Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸ್ವಾತಂತ್ರ್ಯ ಹೋರಾಟ ಸಂದರ್ಭದ ವಂಚಕರೇ ಈಗ...

ಸ್ವಾತಂತ್ರ್ಯ ಹೋರಾಟ ಸಂದರ್ಭದ ವಂಚಕರೇ ಈಗ ದೇಶಪ್ರೇಮಿಗಳಂತೆ ನಟಿಸುತ್ತಿದ್ದಾರೆ: ಪಿಣರಾಯಿ ವಿಜಯನ್

ವಾರ್ತಾಭಾರತಿವಾರ್ತಾಭಾರತಿ11 Sept 2016 4:02 PM IST
share
ಸ್ವಾತಂತ್ರ್ಯ ಹೋರಾಟ ಸಂದರ್ಭದ ವಂಚಕರೇ ಈಗ ದೇಶಪ್ರೇಮಿಗಳಂತೆ ನಟಿಸುತ್ತಿದ್ದಾರೆ: ಪಿಣರಾಯಿ ವಿಜಯನ್

ತಿರವನಂತಪುರ,ಸೆಪ್ಟಂಬರ್ 11: ಸ್ವಾತಂತ್ರ್ಯಸಮರ ಕಾಲದ ವಂಚಕರು, ದ್ರೋಹಿಗಳಲ್ಲಿ ಕೆಲವರು ಈಗ ದೇಶಪ್ರೇಮಿಗಳಂತೆ ನಟಿಸುತ್ತಿದ್ದಾರೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ ಎಂದು ವರದಿಯಾಗಿದೆ. ಯಾರು ದೇಶಪ್ರೇಮಿಗಳೆಂಬ ಪ್ರಶ್ನೆಯನ್ನು ಇವರೇ ಎತ್ತುತ್ತಿದ್ದಾರೆ. ದೇಶಪ್ರೇಮವನ್ನು ಇವರೇ ದುರ್ವಾಖ್ಯಾನ ನಡೆಸುತ್ತಿದ್ದಾರೆ. ಇವರಲ್ಲಿರುವುದು ಫ್ಯಾಶಿಸ್ಟ್ ಮನಸ್ಸು ಮತ್ತು ಸಿದ್ಧಾಂತವಾಗಿದೆ ಎಂದು ಕೇರಳ ಮುಖ್ಯಮಂತ್ರಿ ಆರೋಪಿಸಿದ್ದಾರೆ. ಅವರು ವಕ್ಕಂ ಖಾದರ್ ಹುತಾತ್ಮ ದಿನದ ವಾರ್ಷಿಕ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತಾಡುತ್ತಿದ್ದರು.

 ಊರಿನಲ್ಲಾದ ಸಾಮಾಜಿಕ ಪರಿವರ್ತನೆಗಳ ಕುರಿತು ಪ್ರಜ್ಞಾ ಪೂರ್ವಕವಾಗಿ ಕೆಲವು ಕೇಂದ್ರಗಳು ಮೌನತಾಳಿವೆ. ವಕ್ಕಂ ಖಾದರ್ ರಂತಹ ಸ್ವಾತಂತ್ರ್ಯ ಧೀರರಾದ ಸ್ವಾತಂತ್ರ್ಯ ಸಮರ ಸೇನಾನಿಗಳಿಗೆ ಬ್ರಿಟಿಷ್ ಸಾಮ್ರಾಜ್ಯದ ನೇಣಿನ ಕುಣಿಕೆಯ ಮುಂದೆ ದೃಢವಾಗಿ ನಿಲ್ಲಲು ಸಾಧ್ಯವಾಗಿದೆ. ಆದರೆ ಸ್ವಯಂ ಘೋಷಿತ ದೇಶಪ್ರೇಮಿಗಳಾಗಿ ನಟನೆ ಮಾಡುವವರಲ್ಲಿ ಕೆಲವರು ಕ್ಷಮೆ ಕೇಳಿ ಜೀವ ಉಳಿಸಿಕೊಂಡವರು ಆಗಿದ್ದಾರೆ ಎಂದು ಮುಖ್ಯಮಂತ್ರಿ ಹೇಳಿದರು.

