ನಾಳೆ ಸುರತ್ಕಲ್‌ನಲ್ಲಿ ಮೀನುಗಾರರ ಸಮಾವೇಶ
ಮಂಗಳೂರು, ಸೆ.10: ದ.ಕ. ಜಿಲ್ಲಾ ಮೀನುಗಾರರ ಪ್ರಕೋಷ್ಠದ ವತಿಯಿಂದ ಮಂಗಳೂರು ಉತ್ತರ ವಲಯ ಮೀನುಗಾರರ ಸಮಾವೇಶವು ಸೆ.12ರಂದು ಸುರತ್ಕಲ್‌ನಲ್ಲಿ ನಡೆಯಲಿದೆ.
ಶನಿವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಅಂದು ಸಂಜೆ 4ಕ್ಕೆ ತಡಂಬೈಲ್ ಕುಲಾಲ ಭವನದಲ್ಲಿ ನಡೆಯುವ ಸಮಾವೇಶವನ್ನು ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಉದ್ಘಾಟಿಸುವರು. ಜಿಲ್ಲಾ ಬಿಜೆಪಿ ಅಧ್ಯಕ್ಷ ಸಂಜೀವ ಮಠಂದೂರು ಅಧ್ಯಕ್ಷತೆ ವಹಿಸುವರು. ಈ ಸಮಾವೇಶದಲ್ಲಿ ಮೀನುಗಾರ ಹಿರಿಯ ಸಾಧಕರಿಗೆ, ಪ್ರತಿಭಾವಂತ ವಿದ್ಯಾರ್ಥಿಗಳನ್ನು ಅಭಿನಂದಿಸಲಾಗುವುದು ಎಂದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಪ್ರಸಾದ್ ಕೋಡಿಕಲ್, ಯಶ್ಪಾಲ್ ಸಾಲ್ಯಾನ್, ರಾಜೀವ್ ಕಾಂಚನ್, ರಘುವೀರ್ ಉಪಸ್ಥಿತರಿದ್ದರು.
Next Story





