Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ನಿಮ್ಮ ತಂದೆಯವರನ್ನು ವೀರಪ್ಪನ್ ಅಪಹರಣ...

ನಿಮ್ಮ ತಂದೆಯವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ಹೀರೋಗಿರಿ ?

ಶಿವರಾಜ್ ಕುಮಾರ್ ಅವರಿಗೆ ಬಹಿರಂಗ ಪತ್ರ

ಟಿ ಶಶಿಧರ್ಟಿ ಶಶಿಧರ್10 Sept 2016 3:43 PM IST
share
ನಿಮ್ಮ ತಂದೆಯವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ಹೀರೋಗಿರಿ ?

ಮಾಜಿ ಮುಖ್ಯಮಂತ್ರಿ ದಿ.ಎಸ್.ಬಂಗಾರಪ್ಪನವರ  ಅಳಿಯಂದಿರು ಮತ್ತು ಕರ್ನಾಟಕ ಕಂಡ ಅಪ್ರತಿಮ ನಟ ಡಾ.ರಾಜ್ ಕುಮಾರ ಅವರ ಪುತ್ರರಾದ ಪ್ರೀತಿಯ ಶಿವರಾಜ್ ಕುಮಾರ್ ಅವರಿಗೆ ನನ್ನ ಗೌರವ ಪೂರ್ವಕ ನಮಸ್ಕಾರಗಳು.
ದಿನಾಂಕ 10-09-2016 ರಂದು ಕಾವೇರಿ ನೀರಿನ ವಿವಾದಕ್ಕೆ ಸಂಬಂಧಿಸಿದ ಬಂದ್ ಪ್ರತಿಭಟನೆಯಲ್ಲಿ ನೀವಾಡಿದ ಮಾತುಗಳನ್ನು ಕೇಳಿಸಿಕೊಂಡೆ. ಅಯ್ಯೋ ಪಾಪ ಅನಿಸಿತು.


ನಿಮಗೆ ಡೈರೆಕ್ಟರ್ ಹೇಳುವ ಡೈಲಾಗು ಮತ್ತು ಮನೆಯಲ್ಲಿ ಅಮ್ಮ ಮತ್ತು ಅಪ್ಪಾಜಿ ಎನ್ನುವದು ಬಿಟ್ಟರೆ ಬೇರೇನೂ ಗೊತ್ತಿಲ್ಲವಾದ್ದರಿಂದ ಪ್ರತಿಭಟನೆಯಲ್ಲಿ ಹೇಳಿದ ಡೈಲಾಗುಗಳು ಮಧು ಬಂಗಾರಪ್ಪನವರೇ ಹೇಳಿ ಕೊಟ್ಟಿರುವ ಶಂಕೆ ಕಾಡಲಾರಂಭಿಸಿದೆ ಎಂದು ತಿಳಿಸಲು ವಿಷಾದವಾಗುತ್ತಿದೆ. 
ಇಂದು ನಾವು ರಾಜಕೀಯದಲ್ಲಿದ್ದೇನೆ ಎಂದರೆ ಅದರಲ್ಲಿ ಬಂಗಾರಪ್ಪನವರ ಆಡಳಿತ ವೈಖರಿ ಮತ್ತು ದಿಟ್ಟತನದ ನಿರ್ಧಾರಗಳ ಪ್ರಭಾವ , ಪ್ರೇರಣೆ ಹಾಗೂ ಸ್ಪೂರ್ತಿಯ ಪಾಲು ಸಹ ಇದೆ ಎಂದು ಹೆಮ್ಮೆಯಿಂದ ಹೇಳ ಬಯಸುತ್ತೇನೆ. ಹಾಗೆಯೇ ನಿಮ್ಮ ತಂದೆಯವರಾದ ಡಾ.ರಾಜ್ ಕುಮಾರ್ ಅವರ ಮೇಲೆ ನನಗೆ ಅಪಾರವಾದ  ಗೌರವ ಇದೆ. 


