Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಹಾಶಿಂಪುರ ಹತ್ಯಾಕಾಂಡ

ಹಾಶಿಂಪುರ ಹತ್ಯಾಕಾಂಡ

ಮೆಹ್ತ್ತಾಬ್ ಆಲಂಮೆಹ್ತ್ತಾಬ್ ಆಲಂ8 Sept 2016 11:08 PM IST
share
ಹಾಶಿಂಪುರ ಹತ್ಯಾಕಾಂಡ

ಮೂರು ದಶಕಗಳ ನಂತರ ಪೊಲೀಸ್ ಅಕಾರಿಯೊಬ್ಬರು ಬಿಚ್ಚಿಟ್ಟ ಸಂಪೂರ್ಣ ಕತೆ

ನಿವೃತ್ತ ಐಪಿಎಸ್ ಅಕಾರಿ ವಿಭೂತಿ ನಾರಾಯಣ್ ರೈ ತಮ್ಮ ಪುಸ್ತಕ ‘ಹಾಶಿಂಪುರ 22ಮೇ’ಯಲ್ಲಿ ಹತ್ಯಾಕಾಂಡದ ಸಂಪೂರ್ಣ ಚಿತ್ರಣವನ್ನು ಬದುಕುಳಿದವರ ಹೇಳಿಕೆಗಳು, ದಾಖಲೆಗಳು ಮತ್ತು ತಮ್ಮ ಸ್ವಂತ ನೆನಪುಗಳ ಜೊತೆಗೆ ಹೆಣೆದಿದ್ದಾರೆ. 2015ರ ಮಾರ್ಚ್12ರಂದು ದಿಲ್ಲಿಯ ಸೆಷನ್ಸ್ ನ್ಯಾಯಾಲಯವು ಹಾಶಿಂಪುರ ಹತ್ಯಾಕಾಂಡದ ಎಲ್ಲಾ 16 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಗೊಳಿಸಿತು. ಸ್ವತಂತ್ರ ಭಾರತದಲ್ಲಿ ನಡೆದ ಅತ್ಯಂತ ಘನಘೋರ ಹತ್ಯಾಕಾಂಡ ಪ್ರಕರಣಗಳಲ್ಲಿ ಒಂದಾಗಿರುವ ಹಾಶಿಂಪುರ ಪ್ರಕರಣ ನಡೆದಿದ್ದು 1987ರ ಮೇ 22ರಂದು. ಇದೇ ಮೊದಲ ಬಾರಿಗೆ ಅಷ್ಟೊಂದು ದೊಡ್ಡ ಪ್ರಮಾಣದಲ್ಲಿ ಕಸ್ಟಡಿಯಲ್ಲಿ ನಡೆದ ಹತ್ಯಾ ಪ್ರಕರಣ ಇದಾದ ಕಾರಣ ಈ ಪ್ರಕರಣವು ಭಿನ್ನವಾಗಿತ್ತು. ಕುಖ್ಯಾತ ಪ್ರಾಂತೀಯ ಸಶಸ ಪೊಲೀಸ್ ಪಡೆಯು 42 ಮುಸ್ಲಿಂ ಯುವಕರನ್ನು ಹತ್ಯೆ ಮಾಡಿತ್ತು. ತೀರ್ಪು ದುಃಖಕರ ಮತ್ತು ನಮ್ಮ ಅಪರಾ ನ್ಯಾಯ ವ್ಯವಸ್ಥೆಯ ಮೇಲೆ ಮತ್ತೊಂದು ಪ್ರಹಾರವಾಗಿದ್ದರೂ ಆಶ್ಚರ್ಯಕರ ಅಥವಾ ಆಘಾತಕಾರಿಯಂತೂ ಆಗಿರಲಿಲ್ಲ. ಯಾಕೆಂದರೆ ಘಟನೆ ನಡೆದ ಮೊದಲ ದಿನದಿಂದಲೇ ಸರಕಾರ ಮತ್ತು ಅದಕ್ಕೆ ಸಂಬಂಧಪಟ್ಟವರು ತಮ್ಮ ಅಕಾರಿಗಳನ್ನು ರಕ್ಷಿಸಲು ಎಲ್ಲ ಪ್ರಯತ್ನಗಳನ್ನೂ ನಡೆಸಿದ್ದರು. 

