ಮಹಾಕಾಳಿಪಡ್ಪು: ಅಂಗಡಿಯಲ್ಲಿ ಕಳ್ಳತನ

ಮಂಗಳೂರು, ಸೆ.11: ನಗರದ ಜೆಪ್ಪು ಮಹಾಕಾಳಿಪಡ್ಪುವಿನಲ್ಲಿರುವ ಅಂಗಡಿಯೊಂದರ ಶಟರ್ ಮುರಿದು ಒಳನುಗ್ಗಿದ ಕಳ್ಳರು ಸಾವಿರಾರು ರೂ.ವೌಲ್ಯದ ಸೊತ್ತುಗಳನ್ನು ಕಳವುಗೈದಿದ್ದಾರೆ.
ಜೆಪ್ಪು ಮಹಾಕಾಳಿಪಡ್ಪುವಿನ ರೈಲ್ವೆ ಹಳಿಯ ಬಳಿಯಲ್ಲಿರುವ.ಎಮ್.ಕೆ.ಎಲೆಕ್ಟ್ರಾನಿಕ್ಸ್ ಅಂಗಡಿಗೆ ನುಗ್ಗಿದ ಕಳ್ಳರು 5 ಸಾವಿರ ರೂ. ನಗದು, 9 ಸಾವಿರ ರೂ. ವೌಲ್ಯದ ಸಿಗರೇಟ್, ಎರಡು ಮೊಬೈಲ್ ಫೋನ್‌ಗಳನ್ನು ಕದ್ದೊಯ್ದಿದ್ದಾರೆ. ಈ ಬಗ್ಗೆ ಅಂಗಡಿಯ ಮಾಲಕ ಮಹೇಶ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ಕಳವಾದ ಅಂಗಡಿಯ ಸಮೀಪದ ರೈಲ್ವೆ ಹಳಿಯ ಆಚೆ ಬದಿಯಲ್ಲಿ ಪಾಂಡೇಶ್ವರ ಠಾಣೆಯ ಪೊಲೀಸರು ರಾತ್ರಿ ಪಹರೆ ನಡೆಸುತ್ತಿದ್ದು, ಪೊಲೀಸರಿಗೆ ಕಳವು ಕೃತ್ಯ ತಿಳಿಯದಿರುವುದು ವಿಪರ್ಯಾಸ ಎನ್ನುವ ಮಾತುಗಳು ಸಾರ್ವಜನಿಕರಿಂದ ಕೇಳಿಬರುತ್ತಿದೆ ಎನ್ನಲಾಗಿದೆ.
Next Story