ಇಡೀ ಕರ್ನಾಟಕ ರಾಜ್ಯವನ್ನು ಒಂದೇ ಒಂದು ನಗುವಿನ ಮೂಲಕ ಮಂತ್ರ ಮುಗ್ದರನ್ನಾಗಿಸಿ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದ ನಿಷ್ಕಲ್ಮಶ ಮನಸಿನ ಡಾ.ರಾಜ್ ಕುಮಾರ್ ಅವರ ಬಗ್ಗೆ ಒಂದೇ ಮಾತಿನಲ್ಲಿ ಹೇಳುವುದಾದರೆ ಅವರ ಜೀವಿತ ಕಾಲದಲ್ಲಿ ಯಾರಿಗೂ ವೈಯಕ್ತಿಕ ನಿಂದನೆ ಮಾಡುವ ಮೂಲಕ ಯಾರ ಮನಸ್ಸನ್ನೂ ನೋಯಿಸಲಿಲ್ಲ ಎಂಬ ಸತ್ಯ ನೀವು ಅವರ ಮಗನಾಗಿ ಅರ್ಥ ಮಾಡಿಕೊಂಡಿಲ್ಲವಲ್ಲ ಎಂದು ದುಃಖವಾಗುತ್ತಿದೆ. 


ದಯವಿಟ್ಟು ಗೋಕಾಕ್ ಚಳವಳಿಯ ಸಂದರ್ಭದಲ್ಲಿ ಡಾ.ರಾಜ್ ರವರು ಮಾತನಾಡಿದ ಬಗೆಗಿನ ವೀಡಿಯೊ ಆಡಿಯೋ ಅಥವ ಪತ್ರಿಕೆಗಳ ತುಣುಕು ಸಿಕ್ಕರೆ ನೋಡಿ. ಸಾರ್ವಜನಿಕರ ಎದುರು  ಅವರೆಷ್ಟು ತೂಕದ ಮಾತನಾಡುತ್ತಿದ್ದರೆಂದು ನಿಮ್ಮ  ಅರಿವಿಗೆ ಬಂದರೂ ಬರಬಹುದು. 
ನಿನ್ನೆ ನೀವೇ ಪ್ರಸ್ತಾಪಿಸಿರುವ ಬಂಗಾರಪ್ಪನವರ ಕಾಲದಲ್ಲಿ ನಡೆದಿರುವ ಕಾವೇರಿ ವಿವಾದದ ಘಟನೆಯ ಸಂದರ್ಭದಲ್ಲಿ ಡಾ ರಾಜ್ ರವರು ಏನು ಮಾತನಾಡಿದ್ದರೆಂದು ಸಾರಾ ಗೋವಿಂದು ಅವರಿಂದಾದರೂ ತಿಳಿದುಕೊಳ್ಳಿ. ಆಗ ಸಾರಾ ಗೋವಿಂದು ಅವರದು ಪ್ರಮುಖ ಪಾತ್ರವಿತ್ತು.


ಪ್ರತಿಭಟನೆಯಲ್ಲಿ ಮಾತನಾಡುವಾಗ ನೀವೂ ಸಹ ಕರ್ನಾಟಕದ ಸಾಮಾನ್ಯ ಪ್ರಜೆ ಎಂದು ಭಾವಿಸಿಕೊಂಡು ಸುಸಂಸ್ಕೃತ ಭಾಷೆಯಲ್ಲಿ ಮಾತನಾಡಿದ್ದರೆ ನಾನೂ ಸಹ ಸ್ವಾಗತಿಸುತ್ತಿದ್ದೆ. ಕಾವೇರಿ ಕರ್ನಾಟಕದ  ಅದರಲ್ಲಿಯೂ ಹಳೆ ಮೈಸೂರು ಪ್ರಾಂತ್ಯದ ಜನರ ಜೀವನಾಡಿ ಎಂಬುವುದರಲ್ಲಿಯೂ ಮತ್ತು ಭಾವನಾತ್ಮಕ ಸಂಬಂಧ ರಕ್ತಗತವಾಗಿದೆ ಎಂಬುವದರಲ್ಲಿಯೂ ಯಾರಲ್ಲಿಯು ಅನುಮಾನವೇ ಬೇಡ. ಆದರೆ ಭಾವನಾತ್ಮಕವಾಗಿಯಾಗಲೀ ಅಥವ ಪ್ರಚೋದನಾತ್ಮಕವಾಗಿಯಾಗಲೀ ಮಾತನಾಡುವಾಗ ಯಾರಿಗೂ ವೈಯಕ್ತಿಕವಾಗಿ ನೋವಾಗದಂತೆ , ಅಪಮಾನವಾಗದಂತೆ ಎಚ್ಚರಿಕೆಯಿಂದ ಮಾತನಾಡಿದ್ದರೆ ನಿಜವಾಗಿಯೂ ನೀವೊಬ್ಬ ಪ್ರಬುದ್ಧ  ನಟನಾಗಿ ಹೊರಹೊಮ್ಮಬಹುದಿತ್ತು. 


