ಬಳಕೆಯಾಗದ ಗ್ರಂಥಾಲಯ
ಮಾನ್ಯರೆ,
ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಗುಡದೂರು ಗ್ರಾಮದಲ್ಲಿ ಇರುವ ಗ್ರಂಥಾಲಯಕ್ಕೆ ಉತ್ತಮ ಕಟ್ಟಡ ಸೌಲಭ್ಯವಿದ್ದರೂ ಉಪಯೋಗಕ್ಕೆ ಬಾರದಂತಾಗಿದೆ.
ಈ ಗ್ರಂಥಾಲಯದಲ್ಲಿ ಇರುವ ಸಾಹಿತ್ಯ ಸಂಬಂಧಿ ಪುಸ್ತಕಗಳು, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ ಪುಸ್ತಕಗಳು ಅಲ್ಲದೆ ಇನ್ನಿತರ ಅಮೂಲ್ಯ ಪುಸ್ತಕಗಳು ಉಪಯೋಗಕ್ಕೆ ಬಾರದರೀತಿಯಲ್ಲಿ ಮೂಲೆಗೆಸೇರಿವೆ.
ಈ ಊರು ಶೈಕ್ಷಣಿಕವಾಗಿ ಮುಂದುವರಿಯುತ್ತಿದ್ದು, ಹೆಚ್ಚು ವಿದ್ಯಾರ್ಥಿಗಳನ್ನು ಹೊಂದಿದೆ. ಆದರೆ ಇಲ್ಲಿನ ಗ್ರಂಥಾಲಯ ಸಾರ್ವ ಜನಿಕರಿಗೆ ಸಮರ್ಪಕ ಬಳಕೆಗೆ ಒದಗುತ್ತಿಲ್ಲ. ಆದ್ದರಿಂದ ಈ ಗ್ರಂಥಾಲಯಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಎಚ್ಚೆತ್ತುಕೊಂಡು ಸಾರ್ವಜನಿಕರಿಗೆ ಈ ಗ್ರಂಥಾಲಯ ಉಪಯೋಗವಾಗುವಲ್ಲಿ ಸಹಕರಿಸಬೇಕಾಗಿದೆ.
Next Story





