ಬಂಪರ್ ಬೆಳೆಯಿಂದಾಗಿ ಈಗ ಗ್ರಾಹಕರಿಗೆ ‘ಈರುಳ್ಳಿ ಪರಿಮಳ’ದ ಹಾಲಿನ ‘ಯೋಗ’
ಇಂದೋರ, ಸೆ.10: ಈ ಬಾರಿ ಈರುಳ್ಳಿಯ ಬಂಪರ್ ಬೆಳೆಯಿಂದಾಗಿ ಗಿರಾಕಿಗಳಿಲ್ಲದೆ ಬೆಲೆಗಳು ಪಾತಾಳಕ್ಕಿಳಿಯುತ್ತಿವೆ. ಹೀಗಾಗಿ ಈ ಪ್ರದೇಶದಲ್ಲಿಯ ರೈತರು ತಾವು ಬೆಳೆದಿರುವ ಈರುಳ್ಳಿಯನ್ನು ಹಾಲು ನೀಡುವ ತಮ್ಮ ಜಾನುವಾರುಗಳಿಗೆ ತಿನ್ನಿಸುತ್ತಿದ್ದಾರೆ. ಹೀಗಾಗಿ ಗ್ರಾಹಕರಿಗೆ ಈಗ ಈರುಳ್ಳಿ ಪರಿಮಳದ ಹಾಲು ಕುಡಿಯುವ ‘ಯೋಗ’ ಬಂದೊದಗಿದೆ!
ಹಲವಾರು ಗ್ರಾಹಕರು ಹಾಲಿಗೆ ಈರುಳ್ಳಿ ವಾಸನೆ ಬರುತ್ತಿದೆಯೆಂದು ದೂರಿಕೊಂಡಿದ್ದು, ಈ ಬಗ್ಗೆ ತನಿಖೆ ನಡೆಸಿದಾಗ ಕೊಳ್ಳುವವರಿಲ್ಲದೆ ರಾಶಿರಾಶಿಯಾಗಿ ಬಿದ್ದಿರುವ ಈರುಳ್ಳಿಯನ್ನು ರೈತರು ತಮ್ಮ ಜಾನುವಾರುಗಳಿಗೆ ತಿನ್ನಿಸುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಹಾಲು ನೀಡುವ ಜಾನುವಾರುಗಳಿಗೆ ಈರುಳ್ಳಿಯನ್ನು ತಿನ್ನಿಸದಂತೆ ಅವರನ್ನು ನಾವು ಕೋರಿದ್ದೇವೆ ಎಂದು ಇಂದೋರ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಭರತ್ ಮಥುರಾವಾಲಾ ಸುದ್ದಿಸಂಸ್ಥೆಗೆ ತಿಳಿಸಿದರು.
Next Story