ನಿನ್ನೆ ನೀವು ಬಳಸಿದ ಭಾಷೆ ಕೇಳಲು ಡಾ.ರಾಜ್ ರವರು ಜೀವಂತವಿದ್ದಿದ್ದರೆ ನಿಜವಾಗಿಯೂ ಅವರು ಅತ್ಯಂತ ದೊಡ್ಡ ಪ್ರಮಾಣದಲ್ಲಿ ಬೇಸರ ವ್ಯಕ್ತ ಪಡಿಸುತ್ತಿದ್ದರೇನೋ ? 
ಅದರಲ್ಲಿಯೂ ಲಿಂಗ ಸೂಚಕ ಪದ ಸಾರ್ವಜನಿಕವಾಗಿ ಬಳಸುವುದು ಎಷ್ಟರ ಮಟ್ಟಿಗೆ ಸರಿ ಎಂಬುವುದನ್ನು ನೀವೇ ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದಲ್ಲವೆ ?
ಅದೂ ನಿಮ್ಮ ತಂದೆಯವರ ಅಚ್ಚು ಮೆಚ್ಚಿನ ರಾಜಕಾರಣಿ ಸಿದ್ದರಾಮಯ್ಯನವರ ವಿರುದ್ದ ?
ನಿಮ್ಮ ತಂದೆ ಮತ್ತು ಸಿದ್ದರಾಮಯ್ಯನವರ ವೈಯಕ್ತಿಕ ಬದುಕಿನಲ್ಲಿ ಯಾವ ರೀತಿಯ ಸ್ನೇಹವಿತ್ತೆಂಬುವುದನ್ನು ಮೊದಲು ಅರಿತುಕೊಳ್ಳಿ.
ರಾಜಕೀಯ ಸಹವಾಸದಿಂದ ಮಾರು ದೂರವಿದ್ದರೂ ನಿಮ್ಮ ತಂದೆಯವರಿಗೆ ಸಿದ್ದರಾಮಯ್ಯನವರನ್ನು ಕಂಡರೆ ಅಷ್ಟು ಪ್ರೀತಿ ಇತ್ತು . 


