Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಿಚಾರ
  3. ವಿಶೇಷ-ವರದಿಗಳು
  4. ಕುಲಾಂತರಿ ತಳಿ ವಿವಾದ:ಬಿ.ಟಿ. ಹತ್ತಿ...

ಕುಲಾಂತರಿ ತಳಿ ವಿವಾದ:ಬಿ.ಟಿ. ಹತ್ತಿ ಹೋಯ್ತು, ಈಗ ಸಾಸಿವೆ ಸರದಿ!

ಜಗದೀಶ್ ಕೊಪ್ಪ

ವಾರ್ತಾಭಾರತಿವಾರ್ತಾಭಾರತಿ10 Sept 2016 11:39 PM IST
share
ಕುಲಾಂತರಿ ತಳಿ ವಿವಾದ:ಬಿ.ಟಿ. ಹತ್ತಿ ಹೋಯ್ತು, ಈಗ ಸಾಸಿವೆ ಸರದಿ!

ಭಾರತ ದೇಶಕ್ಕೆ ಕುಲಾಂತರಿ ತಳಿಗಳಿಂದ ಬಿಡುಗಡೆಯ ಭಾಗ್ಯ ಎಂದಿಗೂ ದೊರೆಯಲಾರದು ಎನಿಸತೊಡಗಿದೆ. ಬಿ.ಟಿ. ಹತ್ತಿ ಆಯಿತು, ಬಿ.ಟಿ. ಬದನೆ ಆಯಿತು ಇದೀಗ ಬಿ.ಟಿ.ಸಾಸಿವೆ ಭಾರತದ ಕೃಷಿ ಲೋಕಕ್ಕೆ ಕಾಲಿಡಲು ವೇದಿಕೆ ಸಜ್ಜಾಗುತ್ತಿದೆ. ಈಗಾಗಲೇ ಬಿ.ಟಿ.ಹತ್ತಿಯ ಮೂಲಕ ಭಾರತೀಯ ರೈತರನ್ನು ಹಾದಿ ತಪ್ಪಿಸಿ, ಹತ್ತಿಯ ಮೂಲ ತಳಿಗಳನ್ನು ನಾಶಪಡಿಸುವುದರ ಮೂಲಕ ಕೃಷಿ ರಂಗವನ್ನು ಕಲುಷಿತಗೊಳಿಸಿದ ಮಾನ್ಸಂಟೊ ಕಂಪೆನಿಯು ಕಳೆದ ಜುಲೈ 6 ರಂದು ‘‘ಇನ್ನು ಮುಂದೆ ಭಾರತದಲ್ಲಿ ಯಾವುದೇ ಸುಧಾರಿತ ಬಿ.ಟಿ. ಹತ್ತಿ ತಳಿಗಳನ್ನು ಬಿಡುಗಡೆ ಮಾಡುವುದಿಲ್ಲ’’ ಎಂದು ಅಕೃತವಾಗಿ ಘೋಷಿಸಿದೆ. ಭಾರತದಲ್ಲಿ ಹೊಸ ಹೊಸ ಪ್ರಯೋಗಕ್ಕೆ ಪೂರಕ ವಾತಾವರಣವಿಲ್ಲ ಎಂದು ಮಾನ್ಸಂಟೊ ಇಂಡಿಯ ಕಂಪೆನಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.
