ಉಝ್ಬೆಕಿಸ್ತಾನದ ಉಸ್ತುವಾರಿ ಅಧ್ಯಕ್ಷರಾಗಿ ಪ್ರಧಾನಿ ಶೌಕತ್ ಮಿರ್ಝಿಯೊಯೆವ್

ಅಲ್ಮಾಟಿ, ಸೆ. 8: ಪ್ರಧಾನಿ ಶೌಕತ್ ಮಿರ್ಝಿಯೊಯೆವ್ ಅವರನ್ನು ಉಝ್ಬೆಕಿಸ್ತಾನದ ಉಸ್ತುವಾರಿ ಅಧ್ಯಕ್ಷರನ್ನಾಗಿ ದೇಶದ ಸಂಸತ್ತು ಗುರುವಾರ ನೇಮಿಸಿದೆ ಎಂದು ಸರಕಾರಿ ವೆಬ್‌ಸೈಟೊಂದು ವರದಿ ಮಾಡಿದೆ.
ಮುಂದೆ ಅವರೇ ದೀರ್ಘಾವಧಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಬಹುದು ಎಂಬ ಸೂಚನೆಯನ್ನು ಇದು ನೀಡಿದೆ.
ಸೆನೆಟ್ ನಾಯಕ ನಿಗ್ಮಟಿಲ್ಲ ಯುಲ್ಡಶೆವ್ ಅವರ ಬೆಂಬಲದೊಂದಿಗೆ 58 ವರ್ಷದ ಮಿರ್ಝಿಯೊಯೆವ್ ಉಸ್ತುವಾರಿ ಅಧ್ಯಕ್ಷರಾದರು. ಸಂವಿಧಾನದ ಪ್ರಕಾರ, ಚುನಾವಣೆ ನಡೆಯುವ ಮುನ್ನ ಸೆನೆಟ್ ನಾಯಕ ಉಸ್ತುವಾರಿ ಅಧ್ಯಕ್ಷರಾಗಬೇಕಾಗಿತ್ತು.
ಸುದೀರ್ಘ ಕಾಲ ದೇಶವನ್ನಾಳಿದ ಅಧ್ಯಕ್ಷ ಇಸ್ಲಾಮ್ ಕರಿಮೊವ್ ಇತ್ತೀಚೆಗೆ ಮೆದುಳಿನ ರಕ್ತಸ್ರಾವದಿಂದ ನಿಧನರಾಗಿರುವುದನ್ನು ಸ್ಮರಿಸಬಹುದಾಗಿದೆ.
Next Story