ಜಾತೀಯ ಧ್ರವೀಕರಣ ಬಲಪಡಿಸುವ ಕ್ರಮಗಳು ಜರಗುತ್ತಿವೆ. ಜಾತೀಯ, ಧಾರ್ಮಿಕ ಭಿನ್ನಮತಗಳ ವಿರುದ್ಧ ವಕ್ಕಂ ಖಾದರ್ ಅವರ ಧೀರ ತ್ಯಾಗಗಳು ಒಂದು ಶಕ್ತಿಯನ್ನು ತಂದುಕೊಟ್ಟಿದೆ.

ನಾವು ಅನುಭವಿಸುತ್ತಿರುವ ಸ್ವಾತಂತ್ರ್ಯ ಹಕ್ಕುಗಳೆಲ್ಲವೂ ಒಂದು ದಿವಸದಲ್ಲಿ ಸಿಕ್ಕಿದ್ದೇನೂ ಅಲ್ಲ. ಸ್ವಾತಂತ್ರ್ಯ ಮತ್ತು ನವೋತ್ಥಾನದ ದಾರಿ ಹೂಗಳ ಹಾಸು ಆಗಿರಲಿಲ್ಲ. ಬಹುದೊಡ್ಡ ವಿರೋಧ ಎದುರಿಸಿ, ಜೀವತ್ಯಾಗ ಸಹಿಸಿ ಇಂದು ನಾವು ಈ ನೆಲೆಗೆ ಬಂದಿದ್ದೇವೆ. ಈ ವಿಷಯಗಳನ್ನು ಮರೆಸುವಂತಹ ಪ್ರಶ್ನೆಗಳು ಇಂದು ಕೆಲವು ಕೇಂದ್ರಗಳಿಂದ ಕೇಳಿ ಬರುತ್ತಿವೆ. ಹೊಸತಲೆಮಾರು ಕಡ್ಡಾಯವಾಗಿ ಅರಿತಿರಬೇಕಾದ ಇತಿಹಾಸ ಪುರುಷ ವಕ್ಕಂಖಾದರ್ ಆಗಿದ್ದಾರೆ. ಭಗತ್‌ಸಿಂಗ್‌ರ ಜೀವನದಲ್ಲಿ ಸಂಭಂವಿಸಿದ್ದಕ್ಕೆ ಸಮಾನವಾಗಿದ್ದು ಐಎನ್‌ಎ ಹೀರೋ ವಕ್ಕಂ ಖಾದರ್‌ರ ಜೀವನದಲ್ಲಿಯೂ ಸಂಭವಿಸಿದೆ. ನಮ್ಮ ಹೀರೋ ಸಂಕಲ್ಪಿಗಳಲ್ಲಿ ಕಾಲ ಯಾವುದಾದರೂ ತೊಂದರೆ ತಂದೊಡ್ಡಿದೆಯೇ ಎಂದು ಪರಿಶೀಲಿಸಬೇಕಾಗಿದೆ.

ವಕ್ಕಂ ಖಾದರ್ ಸ್ಮಾರಕ ನಿರ್ಮಿಸಲು ಸರಕಾರದಿಂದ ಕ್ರಮಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಹೇಳಿದ್ದಾರೆ.ಎಂಎಂ ಹಸನ್ ಅಧ್ಯಕ್ಷತೆಯನ್ನು ವಹಿಸಿದರು. ಆನತ್ತಲಟ್ಟ ಆನಂದನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶೈಲಜಾ ಬೇಗಂ, ಎಂಎಸ್ ಫೈಸಲ್‌ಖಾನ್, ಇಎಂ ನಜೀಬ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಂಎಂ ಇಕ್ಬಾಲ್ ಸ್ವಾಗತಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X