ನಮ್ಮದು ಶುದ್ಧ ಹಿಂದೂ ರಕ್ತ, ಕಾಂಗ್ರೇಸ್‌ನದ್ದು ಘೀಯಾಸುದ್ದೀನ್ ವಂಶದ ರಕ್ತ : ಸಂಸದ ಹೆಗಡೆ

ಭಟ್ಕಳ, ಸೆ.11: ನಮ್ಮದು ಶುದ್ಧ ಹಿಂದೂ ರಕ್ತ. ಆದರೆ ಕಾಂಗ್ರೇಸ್‌ನದ್ದು ಘೀಯಾಸುದ್ದೀನ್ ವಂಶದ ರಕ್ತ ಎಂದು ಸಂಸದ ಅನಂತ ಕುಮಾರ ಹೆಗಡೆ ಹೇಳಿದ್ದಾರೆ.
ಶನಿವಾರ ಭಟ್ಕಳದಲ್ಲಿ ಉತ್ತರಕನ್ನಡ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಕಾಂಗ್ರೇಸ್‌ನದ್ದು ಘೀಯಾಸುದ್ದೀನ್ ವಂಶದ ರಕ್ತ. ಇಂತಹ ಪಕ್ಷದಿಂದ ದೇಶಕ್ಕೆ ನರೇಂದ್ರ ಮೋದಿಯಂತಹ ಪ್ರಧಾನಿಯನ್ನು ನೀಡಲು ಸಾಧ್ಯವೇ ಇಲ್ಲ. ನರಿಯ ಹೊಟ್ಟೆಯಲ್ಲಿ ನರಿ, ಸಿಂಹದ ಹೊಟ್ಟೆಯಲ್ಲಿ ಸಿಂಹವೇ ಹುಟ್ಟುತ್ತದೆ. ಮುಂದಿನ ಬಾರಿ ಇಡೀ ದೇಶವ್ನನೇ ನಮ್ಮ ಪಕ್ಷ ಆಳಲಿದೆ. ನಮಗೆ ಜಾತ್ಯತೀತರ ಮತಬೇಡ, ಮುಂದಿನ ಚುನಾವಣೆಯ ರಣಕಹಳೆ ಭಟ್ಕಳದಿಂದಲೇ ಆರಂಭವಾಗಲಿದೆ ಎಂದು ಅನಂತ ಕುಮಾರ್ ಹೆಗಡೆ ಹೇಳಿದರು.
Next Story