ಎಷ್ಟರ ಮಟ್ಟಿಗೆಯೆಂದರೆ ಸಾಕ್ಷ್ಯಾಧಾರಗಳನ್ನು ನಾಶ ಮಾಡಿ, ಸಾಕ್ಷಿಗಳನ್ನು ಮತ್ತು ಬದುಕುಳಿದವರನ್ನು ಸುಳ್ಳುಗಾರರು ಎಂದು ಕರೆಯುವ ಮೂಲಕ ಮತ್ತು ತನಿಖೆ ಮತ್ತು ನ್ಯಾಯ ಪ್ರಕ್ರಿಯೆಗೆ ಅಸಹಕಾರ ತೋರುವ ಮೂಲಕ ಅಂಥದ್ದೊಂದು ಘಟನೆ ನಡೆದೇ ಇಲ್ಲ ಎಂದು ನಿರೂಪಿಸಲು ಹೊರಟಿದ್ದರು, ಈ ಕಾರಣಗಳಿಂದ ನ್ಯಾಯಾಲಯದಲ್ಲಿ ಪ್ರಕರಣವು ಮೂರು ದಶಕಗಳ ಕಾಲ ಎಳೆಯಲ್ಪಟ್ಟು ಅಂತಿಮವಾಗಿ ಯಾವುದೇ ಲಿತಾಂಶವಿಲ್ಲದೆ ಕೊನೆಗೊಂಡಿತು. ‘ಹಾಶಿಂಪುರ 22 ಮೇ’ ಹತ್ಯಾಕಾಂಡ ಹೇಗೆ ನಡೆಯಿತು, ಯಾರೆಲ್ಲಾ ಭಾಗಿಯಾಗಿದ್ದರು, ಬದುಕುಳಿದವರ ಮೇಲೆ ಮತ್ತು ನ್ಯಾಯ ವ್ಯವಸ್ಥೆಯ ಮೇಲೆ ಇದರಿಂದಾದ ಪರಿಣಾಮವೇನು ಎಂಬುದಕ್ಕೆ ಸವಿವರವಾಗಿ ಉತ್ತರಿಸಲು ಪ್ರಯತ್ನಿಸುತ್ತದೆ. ಲೇಖಕ ವಿಭೂತಿ ನಾರಾಯಣ್ ರೈ ಉತ್ತರ ಪ್ರದೇಶದ ಐಪಿಎಸ್ ಅಕಾರಿಯಾಗಿದ್ದು ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಅವರೊಬ್ಬ ಖ್ಯಾತ ಹಿಂದಿ ಕಾದಂಬರಿಕಾರ ಮತ್ತು ಲೇಖಕರಾಗಿದ್ದಾರೆ. ರೈ ತಮ್ಮ ಸೇವಾವಯಲ್ಲಿ ವಿಶಿಷ್ಟ ಸೇವೆಗಾಗಿ ರಾಷ್ಟ್ರಪತಿಗಳ ಪೊಲೀಸ್ ಚಿನ್ನದ ಪದಕ ಮತ್ತು ಶ್ಲಾಘನೀಯ ಸೇವೆಗಾಗಿ ಪೊಲೀಸ್ ಚಿನ್ನದ ಪದಕವನ್ನು ಗಳಿಸಿದ್ದಾರೆ. ಅವರು 2008ರಿಂದ 2014ರ ವರೆಗೆ ಮಹಾತ್ಮಾ ಗಾಂ ಅಂತಾರಾಷ್ಟ್ರೀಯ ಹಿಂದಿ ವಿಶ್ವವಿದ್ಯಾನಿಲಯದ ಉಪಕುಲಪತಿಗಳಾಗಿ ಸೇವೆ ಸಲ್ಲಿಸಿದ್ದಾರೆ. ಘಟನೆ ನಡೆದ ಸಮಯದಲ್ಲಿ ರೈ ಗಾಝಿಯಾಬಾದ್‌ನ ಪೊಲೀಸ್ ವರಿಷ್ಠಾಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಈ ಜಿಲ್ಲೆ ಹತ್ಯಾಕಾಂಡ ನಡೆದ ಪ್ರದೇಶಕ್ಕೆ ಸಮೀಪವಾಗಿದ್ದು ರೈಯವರೇ ಎ್ಐಆರ್ ದಾಖಲಿಸಿದ್ದರು. ಹಿಂದಿಯಲ್ಲಿರುವ ಈ ಪುಸ್ತಕವು ಹತ್ಯಾಕಾಂಡದ ಜೊತೆಗೆ ವ್ಯವಸ್ಥೆಯ ಜೊತೆಗಿರುವ ಆದರೂ ಅದರ ವಿರುದ್ಧವಾಗಿರುವ ಪೊಲೀಸ್ ಅಕಾರಿಯೊಬ್ಬರ ಬಗ್ಗೆಯೂ ತಿಳಿಸುತ್ತದೆ.

ಹತ್ಯಾಕಾಂಡ ಮತ್ತು ಅದರ ನಂತರ ನಡೆದ ಘಟನೆಗಳಿಂದ ಅವರು ಎಷ್ಟು ಘಾಸಿಗೊಂಡಿದ್ದರೆಂದರೆ ಒಬ್ಬ ಉತ್ತಮ ಸಾಹಿತಿಯಾದರೂ ಈ ಪುಸ್ತಕವನ್ನು ಬರೆದು ಮುಗಿಸಲು ಅವರಿಗೆ ವರ್ಷಗಳೇ ಬೇಕಾದವು. ಒಂದು ನೆನಪಿನ ಪುಸ್ತಕದಂತೆ ಬರೆಯಲಾಗಿರುವ ಈ ಪುಸ್ತಕವು ಹತ್ಯಾಕಾಂಡದಿಂದ ಮಾತ್ರವಲ್ಲ ಅದರ ಸಂತ್ರಸ್ತರಿಗೆ ನ್ಯಾಯವನ್ನು ತಿರಸ್ಕರಿಸಿದ ರೀತಿಯಿಂದ ಆಘಾತಕ್ಕೊಳಗಾಗಿರುವ ಓರ್ವ ಪೊಲೀಸ್ ಅಕಾರಿಯ ದಿನಚರಿಯಂತೆ ಭಾಸವಾಗುತ್ತದೆ. ಅವರು ತಮ್ಮ ಹತಾಶೆ ಮತ್ತು ಅಸಹಾಯಕತೆಯ ಬಗ್ಗೆ ಖಿನ್ನರಾಗಿ ಈ ಪುಸ್ತಕದಲ್ಲಿ ಬರೆದಿದ್ದಾರೆ. ‘‘ಈ ಘಟನೆಯ ದೈತ್ಯತೆ ಅದೆಷ್ಟು ಅಗಾಧವಾಗಿತ್ತೆಂದರೆ ಅದು ನನ್ನನ್ನು ಎಲ್ಲಾ ರೀತಿಯಿಂದಲೂ ಆವರಿಸಿತ್ತು ಮತ್ತು ನಾನು ಸರಿಯಾದ ಶಬ್ದಗಳಿಗಾಗಿ ತಡಕಾಡುವಂತಾಗಿತ್ತು. ನಾನು ಎಷ್ಟೊಂದು ಕುಗ್ಗಿ ಹೋಗಿದ್ದೇನೆಂದರೆ ಅದು ನನ್ನನ್ನು ಯಾವತ್ತೂ ಆಗದಷ್ಟು ನಿಧಾನಗೊಳಿಸಿತ್ತು. ಕೆಲವೊಂದು ಸಲ ನಾನು ಒಂದು ಪುಟ ಕೂಡಾ ಬರೆದು ಮುಗಿಸಲಾಗದಷ್ಟು ಅದು ನನ್ನ ಮೇಲೆ ಪ್ರಭಾವ ಬೀರಿತ್ತು ಎಂದು ಬರೆಯುವ ರೈ, ಸರಿಯಾದ ಶಬ್ದಗಳನ್ನು ಕಂಡುಕೊಳ್ಳುವ ಹೊತ್ತಿಗೆ ಮಡಿದವರ ಪ್ರೇತಗಳು ನನ್ನ ಮೇಲೆ ಪ್ರಭಾವಿಗಳಾಗುತ್ತಿದ್ದವು ಎಂದು ಸೇರಿಸುತ್ತಾರೆ.