ಪ್ರತಿ ಸಲ ನಿಮ್ಮ ತಂದೆ ಮತ್ತು ಸಿದ್ದರಾಮಯ್ಯನವರು ಮುಖಾಮುಖಿಯಾದಾಗಲೆಲ್ಲ ನಿಮ್ಮ ತಂದೆಯವರು ,'' ಏನ್ರೀ ನಮ್ ಕಾಡ್ನೋರೆ'' ಚೆನ್ನಾಗಿದ್ದೀರಾ ಎಂದು ಅಕ್ಕರೆಯಿಂದ ಅಪ್ಪಿಕೊಳ್ಳುತ್ತಿದ್ದರೆಂಬ ಸತ್ಯ ಅರಿತುಕೊಳ್ಳುವ ಮೂಲಕ ಮಾಡಿದ ತಪ್ಪು ತಿದ್ದಿಕೊಳ್ಳುವ ಪ್ರಯತ್ನ ಮಾಡಿ. 
ಪ್ರತಿಭಟನೆಯಲ್ಲಿ ಮಾತನಾಡುವಾಗ ಭಾಷೆಯ ಮೇಲಿನ ಹಿಡಿತ ಸಾಧಿಸದೇ ಅವಾಚ್ಯ ಶಬ್ದಗಳಿಂದ ನಿಂದಿಸುವಂಥ ಅನಿವಾರ್ಯತೆ ಏನಿತ್ತು ? 
ನೀವು ಬಾಯಿಗೆ ಬಂದಂತೆ ಡೈಲಾಗು ಹೊಡೆಯಲು ಅಲ್ಲೇನು ಸಿನೆಮಾ ಶೂಟಿಂಗ್ ನಡೆಯುತ್ತಿತ್ತಾ ?
ಅಥವ ನೀವೇ ಸಿನೆಮಾದ ಗುಂಗಿನಿಂದ ಹೊರ ಬಂದಿರಲಿಲ್ಲವೆ ?


ಸಿನೆಮಾಕ್ಕೂ ಸಾರ್ವಜನಿಕ ಬದುಕಿಗೂ ತುಂಬ ಅಂತರವಿದೆ. ಬದುಕು ಸತ್ಯ ಸಿನೆಮಾ ಮಿಥ್ಯಾ  ಎಂಬ ಸತ್ಯ ಅರಿತುಕೊಂಡರೆ ಒಳ್ಳೆಯದಲ್ಲವೆ ?
ಕಾವೇರಿ ನೀರು ಬಿಡುವುದಿಲ್ಲವೆಂದು ಸಿದ್ದರಾಮಯ್ಯ ಹೇಳಿದ್ದರೆ ಗಂಡಸಾಗುತ್ತಿದ್ದರು ಎಂದು ಅಬ್ಬರಿಸಿರುವ ನಿಮಗೆ ಮರು ಪ್ರಶ್ನೆ ಕೇಳುತ್ತೇನೆ , ಹಾಗಾದರೆ ಸಿದ್ದರಾಮಯ್ಯ ಗಂಡಸು ಅಲ್ಲವೆ ? ಉತ್ತರಿಸುವ ನೈತಿಕತೆ ಇದ್ದರೆ ಉತ್ತರಿಸಿ.
ಈ ಅರೆ ಬೆಂದ ಹೇಳಿಕೆಯಿಂದ ಜನರ ಮನಸ್ಸಿನಲ್ಲಿ ಎತ್ತರದ ಸ್ಥಾನದಲ್ಲಿರುವ ನಿಮ್ಮ ತಂದೆಯ ಹೆಸರಿಗೆ ಕುಂದುಂಟಾಗಿದೆ ಎಂದು ಭಾಸವಾಗುತ್ತಿಲ್ಲವೆ ? 
ನೀವು ಚಿತ್ರರಂಗದಲ್ಲಿ ಶಿವರಾಜ ಕುಮಾರನೆಂದು ಬೆಳೆದಿಲ್ಲ ಬದಲಾಗಿ ಮೇರುನಟ ಡಾ.ರಾಜ್ ಕುಮಾರ್ ಅವರ ಮಗನೆಂದು ಗುರುತಿಸಿದ್ದಾರೆಂಬ ಪರಮ ಸತ್ಯ ನಿಮ್ಮ ಗಮನಕ್ಕಿರಲಿ.


