ಜೆಮಿ ಮರ್ರೆ, ಬ್ರುನೊ ಸೊರೆಸ್‌ಗೆ ಪುರುಷರ ಡಬಲ್ಸ್ ಪ್ರಶಸ್ತಿ

ನ್ಯೂಯಾರ್ಕ್, ಸೆ.11: ಬ್ರಿಟನ್‌ನ ಜೆಮಿ ಮರ್ರೆ ಅವರು ಬ್ರೆಝಿಲ್‌ನ ಬ್ರುನೊ ಸೊರೆಸ್ ಜೊತೆಗೂಡಿ ಅಮೆರಿಕನ್ ಓಪನ್‌ನ ಪುರುಷರ ಡಬಲ್ಸ್ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಶನಿವಾರ ನಡೆದ ಪುರುಷರ ಡಬಲ್ಸ್ ಫೈನಲ್‌ನಲ್ಲಿ ನಾಲ್ಕನೆ ಶ್ರೇಯಾಂಕಿತ ಜೋಡಿ ಮರ್ರೆ-ಸೊರೆಸ್ ಸ್ಪೇನ್‌ನ ಶ್ರೇಯಾಂಕರಹಿತ ಪಾಬ್ಲೊ ಕಾರ್ರೆನೊ ಬುಸ್ಟೊ ಹಾಗೂ ಗುಲೆರ್ಮೊ ಗಾರ್ಸಿಯಾ-ಲೊಪೆಝ್ ವಿರುದ್ಧ 6-2, 6-3 ಸೆಟ್‌ಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಯುಎಸ್ ಓಪನ್‌ನ ಡಬಲ್ಸ್‌ನಲ್ಲಿ ಪ್ರಶಸ್ತಿ ಜಯಿಸಿರುವ ಜೆಮ್ಮಿ ಮರ್ರೆ ಸಹೋದರ ಆ್ಯಂಡಿ ಮರ್ರೆ ಸಾಲಿಗೆ ಸೇರ್ಪಡೆಯಾದರು.
ಜನವರಿಯಲ್ಲಿ ಆಸ್ಟ್ರೇಲಿಯನ್ ಓಪನ್‌ನ್ನು ಜಯಿಸುವ ಮೂಲಕ ಮೊದಲ ಬಾರಿ ಗ್ರಾನ್‌ಸ್ಲಾಮ್ ಪ್ರಶಸ್ತಿ ಜಯಿಸಿದ್ದ ಮರ್ರೆ ಹಾಗೂ ಸೊರೆಸ್ ಪ್ರಸ್ತುತ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ನಿಕೊಲಸ್ ಮಹೂಟ್ ಹಾಗೂ ಪಿರ್ರೆ-ಹ್ಯೂಸ್ ಹೆರ್ಬರ್ಟ್‌ರನ್ನು ಮಣಿಸುವುದರೊಂದಿಗೆ ಫೈನಲ್‌ಗೆ ತಲುಪಿದ್ದರು.
ಶನಿವಾರದ ಫೈನಲ್‌ನಲ್ಲಿ ಮೊದಲ ಸೆಟ್‌ನ ಮಧ್ಯದಲ್ಲೇ ಮಂಡಿನೋವು ಕಾಣಿಸಿಕೊಂಡ ಕಾರಣ ಮರ್ರೆ ಚಿಕಿತ್ಸೆ ಪಡೆದಿದ್ದರು. ಆದಾಗ್ಯೂ ಪಂದ್ಯವನ್ನು ಮುಂದುವರಿಸಿ ಪ್ರಶಸ್ತಿ ಎತ್ತಿ ಹಿಡಿದರು.
ಜೆಮಿ ಮರ್ರೆ ಸಹೋದರ ಆ್ಯಂಡಿ ಮರ್ರೆ 2012ರಲ್ಲಿ ನ್ಯೂಯಾರ್ಕ್‌ನಲ್ಲಿ ಯುಎಸ್ ಓಪನ್ ಟೂರ್ನಿಯಲ್ಲಿ ಸಿಂಗಲ್ಸ್ ಪ್ರಶಸ್ತಿಯನ್ನು ಜಯಿಸಿದ್ದರು. ಈ ವರ್ಷ ಅವರು ಕ್ವಾರ್ಟರ್ ಫೈನಲ್‌ನಲ್ಲಿ ಜಪಾನ್‌ನ ಕೀ ನಿಶಿಕೋರಿ ವಿರುದ್ಧ ಸೋತು ಟೂರ್ನಿಯಿಂದ ಹೊರ ನಡೆದಿದ್ದರು.