ಪುಸ್ತಕವು ಆ ನತದೃಷ್ಟ ರಾತ್ರಿ ಏನು ನಡೆಯಿತು, ಲೇಖಕರಿಗೆ ಈ ಘಟನೆಯ ಬಗ್ಗೆ ಹೇಗೆ ತಿಳಿಯಿತು, ಘಟನಾಸ್ಥಳದಲ್ಲಿ ಅವರು ಏನನ್ನು ಕಂಡರು ಮತ್ತು ಪಿಎಸಿ ಶಿಬಿರದಲ್ಲಿ ಏನು ಕಂಡುಬಂತು ಮತ್ತು ಕೇಂದ್ರ ಮತ್ತು ರಾಜ್ಯ ಸರಕಾರಗಳ ಪ್ರತಿಕ್ರಿಯೆಗಳು-ಈ ಬಗ್ಗೆ ಕೂಲಂಕಷವಾದ ವಿವರಣೆಯನ್ನು ನೀಡುತ್ತದೆ. ಲೇಖಕರ ಪ್ರಥಮ ತನಿಖಾ ವರದಿಯ ಜೊತೆಗೆ ಪುಸ್ತಕದಲ್ಲಿ ಸಂತ್ರಸ್ತರ ಸಂಕಷ್ಟದ ಕಥಾನಕಗಳು, ಅವರ ಬಂಧನ ಮತ್ತು ಬಿಡುಗಡೆ ಮತ್ತು ಇನ್ನೂ ಹಲವರ ಹತ್ಯೆ ಎಲ್ಲದರ ಬಗ್ಗೆಯೂ ಉಲ್ಲೇಖವಿದೆ. ಸ್ವಾತಂತ್ರೋತ್ತರ ಭಾರತದಲ್ಲಿ ನಡೆದ ಅತ್ಯಂತ ದೊಡ್ಡ ಕಸ್ಟೋಡಿಯಲ್ ಕಿಲ್ಲಿಂಗ್‌ನ ಸಂತ್ರಸ್ತರನ್ನು ಪ್ರಜಾಪ್ರಭುತ್ವದ ಮೂರು ಆಧಾರಸ್ತಂಭಗಳು ಯಾವ ರೀತಿಯಲ್ಲಿ ವಿವಿಧ ಮಟ್ಟದಲ್ಲಿ ವಂಚಿಸಿತು ಎಂಬ ಬಗ್ಗೆಯೂ ರೈ ಪುಸ್ತಕದಲ್ಲಿ ವಿವರಿಸುತ್ತಾರೆ. ಲೇಖಕರ ಶಬ್ದಗಳಲ್ಲಿ ಹಾಶಿಂಪುರ ಹತ್ಯಾಕಾಂಡದ ಕತೆಯು ಭಾರತೀಯ ಸರಕಾರ ಮತ್ತು ಅಲ್ಪಸಂಖ್ಯಾತರ ನಡುವಿನ ಸಂಬಂಧದ, ಪೊಲೀಸರ ಅನೈತಿಕ ಮನೋಭಾವದ ಮತ್ತು ಹತಾಶಮಯ ಜಡ ನ್ಯಾಯಾಂಗ ವ್ಯವಸ್ಥೆಯ ಕಥಾನಕವಾಗಿದೆ. ರೈ ಪ್ರಕಾರ ‘‘ಹಾಶಿಂಪುರವು ವಿವೇಚನಾರಹಿತ ಸರಕಾರಿ ಪಡೆಯ ನಿರ್ದಯಿ ಮತ್ತು ಕೊಲೆಗಾರರಾದ ತಮ್ಮದೇ ಜನರ ಮುಂದೆ ಅಪೌರುಷರಂತೆ ಮಲಗಿರುವ ರಾಜಕೀಯ ಅವಕಾಶವಾದಿ ಸರಕಾರಕ್ಕೆ ಒಂದು ಅಪಮಾನಕರ ಉದಾಹರಣೆಯಾಗಿದೆ.’’

