ಕೆಪಿಎಸ್ಸಿ ಪರೀಕ್ಷೆ ಪ್ರವೇಶ ಪತ್ರ
ಬೆಂಗಳೂರು, ಸೆ.8: ಕೆಪಿಎಸ್ಸಿ ಸೆ.18ರಂದು ನಡೆಸುವ ಕರ್ನಾಟಕ ರಾಜ್ಯ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಇಲಾಖೆಯಲ್ಲಿನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ‘ಎ’ ವೃಂದದ ಒಟ್ಟು 25 ಹುದ್ದೆಗಳ ಪೂರ್ವಭಾವಿ ಪರೀಕ್ಷೆಯ ಪ್ರವೇಶ ಪತ್ರವನ್ನು ಅಭ್ಯಥಿಗಳಿಗೆ ರವಾನಿಸಲಾಗಿದೆ.
ತಮ್ಮ ಅರ್ಜಿಯ ಲಾಗ್‌ಇನ್ ಐ.ಡಿ. ಮತ್ತು ಪಾಸ್‌ವರ್ಡ್‌ನ್ನು ಬಳಸಿ ಆಯೋಗದ ವೆಬ್‌ಸೈಟ್(ಠಿಠಿ://ಠ್ಚ.ಚ್ಟ.್ಞಜ್ಚಿ.ಜ್ಞಿ)ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಪೂರ್ವಭಾವಿ ಪರೀಕ್ಷೆಯನ್ನು ಗಣಕಯಂತ್ರದ ಮೂಲಕ ನೇಮಕಾತಿ ಪರೀಕ್ಷೆ (ಇಟಞಟ್ಠಠಿಛ್ಟಿ ಆಛಿ ್ಕಛ್ಚ್ಟ್ಠಿಜಿಠಿಞಛ್ಞಿಠಿ ಛಿಠಿಇಆ್ಕ
)ಮುಖಾಂತರ ನಡೆಸಲು ಆಯೋಗವು ತೀರ್ಮಾನಿಸಿರುತ್ತದೆ. ಅಭ್ಯರ್ಥಿಗಳಿಗೆ ಈ ಸಂಬಂಧ ಸೂಚನೆಗಳನ್ನು ಹಾಗೂ ಅಣುಕು ಪರೀಕ್ಷೆಯನ್ನು ತೆಗೆದುಕೊಳ್ಳುವ ಬಗ್ಗೆ ಮಾಹಿತಿಯನ್ನು ಆಯೋಗದ ಅಂತರ್ಜಾಲದಲ್ಲಿ ಪ್ರಕಟಿಸಲಾಗಿದೆ. ಪೂರ್ವಭಾವಿ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಕಡ್ಡಾಯವಾಗಿ ಯಾವುದಾದರೂ ಒಂದು ಮೂಲ ಗುರುತಿನ ಚೀಟಿ (ಣ್ಟಜಿಜಜ್ಞಿಚ್ಝ ಐಛ್ಞಿಠಿಜ್ಛಿಜ್ಚಿಠಿಜಿಟ್ಞ ಇಚ್ಟ) (ಟ್ಟಠಿ/ಅಘೆ ಇಚ್ಟ/್ಖಟಠಿಛ್ಟಿ ಐ.ಈ./ಅಚ್ಟ ಖಿ.ಐ.ಈ/ಎಟಛ್ಟ್ಞಿಞಛ್ಞಿಠಿ ಉಞಟ್ಝಟಛ್ಟಿ ಐಈ./ಈ್ಟಜಿಜ್ಞಿಜ ಔಜ್ಚಿಛ್ಞಿಛಿ
) ನಕಲು ಪ್ರತಿ ಅಥವಾ ಸ್ಕ್ಯಾನ್ ಪ್ರತಿಯನ್ನು ಅನುಮತಿಸಲಾಗುವುದಿಲ್ಲ. ಈ ಮೇಲೆ ಸೂಚಿಸಿರುವ ಒಂದು ಮೂಲ ಗುರುತಿನ ಚೀಟಿಯನ್ನು ಹಾಜರುಪಡಿಸದಿದ್ದಲ್ಲಿ ಪರೀಕ್ಷೆಗೆ ಹಾಜರಾಗಲು ಅನುಮತಿಸಲಾಗುವುದಿಲ್ಲವೆಂದು ಆಯೋಗದ ಪ್ರಕಟಣೆ ತಿಳಿಸಿದೆ.