ವಾಸ್ತವವಾಗಿ ಭಾರತದಲ್ಲಿ ಬಿ.ಟಿ.ಹತ್ತಿಯ ಪ್ರಯೋಗ ಈಗಾಗಲೇ ಮಕಾಡೆ ಮಲಗಿದೆ. ‘‘ಬಿ.ಟಿ. ಹತ್ತಿ ತಳಿಯ ಬೀಜಗಳಿಂದ ಕಾಂಡ ಮತ್ತು ಕಾಯಿಗಳನ್ನು ಕೊರೆಯುವ ಹುಳಗಳಿಂದ ಸಂಪೂರ್ಣ ಮುಕ್ತಿ ಸಿಗಲಿದೆ’’ ಎಂಬ ಡಂಗುರವನ್ನು ಬಾರಿಸಿದ ಮಾನ್ಸಂಟೊ ಕಂಪೆನಿ ಹಾಗೂ ಎಸೆದ ಎಂಜಲು ಕಾಸಿಗಾಗಿ ಅದರ ತಾಳಕ್ಕೆ ತಕ್ಕಂತೆ ಕುಣಿದ ಕೃಷಿ ವಿಜ್ಞಾನಿಗಳ ಆಡಂಬರದ ಮಾತುಗಳೆಲ್ಲವೂ ಈಗ ತಲೆ ಕೆಳಗಾಗಿವೆ. ಅಕ ಉತ್ಪಾದನೆಯಿರಲಿ, ರೋಗ ನಿರೋಧಕ ಮತ್ತು ಕೀಟ ನಿರೋಧಕ ಶಕ್ತಿಯನ್ನೂ ಸಹ ಕಳೆದುಕೊಂಡಿರುವ ಬಿ.ಟಿ. ಹತ್ತಿ ತಳಿಯ ಬೀಜಗಳು ಈಗ ಕೇಳುವವರಿಲ್ಲದೆ ಗೋದಾಮುಗಳಲ್ಲಿ ಕೊಳೆಯುತ್ತಿವೆ. ಭಾರತದ ಉದಾಹರಣೆ ಬೇಡ. ನಮ್ಮ ಕರ್ನಾಟಕದ ರಾಯಚೂರು ಜಿಲ್ಲೆಯ ರೈತರು ಕಳೆದ ವರ್ಷ ಬೆಳೆದ ಬಿ.ಟಿ. ಹತ್ತಿ ಬೆಳೆಯು ಗುಲಾಬಿ ಹುಳುಗಳ (ಪಿಂಕ್ ವರ್ಮ್) ಕಾಟದಿಂದ ನಾಶವಾಗಿ ಕೈ ಸುಟ್ಟುಕೊಂಡರು. ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಬಿ.ಟಿ. ಹತ್ತಿ ಕೈ ಕೊಟ್ಟ ಕಾರಣ ಇದೀಗ ಬೀಜ ಕಂಪೆನಿಗಳ ಮೇಲೆ ಪರಿಹಾರಕ್ಕಾಗಿ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲಾಗಿದೆ. ಈ ವರ್ಷ ಹಾವೇರಿ ಜಿಲ್ಲೆಯಲ್ಲಿಯೂ ಸಹ ರೈತರು ಬೆಳೆದ ಬಿ.ಟಿ. ಹತ್ತಿಗೆ ಗುಲಾಬಿ ಕೀಟ ತಗುಲಿದೆ. ಬಿ.ಟಿ. ಹತ್ತಿಯ ಕುರಿತು ಕಂಪೆನಿಯೂ ಒಳಗೊಂಡಂತೆ ಹಲವು ಕೃಷಿ ವಿಜ್ಞಾನಿಗಳು ಮತ್ತು ಜೈವಿಕ ತಂತ್ರಜ್ಞಾನದ ಪ್ರಚಾರಕರು ಗಂಟಲು ಹರಿದುಕೊಂಡು ಪ್ರಚಾರ ಮಾಡಿದ್ದ ಅಂಶಗಳೆಲ್ಲವೂ ಭಾರತದ ಕೃಷಿ ರಂಗವನ್ನು ದಿಕ್ಕು ತಪ್ಪಿಸುವ ಹುನ್ನಾರ ಎಂಬುದು ಇದೀಗ ಸಾಬೀತಾಗಿದೆ.