ಮಾತನಾಡುವ ಮುಂಚೆ ನೈಜ ಇತಿಹಾಸ ಮತ್ತು ಈ ನೆಲದ ಕಾನೂನಿನ ಬಗ್ಗೆ ತಿಳಿದುಕೊಳ್ಳುವ ಪ್ರಯತ್ನ ಮಾಡಿ.
ಬಂಗಾರಪ್ಪನವರ ಕಾಲದ ಘಟನೆಯ ಅರ್ಧ ಸತ್ಯ ಮಾತ್ರ ಹೇಳುವ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಅವಮಾನ ಮಾಡಿ ಇತಿಹಾಸ ಅರಿಯದ ಚಿತ್ರರಂಗದ ಕೆಲವರಿಂದ ಚಪ್ಪಾಳೆ ಏನೋ ಗಿಟ್ಟಿಸಿಕೊಂಡಿರಿ ಆದರೆ ಇನ್ನರ್ಧ ಸತ್ಯ ಯಾಕೆ ಹೇಳಲಿಲ್ಲ ? 
ಬಂಗಾರಪ್ಪನವರು ಹೊರಡಿಸಿದ್ದ ಸುಗ್ರೀವಾಜ್ಞೆಯನ್ನು ಈ ದೇಶದ ಸರ್ವೋಚ್ಚ ನ್ಯಾಯಾಲಯ ಅಮಾನ್ಯ ಮಾಡುವ ಮೂಲಕ ತಮಿಳುನಾಡಿಗೆ ನೀರು ಹರಿಸುವಂತೆ ತೀರ್ಪು ಪ್ರಕಟಿಸಿದ ನಂತರ ಅದೇ ಬಂಗಾರಪ್ಪನವರು ನೀರು ಹರಿಸಲಿಲ್ಲವೇ ?


ಯಾರೇ ಮುಖ್ಯಮಂತ್ರಿಯಾಗಿದ್ದರೂ ತಮ್ಮ ರಾಜ್ಯದ ಜನರ ಹಿತಾಸಕ್ತಿ ಕಾಪಾಡುವ ನಿಟ್ಟಿನಲ್ಲಿ ಬದ್ದವಾಗಿರುತ್ತಾರೆಂಬುವುದರಲ್ಲಿ ಅನುಮಾನವೇ ಇಲ್ಲ.  ಆದರೆ ನಮ್ಮ ರಾಜ್ಯದ ಜನರ ಹಿತಾಸಕ್ತಿಯ ಜೊತೆ ಜೊತೆಗೆ ಅಂತರ್ ರಾಜ್ಯ ಒಪ್ಪಂದಗಳಿಗೆ ಮತ್ತು ಈ ದೇಶದ ಕಾನೂನಿಗೆ ಹಾಗೂ ಸಂವಿಧಾನ ಬದ್ಧ ತೀರ್ಮಾನಗಳಿಗೆ ಪ್ರತಿಯೊಬ್ಬರೂ ತಲೆ ಬಾಗಲೇಬೇಕು. 


ಕಾನೂನು ಉಲ್ಲಂಘಿಸುವುದು , ಹೀರೋ ಗಾಳಿಯಲ್ಲಿ ಹಾರಿಕೊಂಡು ಹೋಗಿ ಡ್ಯಾಮಿನ ಗೇಟ್ ಮುಚ್ಚುವದು ಇದೆಲ್ಲ ಸಿನೆಮಾದಲ್ಲಿ ಮಾತ್ರ ಸಾಧ್ಯ. 
ನಿಜ ಜೀವನದಲ್ಲಿ ಈ ದೇಶಕ್ಕೆ ಬಲಿಷ್ಠ ಸಂವಿಧಾನ ಇದೆ. ಅದರಡಿಯಲ್ಲಿ ನಾವು ನಮ್ಮ ಬೇಕು ಬೇಡಗಳನ್ನು ಪಡೆಯಬೇಕು ಮತ್ತು ಕಳೆದುಕೊಳ್ಳಬೇಕಾಗುತ್ತದೆ. 
ಭಾವನಾತ್ಮಕವಾಗಿ ಮುಗ್ದರನ್ನು ಪ್ರಚೋದಿಸುವ ಮೂಲಕ ನ್ಯಾಯ ಪಡೆಯಲು ಸಾಧ್ಯವಿಲ್ಲ. 