ತೀರ್ಪಿನ ಬಗ್ಗೆ ವಿವರಿಸುತ್ತಾ ಲೇಖಕರು ಹೇಳುತ್ತಾರೆ, ‘‘ತನಿಖೆ ಆರಂಭವಾದ ದಿನದಿಂದಲೂ ಸಿಐಡಿಯು ಅಪರಾಗಳನ್ನು ರಕ್ಷಿಸುವ ಕಾರ್ಯದಲ್ಲೇ ವ್ಯಸ್ತವಾಗಿತ್ತು ಎಂದು ಹೇಳಲು ನಾನು ಹಿಂಜರಿಯುವುದಿಲ್ಲ.’’ ಅವರು ಹೀಗೆ ಹೇಳಲು ಕಾರಣವೇನು ಎಂಬುದನ್ನು ಮುಂದಿನ ಶಬ್ದಗಳಲ್ಲಿ ವಿವರಿಸುತ್ತಾರೆ, ಈ ಪುಸ್ತಕವನ್ನು ಬರೆಯುವ ಮೊದಲು ನಾನು ಸಿಐಡಿ ನ್ಯಾಯಾಲಯದಲ್ಲಿ ಸಲ್ಲಿಸಿದ ದಾಖಲೆಗಳನ್ನು ಪರೀಕ್ಷಿಸಿದೆ. ಇದರಲ್ಲಿ ನಾನು ಹೆಚ್ಚು ಆಳವಾಗಿ ತೊಡಗಿಕೊಂಡಂತೆ, ಇಡೀ ತನಿಖೆಯು ಆರೋಪಿಗಳ ವಿರುದ್ಧದ ಆರೋಪವನ್ನು ಸಾಬೀತುಪಡಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರಲಿಲ್ಲ ಬದಲಿಗೆ ತನಿಖೆಯನ್ನು ದಾರಿತಪ್ಪಿಸುವ ಮತ್ತು ಆ ಮೂಲಕ ಯಾವುದೇ ನ್ಯಾಯಾಲಯ ಕೂಡಾ ಆರೋಪಿಗಳನ್ನು ಅಪರಾಗಳೆಂದು ತೀರ್ಪು ನೀಡಲು ಸಾಧ್ಯವಾಗದ ಸಂದರ್ಭಗಳನ್ನು ಸೃಷ್ಟಿಸುವಲ್ಲಿ ಮಗ್ನವಾಗಿದ್ದವು ಎಂಬುದು ನನ್ನ ಅರಿವಿಗೆ ಬಂತು. ನಿಜವಾಗಿ ಬಹಳಷ್ಟು ಬಾರಿ ನಾನು ಆಪಾದಿತರ ವಿರುದ್ಧವಾದ ದಾಖಲೆಗಳ ಬದಲಾಗಿ ಅವರ ಪರವಾದಿಗಳ ಉಲ್ಲೇಖಗಳನ್ನು ಓದುತ್ತಿದ್ದೇನೆಯೋ ಎಂಬ ಸಂಶಯ ನನಗೆ ಮೂಡಿದೆ, ಯಾಕೆಂದರೆ ಅವುಗಳಲ್ಲಿ ಆರೋಪಿಗಳ ಪರವಾಗಿ ಸ್ಪಷ್ಟನೆಗಳು ಮತ್ತು ವಿವರಣೆಗಳೇ ತುಂಬಿದ್ದವು.

