ಮಹಾತ್ಮಗಾಂಧಿಯನ್ನು ಕೊಂದದ್ದು ಆರೆಸ್ಸೆಸ್; ಬೇನಿ ಪ್ರಸಾದ್ ವರ್ಮ

ಲಕ್ನೊ,ಸೆಪ್ಟಂಬರ್ 10: ರಾಷ್ಟ್ರಪಿತ ಮಹಾತ್ಮಗಾಂಧಿಯನ್ನು ಆರೆಸ್ಸೆಸ್ ಕಾರ್ಯಕರ್ತ ಕೊಂದಿದ್ದಾನೆ ಎಂದು ಸಮಾಜವಾದಿ ಪಾರ್ಟಿ ಸಂಸದ ಬೇನಿ ಪ್ರಸಾದ್ ವರ್ಮ ಹೇಳಿದ್ದಾರೆ. ಹತ್ಯೆಯ ನಂತರ ವಲ್ಲಭಬಾಯಿ ಪಟೇಲ್ ಆರೆಸ್ಸೆಸ್ ಕಾರ್ಯಕರ್ತರನ್ನು ಜೈಲಿಗೆ ಹಾಕಿದ್ದರು ಎಂದು ವರ್ಮ ಹೇಳಿದ್ದಾರೆ ಎಂದು ವರದಿಯೊಂದು ತಿಳಿಸಿದೆ.
ಮುಖ್ಯಮಂತ್ರಿ ಅಖಿಲೇಶ್ ಯಾದವ್, ಮುಲಾಯಂ ಸಿಂಗ್ ಯಾದವ್ ಎಚ್ಚರಿಕೆ ನೀಡಿದ ಹೊರತಾಗಿಯೂ ಉತ್ತರಪ್ರದೇಶದ ಅಧಿಕಾರಿಗಳು ಕಚೇರಿಕೆಲಸಗಳಲ್ಲಿ ನಿಷ್ಠೆಯನ್ನು ತೋರಿಸುತ್ತಿಲ್ಲ. ಹೆಚ್ಚಿನವರಿಗೆ ಹಣದಲ್ಲಿ ಮಾತ್ರ ವ್ಯಾಮೋಹವಿದೆ. ಹಣದಲ್ಲಿ ಆಶೆಯಿರುವವರು ರಾಜಕೀಯಕ್ಕೆ ಕೊನೆಹಾಡಿ ವ್ಯಾಪಾರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕೆಂದು ಅವರು ಹೇಳಿದ್ದಾರೆ.
Next Story