ಬಿ.ಟಿ. ಹತ್ತಿಯು ವಿಲವಾದ ಹಿನ್ನೆಲೆಯಲ್ಲಿ ಸುಧಾರಿತ ತಳಿಯನ್ನು ಬಿಡುಗಡೆ ಮಾಡುವುದಾಗಿ ಮಾನ್ಸಂಟೊ ಕಂಪೆನಿ ಕಳೆದ ವರ್ಷ ಘೋಷಿಸಿತ್ತು. ಅಂದರೆ, ಕೀಟ ಮತ್ತು ರೋಗ ನಿರೋಧಕ ಶಕ್ತಿಯ ಜೊತೆಗೆ ‘ರೌಂಡ್ ಅ್’ ಎಂಬ ಕಳೆ ನಾಶಕದ ಗುಣವನ್ನು ಹೊಸ ತಳಿ ಹೊಂದಿದೆ ಎಂದು ತಿಳಿಸಿತ್ತು. (ಹೊಸ ತಳಿಯ ಹೆಸರು- ಬೋಲ್ ಗಾರ್ಡ್-2, ರೌಂಡ್ ಅ್ ರೆಡಿ ್ಲೆಕ್ಸ್) ‘ರೌಂಡ್ ಅ್’ ಕಳೆ ನಾಶಕದ ಕಪ್ಪುಇತಿಹಾಸ ಎಂಬುದು ಇಡೀ ಜಗತ್ತಿಗೆ ಗೊತ್ತಿದೆ. ಈ ವೇಳೆಯಲ್ಲಿ ದೇಶಾದ್ಯಂತ ಬಿ.ಟಿ.ಹತ್ತಿ ಬೆಳೆಯ ವೈಲ್ಯದಿಂದ ರೈತರು ನಷ್ಟಕ್ಕೆ ಒಳಗಾದ ಹಿನ್ನಲೆಯಲ್ಲಿ ಕೇಂದ್ರ ಕೃಷಿ ಸಚಿವಾಲಯ ಮಾನ್ಸಂಟೊ ಕಂಪೆನಿಗೆ ನೋಟಿಸ್ ಜಾರಿ ಮಾಡಿದೆ. ಕೇಂದ್ರ ಸರಕಾರ ನೀಡಿರುವ ಹಿನ್ನೆಲೆಯಲ್ಲಿ ಕಂಪೆನಿಯು ಭಾರತದಲ್ಲಿ ಕುಲಾತಂತರಿಗಳ ಪ್ರಯೋಗ ಅನಿಶ್ಚಿತತೆಯಿಂದ ಕೂಡಿದೆ ಎಂದು ಅಭಿಪ್ರಾಯ ಪಟ್ಟಿದೆ.ದು ಬಿ.ಟಿ. ಹತ್ತಿಯ ನೋವಿನ ಕಥೆಯಾದರೆ, ‘‘ಹೋದೆಯಾ ಪಿಶಾಚಿ ಎಂದರೆ, ಇಲ್ಲಾ ಮತ್ತೇ ಬಂದೆ ಗವಾಕ್ಷಿಯಲ್ಲಿ’’ ಎಂಬ ಗಾದೆಯಂತೆ ಹತ್ತಿಯಾಯಿತು, ಬದನೆಯಾಯಿತು, ಇದೀಗ ಬಿ.ಟಿ. ಸಾಸಿವೆ ತಳಿಯನ್ನು ಭಾರತದಲ್ಲಿ ಪರಿಚಯಿಸಲು ವೇದಿಕೆ ಸಜ್ಜಾಗಿದೆ. ಹಿಂದಿನ ಯುಪಿಎ ಸರಕಾರದಲ್ಲಿ ಕೇಂದ್ರ ಪರಿಸರ ಖಾತೆ ಸಚಿವರಾಗಿದ್ದ ಜೈ ರಾಂ ರಮೇಶ್‌ರವರ ಜಾಣ ನಡೆಯಿಂದಾಗಿ ಬದನೆ ಕುಲಾಂತರಿ ತಳಿಯ ಪ್ರಯೋಗ ರದ್ದಾಯಿತು. ಈಗ ಸಾಸಿವೆ ತಳಿಯ ಪ್ರಯೋಗಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ. ಭಾರತದಲ್ಲಿ ಅತ್ಯಕ ಸಾಸಿವೆ ಬೆಳೆಯುವ ಗುಜರಾತ್, ರಾಜಸ್ಥಾನ, ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಅನೇಕ ರಾಜ್ಯಗಳ ರೈತರ ತಲೆಯ ಮೇಲೆ ಕಲ್ಲು ಚಪ್ಪಡಿ ಎಳೆಯಲು ಸಿದ್ಧತೆ ನಡೆಸಿದೆ. ದಿಲ್ಲಿಯ ವಿಶ್ವ ವಿದ್ಯಾನಿಲಯದಲ್ಲಿ ಮಾಜಿ ಉಪಕುಲಪತಿ ದೀಪಕ್ ಪೆಂಟಾಲ್ ಎಂಬುವವರ ನೇತೃತ್ವದಲ್ಲಿ ಕೇಂದ್ರ ಸರಕಾರದ ಧನ ಸಹಾಯದಿಂದ ದೇಶೀಯ ತಂತ್ರಜ್ಞಾನದ ಆಧಾರದ ಮೇಲೆ ಈ ಬಿ.ಟಿ. ಸಾಸಿವೆ ತಳಿಯನ್ನು ಅಭಿವೃದ್ಧಿ ಪಡಿಸಲಾಗಿದೆ. ಡಿ.ಎಂ.ಎಚ್.-2 ಎಂದು ಕರೆಯಲಾಗುತ್ತಿರುವ ಬಿ.