’’ ಹಿಂದಿನ ಕೆಲಸಂದರ್ಭಗಳಲ್ಲಿ ರೈ ಈ ತೀರ್ಪಿನ ಬಗ್ಗೆ ಮುಖ್ಯ ಮಾತೊಂದನ್ನು ಹೇಳುತ್ತಾರೆ-‘‘ಈ ತೀರ್ಪು ದುರದೃಷ್ಟಕರವಾಗಿರಬಹುದು ಆದರೆ ಅನಿರೀಕ್ಷಿತವಂತೂ ಅಲ್ಲ. ಅದರ ಜೊತೆಗೆ ಆದರೆ ಎಲ್ಲಾ ಹದಿನಾರು ಆರೋಪಿಗಳು ನಾಚಿಕೆಯಿಂದ ತಲೆಕೆಳಗೆ ಮಾಡಿರುವಂತೆ ಅವರನ್ನು ಪೊಲೀಸ್ ವಾಹನದಲ್ಲಿ ಜೈಲಿಗೆ ಕೊಂಡೊಯ್ದಿದ್ದರೂ ನನಗೆ ಸಂತೋಷವಾಗುತ್ತಿರಲಿಲ್ಲ’’ ಎಂದು ಸೇರಿಸುತ್ತಾರೆ. ರೈ ಪ್ರಕಾರ ಇದಕ್ಕೆ ಕಾರಣವೇನೆಂದರೆ, ‘‘ಒಂದು ಸಾಮಾನ್ಯ ಉಪನಿರೀಕ್ಷಕನಿಗೆ ಕೇವಲ ತನ್ನ ಸಹೋದ್ಯೋಗಿಗಳ ಸಹಾಯದಿಂದ ಇಷ್ಟೊಂದು ದೊಡ್ಡ ಕಾರ್ಯಸೂಚಿಯನ್ನು ಕಾರ್ಯಗತಗೊಳಿಸಲು ಸಾಧ್ಯವಿಲ್ಲ. ಉಪನಿರೀಕ್ಷಕನಿಗೆ ಇಂತಹ ಭೀಕರ ನಿರ್ಧಾರವನ್ನು ತೆಗೆದುಕೊಳ್ಳುವ ಅಕಾರವೂ ಇರುವುದಿಲ್ಲ ಮತ್ತು ಯಾವುದೇ ತೊಂದರೆಯಾಗುವುದಿಲ್ಲ ಎಂಬ ಸ್ಪಷ್ಟ ಭರವಸೆಯ ಹೊರತಾಗಿ ಆತನ ಯಾವ ಸಹೋದ್ಯೋಗಿ ಕೂಡಾ ಆತನ ಆದೇಶವನ್ನು ಪಾಲಿಸುವುದಿಲ್ಲ’’ ಎಂದು ಲೇಖಕರು ತಿಳಿಸುತ್ತಾರೆ. ‘‘ಇಂತಹ ಒಂದು ಹೀನಾಯ ಕೃತ್ಯವನ್ನು ಎಸಗಲು ಮತ್ತು ಆಪರಾಗಳಿಗೆ ಯಾವುದೇ ಶಿಕ್ಷೆಯಾಗುವುದಿಲ್ಲ ಎಂಬ ಭರವಸೆಯು ಪ್ರಭಾವಿ ರಾಜಕಾರಣಿಯ ಕಚೇರಿಯಿಂದಲೇ ಬಂದಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ’’ ಎಂದು ಹೇಳುತ್ತಾರೆ ರೈ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಈ ಪುಸ್ತಕವು ಹಾಶಿಂಪುರ ಹತ್ಯಾಕಾಂಡದಲ್ಲಿ ಏನಾಯಿತು ಎಂಬ ಬಗ್ಗೆ ಕೇವಲ ಒಂದು ವಿವರಣೆಯಲ್ಲದೆ ನಮ್ಮ ವ್ಯವಸ್ಥೆಯಲ್ಲಿ ಮುಖ್ಯವಾಗಿ ಸರಕಾರಿ ಪ್ರಾಯೋಜಕರಿಂದ ಕೋಮುಗಲಭೆಗಳ ಸಂದರ್ಭದಲ್ಲಿ ನಿರ್ಭಿಡತೆಯನ್ನು ಯಾವ ರೀತಿ ನಡೆಸಲಾಗುತ್ತಿದೆ ಎಂಬುದರ ಬಗ್ಗೆ ಅತ್ಯಗತ್ಯವಾಗಿದ್ದ ಮತ್ತು ವ್ಯತ್ಯಾಸ ಹೊಂದಿರುವ ಹೇಳಿಕೆಗಳನ್ನು ಹೊಂದಿದೆ.