ಶಾಂತಿ ಸೌಹಾರ್ದದಿಂದ  ಪ್ರಜಾಸತ್ತಾತ್ಮಕವಾಗಿ ಅದರಲ್ಲಿಯೂ ಕಾನೂನಾತ್ಮಕವಾಗಿ ನ್ಯಾಯ ಪಡೆಯುವ ದಾರಿಯಲ್ಲಿ ನಾವುಗಳು ಸಾಗಬೇಕಿದೆ. 
ತಮಿಳುನಾಡಿಗೆ ಕಾವೇರಿ ನೀರು ಹರಿಸಿದ ಮುಖ್ಯಮಂತ್ರಿಗಳು ಗಂಡಸರಲ್ಲ  ಎನ್ನುವುದಾದರೆ ಕಾನೂನಿನ ಕನಿಷ್ಠ ಅರಿವು ಇಲ್ಲದ ನಿಮ್ಮನ್ನು ಕಂಡು ಅಯ್ಯೋ ಪಾಪ ಅನಿಸುತ್ತಿದೆ.
ಸಿನೆಮಾದಲ್ಲಿ ನೀವೆಲ್ಲ ಸೂಪರ್ ಸ್ಟಾರ್ ಹೀರೋಗಳು ಅದರಲ್ಲಿಯೂ ನಿಮ್ಮ ಮನೆಯಲ್ಲಿ ಮೂರು ಜನ ಹೀರೋಗಳಿದ್ದೀರಿ.
ಹಾಗಾದರೆ ನಿಮ್ಮ ತಂದೆಯವರನ್ನು ವೀರಪ್ಪನ್ ಅಪಹರಣ ಮಾಡಿದಾಗ ಎಲ್ಲಿ ಹೋಗಿತ್ತು ನಿಮ್ಮ ಹೀರೋಗಿರಿ ? ಎಲ್ಲಿ ಹೋಗಿತ್ತು ನಿಮ್ಮ ಗಂಡಸುತನ ?  ಆಗ ನೀವು ಗಂಡಸಾಗಿರಲಿಲ್ಲವೆ ?

ಈ ಪ್ರಶ್ನೆಗೆ ನೈತಿಕವಾಗಿ ಉತ್ತರಿಸಲು ಸಾಧ್ಯವೇ ?


ಅಂದೂ ಕೂಡಾ ನಿಮ್ಮ ತಂದೆಯವರನ್ನು ರಕ್ಷಣೆ ಮಾಡಿದ್ದು ಈ ನೆಲದ ಕಾನೂನು. ಅಂದು ಈ ನೆಲದ ಮುಖ್ಯಮಂತ್ರಿಯವರಾಗಿದ್ದ ಎಸ್ ಎಮ್ ಕೃಷ್ಣ ಮತ್ತು ಗೃಹ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆಯವರು ಎಂಬುವುದನ್ನು ಮರೆಯಬಾರದು.
ಡಾ.ರಾಜ್ ಕುಮಾರ್ ಅವರನ್ನು ವೀರಪ್ಪನ್ ಬಂಧನದಿಂದ ಸುರಕ್ಷಿತವಾಗಿ ಕರುನಾಡಿಗೆ ಮರಳುವಂತೆ ಎಲ್ಲಾ ರೀತಿಯ ಕಾನೂನಿನ ಮೂಲಕವಾಗಲಿ ಅಥವ ಶಾಂತಿಯುತ ಸಂಧಾನದ ಮೂಲಕವಾಗಲಿ  ಬಂಧನದಿಂದ ಬಿಡುಗಡೆಗಾಗಿ ನಾವೆಲ್ಲ ಶಾಂತಿಯುತ ಹೋರಾಟ ಮಾಡುವ ಮೂಲಕ ಮುಖ್ಯಮಂತ್ರಿಯವರಿಗೆ ಒತ್ತಡ ಹೇರುವ ಪ್ರಯತ್ನ ಮಾಡಿದ್ದೆವು ಆದರೆ ನಾವೆಂದೂ ಅಂದಿನ ಮುಖ್ಯಮಂತ್ರಿ ಎಸ್.ಎಮ್. ಕೃಷ್ಣ ರವರ ಗಂಡಸುತನಕ್ಕೆ ಸವಾಲು ಹಾಕಿರಲಿಲ್ಲ ಸ್ವಾಮಿ ಶಿವರಾಜ್ ಕುಮಾರ್ ಅವರೆ...!