ಟಿ. ಸಾಸಿವೆ ತಳಿಗೆ ವಂಶಿವಾಹಿಗಳ ತಂತ್ರಜ್ಞಾನವನ್ನು ಯಾವ ಕಂಪೆನಿ ನೀಡಿತು ಎಂಬುದನ್ನು ಮಾತ್ರ ಗುಟ್ಟಾಗಿ ಇಡಲಾಗಿದೆ. ಇದೇ ತಿಂಗಳ ಆಗಸ್ಟ್ ಹನ್ನೊಂದರಂದು ರೈತರ ಹೊಲಗಳಲ್ಲಿ ಪ್ರಯೋಗ ನಡೆಸಲು ಅನುಮತಿ ನೀಡಬೇಕೆ? ಬೇಡವೆ? ಎಂಬುದರ ಕುರಿತು ಕೇಂದ್ರ ಪರಿಸರ ಇಲಾಖೆಯಲ್ಲಿ ಚರ್ಚೆ ನಡೆಯಿತು. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಅನಿಲ್ ಮಾದವ್, ‘‘ಕೃಷಿ ಕುರಿತ ನೂತನ ಸಂಶೋಧನೆಯನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ, ಸಾಸಿವೆ ತಳಿ ಕುರಿತು ಈಗಾಗಲೇ ಪರಿಸರ ತಜ್ಞರ ಮತ್ತು ಕೃಷಿ ಹಾಗೂ ಜೈವಿಕ ತಂತ್ರಜ್ಞರ ಅಭಿಪ್ರಾಯ ಕ್ರೋಡೀಕರಿಸುವ ದೃಷ್ಟಿಕೋನದಿಂದ ಬಿ.ಟಿ.ಸಾಸಿವೆ ತಳಿ ಕುರಿತು ಅಂತರ್ಜಾಲದಲ್ಲಿ ಮಾಹಿತಿಯನ್ನು ಪ್ರಕಟಿಸಲಾಗಿದೆ’’ ಎಂದಿದ್ದಾರೆ.
ಮನುಷ್ಯನ ಆಹಾರ ಪದಾರ್ಥಗಳಲ್ಲಿ ಒಂದಾದ ಬದನೆಕಾಯಿ ಕುರಿತ ಪ್ರಯೋಗವನ್ನು ಹಿಂದಿನ ಯುಪಿಎ ಸರಕಾರ ಸಾರಾಸಗಟಾಗಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಬಿ.ಟಿ. ಸಾಸಿವೆ ತಳಿಯ ಪ್ರಯೋಗದ ಆವಶ್ಯಕತೆ ಇತ್ತೆ? ಇದರ ಹಿಂದಿರುವ ಹಿತಾಸಕ್ತಿಗಳು ಏನು? ಭಾರತದ ಹಲವು ರಾಜ್ಯಗಳಲ್ಲಿ ಅಡುಗೆ ಎಣ್ಣೆಯನ್ನಾಗಿ ಸಾಸಿವೆ ಬಳಸುವ ಕೋಟ್ಯಂತರ ಮಂದಿ ನಾಗರಿಕರಿದ್ದಾರೆ. ಅವರ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾದರೆ ಇದಕ್ಕೆ ಜವಾಬ್ದಾರಿ ಹೊರುವವರು ಯಾರು? ‘‘ಬಿ.ಟಿ. ತಳಿಗಳಿಂದ ಅಕ ಉತ್ಪಾದನೆ, ಅಕ ಇಳುವರಿ’’ ಎಂಬ ತಥಾ ಕಥಿತ ಘೋಷಣೆಯನ್ನು ಮತ್ತೊಮ್ಮೆ ಹರಿಯಬಿಡಲಾಗಿದೆ. ನೂತನ ಬಿ.ಟಿ. ಸಾಸಿವೆ ತಳಿ ಕುರಿತು ಈಗಾಗಲೇ ಪ್ರತಿಕ್ರಿಯೆ ನೀಡಿರುವ ಸುಸ್ತಿರ ಮತ್ತು ಪಾರಂಪರಿಕ ಕೃಷಿ ಅಭಿವೃದ್ಧಿ ಕುರಿತು ಪ್ರಚಾರದಲ್ಲಿ ತೊಡಗಿಸಿಕೊಂಡಿರುವ ಕವಿತಾ ಕರಗುಂಟಿ ಎಂಬವರು ಪ್ರತಿಕ್ರಿಯೆ ನೀಡಿ, ಅಕ ಇಳುವರಿ ಎಂಬುವುದು ಅಪ್ಪಟ ಸುಳ್ಳು ಎಂದಿದ್ದಾರೆ.