ಲೇಖಕರು ಇದಕ್ಕೆ ಸಂಬಂಧಪಟ್ಟ ಗಾಳಿಸುದ್ದಿಗಳು ಮತ್ತು ಅಪ್ರಮಾಣಿತ ಹೇಳಿಕೆಗಳನ್ನು ಪುಸ್ತಕದಲ್ಲಿ ಸೇರಿಸದಂತೆ ಹೆಚ್ಚು ಮುತುವರ್ಜಿಯನ್ನು ವಹಿಸಿದ್ದಾರೆ. ತಮ್ಮ ವಾದಗಳು ಮತ್ತು ಅಭಿಪ್ರಾಯಗಳನ್ನು ರುಜುವಾತುಪಡಿಸಲು ಅವರು ನ್ಯಾಯಾಲಯದ ದಾಖಲೆಗಳನ್ನು ನೆಚ್ಚಿಕೊಂಡಿದ್ದಾರೆ. ಮುಖ್ಯವಾಗಿ ಚಾರ್ಜ್‌ಶೀಟ್‌ಗಳು ಮತ್ತು ಪ್ರಕರಣದ ಡೈರಿ ಮತ್ತು ಸಂತ್ರಸ್ತರ ಹೇಳಿಕೆಗಳು ಮತ್ತು ಅವರ ಸ್ವಂತ ನೆನಪು. ಹಾಗಾಗಿ ಈ ಪುಸ್ತಕವನ್ನು ನಿವೃತ್ತಿಯ ನಂತರ ಸುದ್ದಿಯಲ್ಲಿರಲು ಬಯಸುವ ಓರ್ವ ಪೊಲೀಸ್ ಅಕಾರಿಯ ರಗಳೆ ಎಂದು ನಿರ್ಲಕ್ಷಿಸಲು ಸಾಧ್ಯವಿಲ್ಲ. ಹಾಶಿಂಪುರ 22ಮೇಯ ಹೊರತಾಗಿ ಹತ್ಯಾಕಾಂಡದ ವರ್ಷದ ನಂತರ ರೈ ಹಿಂದಿಯಲ್ಲಿ ಬರೆದಿರುವ ಕಾದಂಬರಿ ‘ಕರ್ಫ್ಯೂ ಇನ್ ದ ಸಿಟಿ’ ಕೂಡಾ ಓದಲು ಯೋಗ್ಯವಾದ ಪುಸ್ತಕ. 1980ರ ದಶಕದ ಹೈದರಾಬಾದ್ ಕತೆಯನ್ನು ಹೊಂದಿರುವ ಈ ಪುಸ್ತಕ ಕೋಮುಗಲಭೆಯ ಸಮಯದ ಜೀವನವನ್ನು ಪರಿಣಾಮಕಾರಿಯಾಗಿ ಬಿಚ್ಚಿಡುತ್ತದೆ.


 

share
ಮೆಹ್ತ್ತಾಬ್ ಆಲಂ
ಮೆಹ್ತ್ತಾಬ್ ಆಲಂ
Next Story
X