ಜೆಎನ್‌ಯು ವಿದ್ಯಾರ್ಥಿ ಸಂಘದ ಚುನಾವಣೆ: ಎಡರಂಗ ಕ್ಲೀನ್ ಸ್ವೀಪ್;ಮೋಹಿತ್ ಕೆ. ಪಾಂಡೆ ಅಧ್ಯಕ್ಷರಾಗಿ ಆಯ್ಕೆ
ಎಲ್ಲ ನಾಲ್ಕು ಸ್ಥಾನಗಳನ್ನು ಗೆದ್ದುಕೊಂಡ ಎಸ್‌ಎಫ್‌ಐ - ಎಐಎಸ್‌ಎ ಮೈತ್ರಿಕೂಟ

ಹೊಸದಿಲ್ಲಿ, ಸೆ.10: ಹೊಸದಿಲ್ಲಿಯ ಜವಾಹರ್‌ಲಾಲ್ ನೆಹರೂ ವಿಶ್ವ ವಿದ್ಯಾನಿಲಯದ(ಜೆಎನ್ ಯು) ವಿದ್ಯಾರ್ಥಿ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಡರಂಗದ ವಿದ್ಯಾರ್ಥಿ ಸಂಘಟನೆಗಳು ಭರ್ಜರಿ ಗೆಲುವು ದಾಖಲಿಸಿದ್ದು, ನಾಲ್ಕರಲ್ಲಿ 4 ಸ್ಥಾನಗಳನ್ನು ಗೆದ್ದುಕೊಂಡಿದೆ. ಅಧ್ಯಕ್ಷ, ಉಪಾಧ್ಯಕ್ಷ , ಕಾರ್ಯದರ್ಶಿ, ಖಜಾಂಚಿ ಸ್ಥಾನಗಳನ್ನು ಎಡರಂಗದ ವಿದ್ಯಾರ್ಥಿ ಸಂಘಟನೆಗಳು ತನ್ನದಾಗಿಸಿಕೊಂಡಿದೆ.
ಎಸ್‌ಎಫ್‌ಐ ಮತ್ತು ಎಐಎಸ್‌ಎ ಜೊತೆಯಾಗಿ ಕಣಕ್ಕಿಳಿದು ಗೆಲುವು ಸಾಧಿಸಿದೆ. ಮೋಹಿತ್ ಕೆ. ಪಾಂಡೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಎಬಿವಿಪಿ ಮತ್ತು ಬಿಎಪಿಎಸ್‌ಐ ಮುಖಭಂಗ ಅನುಭವಿಸಿದೆ.
Next Story