ಸದ್ಯದಲ್ಲಿ ಯಾವ ಕ್ಷಣದಲ್ಲಾದರೂ ಪ್ರಯೋಗಕ್ಕೆ ಅನುಮತಿ ನೀಡುವ ಸಾಧ್ಯತೆ ಇದೆ. ಈಗಾಗಲೇ ಕೇಂದ್ರ ಪರಿಸರ ಇಲಾಖೆಯಡಿ ಕಾರ್ಯ ನಿರ್ವಹಿಸುತ್ತಿರುವ ವಂಶವಾಹಿ ತಂತ್ರಜ್ಞಾನದ ಪರಿವೀಕ್ಷಣಾ ಸಮಿತಿಯು ಪ್ರಯೋಗಕ್ಕೆ ಅನುಮೋದನೆ ನೀಡಿದೆ. ಕೇಂದ್ರ ಸರಕಾರವು ಇಂತಹ ಕುಲಾಂತರಿ ತಳಿಗಳ ಪ್ರಯೋಗಕ್ಕೆ ಮುನ್ನ ಜೈವಿಕ ಪರಿಸರ ಮತ್ತು ಈಗಾಗಲೇ ಅಸ್ತಿತ್ವದಲ್ಲಿರುವ ದೇಸಿ ತಳಿಗಳು ಕಲುಷಿತವಾಗದಂತೆ ರಕ್ಷಿಸಲು ಸರಕಾರ ಏನೇನು ಕ್ರಮ ಕೈಗೊಂಡಿದೆ ಎಂಬುದನ್ನು ಜನತೆಗೆ ಉತ್ತರಿಸಬೇಕಿದೆ. ಆಶ್ಚರ್ಯದ ಸಂಗತಿಯೆಂದರೆ, ಭಾರತದಲ್ಲಿ ಬಿ.ಟಿ. ಸಾಸಿವೆ ಪ್ರಯೋಗಕ್ಕೆ ಬೆಂಬಲ ಸೂಚಿಸಿರುವ ದಕ್ಷಿಣ ಏಷ್ಯಾದ ಜೈವಿಕ ತಂತ್ರಜ್ಞಾನ ಕೇಂದ್ರ ಸಂಸ್ಥೆಯು, ಭಾರತದಲ್ಲಿ ಬೆಳೆಯುತ್ತಿರುವ ಜನಸಂಖ್ಯೆಗೆ ಅನುಗುಣವಾಗಿ ಖಾದ್ಯ ತೈಲ ಉತ್ಪಾದನೆಯಾಗುತ್ತಿಲ್ಲ. ಹಾಗಾಗಿ ವಿದೇಶಗಳಿಂದ ಆಮದು ಮಾಡಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಅಕ ಇಳುವರಿಯ ಎಣ್ಣೆ ಕಾಳುಗಳ ಬೆಳೆಗಾಗಿ ಬಿ.ಟಿ. ಸಾಸಿವೆ ಪ್ರಯೋಗಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸಿದೆ.
ಜನಸಂಖ್ಯೆಯ ಅನುಗುಣವಾಗಿ ಅಡುಗೆ ಎಣ್ಣೆ ಉತ್ಪಾದಿಸಲು ನಮಗೆ ಪರ್ಯಾಯ ಮಾರ್ಗವಿಲ್ಲವೆ? ಈ ದೇಶದಲ್ಲಿ ತಾಳೆ ಬೆಳೆಯನ್ನು ಅಭಿವೃದ್ಧಿ ಪಡಿಸುವ ಅವಕಾಶವಿದೆ, ಅದೇ ರೀತಿ ದೇಶೀ ತಳಿಗಳಾದ ಹಾಗೂ ದೇಶದಲ್ಲಿನ ವಿವಿಧ ಹವಾಮಾನ ಮತ್ತು ಮಣ್ಣಿನ ಗುಣಕ್ಕೆ ಅನುಗುಣವಾಗಿ ಹೊಂದಿಕೊಳ್ಳುವ ಶೇಂಗಾ, ಸೋಯಾ, ಎಳ್ಳು, ಸಾಸಿವೆ ಇತ್ಯಾದಿ ತಳಿಗಳು ಚಾಲ್ತಿಯಲ್ಲಿವೆ. ಇವುಗಳನ್ನು ಮಳೆಗಾಲದಲ್ಲಿ ಬೆಳೆಯುವಂತೆ ರೈತರಿಗೆ ಪ್ರೋತ್ಸಾಹ ನೀಡುವ ಬದಲು, ಯಾವುದೇ ಖಾತರಿ ಅಥವಾ ಸುರಕ್ಷತೆ ಇಲ್ಲದ ಕುಲಾಂತರಿ ತಳಿಗಳ ಬೆನ್ನ ಹಿಂದೆ ಮೋದಿ ನೇತೃತ್ವದ ಸರಕಾರ ಏಕೆ ಓಡತೊಡಗಿದೆ? ಇದಕ್ಕೆ ಕಾಲವೇ ಉತ್ತರಿಸಬೇಕು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X