ಶ್ವಾಸಕೋಶದಲ್ಲಿ ಅನ್ನ ಸಿಲುಕಿ ವ್ಯಕ್ತಿ ಮೃತ್ಯು

ಬ್ರಹ್ಮಾವರ, ಸೆ.10: ಶ್ವಾಸಕೋಶದಲ್ಲಿ ಅನ್ನ ಸಿಲುಕಿ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸಮೀಪ ಸಂಭವಿಸಿದೆ.
ಉಪ್ಪೂರು ಗ್ರಾಮದ ಕೆ.ಜಿ.ರೋಡ್ ಸೇತುವೆ ಸಮೀಪ ಬಾಡಿಗೆ ಮನೆಯಲ್ಲಿ ವಾಸವಾಗಿರುವ ಕೃಷ್ಣ ಭಟ್(47) ಮೃತಪಟ್ಟ ವ್ಯಕ್ತಿ.
ಸೆ.8 ರಂದು ರಾತ್ರಿ ಇವರು ಊಟ ಮಾಡುತ್ತಿದ್ದಾಗ ಶ್ವಾಸಕೋಶಕ್ಕೆ ಅನ್ನ ಹೋಗಿ ಬ್ಲಾಕ್ ಆಗಿ ಹೃದಯಾಘಾತದಿಂದ ಕುಸಿದು ಬಿದ್ದಿದ್ದರು. ತೀವ್ರವಾಗಿ ಅಸ್ವಸ್ಥಗೊಂಡಿದ್ದ ಇವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ದಾರಿಮಧ್ಯೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Next Story





