಉದ್ದೇಶಿಸಲಾಗಿದೆ.
ಅಭ್ಯರ್ಥಿಗಳು ಈಗಾಗಲೇ ಆಯೋಗದ ವೆಬ್‌ಸೈಟ್‌ನಿಂದ ಡೌನ್‌ಲೋಡ್ ಮಾಡಿಕೊಂಡಿರುವ ಪ್ರವೇಶ ಪತ್ರಗಳನ್ನೇ ಹಾಜರುಪಡಿಸಿ ಹಂಚಿಕೆ ಮಾಡಲಾದ ಸಂಬಂಧಿಸಿದ ಪರೀಕ್ಷಾ ಉಪಕೇಂದ್ರಗಳಲ್ಲಿಯೇ ಹಾಜರಾಗಲು ಸೂಚಿಸಿದೆ. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಆಯೋಗದ ದೂರವಾಣಿ ಸಂಖ್ಯೆ- 3057 4944, 45, 3057 5153, 2226 8356ನ್ನು ಹಾಗೂ ಆಯೋಗದ ವೆಬ್‌ಸೈಟ್‌ನ್ನು ಸಂಪರ್ಕಿಸಬಹುದಾಗಿದೆ.