ಪ್ರಜಾತಂತ್ರ ವ್ಯವಸ್ಥೆಯಲ್ಲಿ ಬೇಡಿಕೆಗಾಗಿ ಪ್ರತಿಭಟನೆ ಮಾಡುವದು ಪ್ರತಿಯೊಬ್ಬ ನಾಗರಿಕನ ಹಕ್ಕು ಮತ್ತು ಕರ್ತವ್ಯ ಕೂಡಾ. 
ಆದರೆ ಗಂಡಸುತನಕ್ಕೆ ಸವಾಲು ಹಾಕಿ ಬೇಡಿಕೆ ಈಡೇರಿಕೊಳ್ಳುವ ಕಾನೂನು ಈ ದೇಶದಲ್ಲಿಲ್ಲವೆಂಬ ಕನಿಷ್ಠ ಪ್ರಜ್ಞೆ ಪ್ರತಿಯೊಬ್ಬ ಎಳಸು ಹುಡುಗರಿಂದ ಹಿಡಿದು ಹಿರಿಯ ಜೀವಗಳಿಗೂ ಗೊತ್ತಿರುವಾಗ ಗೌರವಾನ್ವಿತ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪುರಸ್ಕೃತ ಹಿರಿಯ ನಟರ ಮಗನಾಗಿರುವ ಮತ್ತು ಮಾಜಿ ಮುಖ್ಯಮಂತ್ರಿಯ ಅಳಿಯನಾಗಿರುವ ನಿಮಗೆ ಗೊತ್ತಲ್ಲವೆಂದರೆ ?
ಸರಿ ಪಡಿಸಿಕೊಳ್ಳಲು ಸಮಯಾವಕಾಶ  ಇದೆ.


ದಯವಿಟ್ಟು ನೀವು ಬಳಸಿದ ಶಬ್ದ ವಾಪಸ್ ಪಡೆದು ಮುಖ್ಯಮಂತ್ರಿಯವರಲ್ಲಿ ಹಾಗೂ ಸಾರ್ವಜನಿಕರಲ್ಲಿ ವಿಷಾದ ವ್ಯಕ್ತ ಪಡಿಸುವುದು ಪ್ರಬುದ್ಧತೆಯ ಲಕ್ಷಣ.
ಡಾ ರಾಜ್ ಕುಮಾರ್ ಅವರು ತಮ್ಮ ಜೀವಿತ ಕಾಲದಲ್ಲಿ ರಾಜಕೀಯ ಪ್ರೇರಿತವಾಗಿ ಮಾತನಾಡಿದವರಲ್ಲ ಹಾಗೆಯೇ ರಾಜಕೀಯಕ್ಕೆ ಬಲಿಯಾದವರೂ ಅಲ್ಲ. 
ನೀವೂ ಕೂಡ ರಾಜಕೀಯ ಪ್ರಚೋದಿತ ಅರೆ ಬೆಂದ ಹೇಳಿಕೆ ನೀಡಿ ನಿಮ್ಮ ತಂದೆಯವರು ಕಾಪಾಡಿಕೊಂಡು ಬಂದ ಘನತೆಗೆ ಧಕ್ಕೆಯಾಗದಿರಲೆಂಬುವದೇ ನನ್ನಾಸೆ.
ತೀರ್ಮಾನ ನಿಮಗೆ ಬಿಟ್ಟದ್ದು.

ಜೈ ಭೀಮ್  ಶಿವರಾಜ್ ಕುಮಾರ್ ಅವರೆ.

ಇಂತಿ ನಿಮ್ಮ 
ಟಿ ಶಶಿಧರ್

share
ಟಿ ಶಶಿಧರ್
ಟಿ ಶಶಿಧರ್
Next Story
X