ಸ್ಕ್ವಾಷ್ ರ್ಯಾಂಕಿಂಗ್: ಜೋಶ್ನಾ ಚಿನ್ನಪ್ಪಗೆ ಭಡ್ತಿ

ಹೊಸದಿಲ್ಲಿ, ಸೆ.11: ಪ್ರೊಫೆಶನಲ್ ಸ್ಕ್ವಾಷ್ ಅಸೋಸಿಯೇಶನ್(ಪಿಎಸ್‌ಎ) ರ್ಯಾಂಕಿಂಗ್‌ನಲ್ಲಿ ಭಾರತದ ಸ್ಕ್ವಾಷ್ ಆಟಗಾರ್ತಿ ಜೋಶ್ನಾ ಚಿನ್ನಪ್ಪ 10ನೆ ಸ್ಥಾನಕ್ಕೆ ಭಡ್ತಿ ಪಡೆದಿದ್ದಾರೆ.
ಇತ್ತೀಚೆಗೆ 12ನೆ ಸ್ಥಾನ ಕುಸಿದಿದ್ದ ಚಿನ್ನಪ್ಪ ಈಗ ಮತ್ತೊಮ್ಮೆ ಟಾಪ್-10ಕ್ಕೆ ವಾಪಸಾಗಿದ್ದಾರೆ. ಭಾರತದ ಇನ್ನೋರ್ವ ಆಟಗಾರ್ತಿ ದೀಪಿಕಾ ಪಲ್ಲಿಕಲ್ 19ನೆ ಸ್ಥಾನದಲ್ಲಿದ್ದಾರೆ.
ಪುರುಷರ ರ್ಯಾಂಕಿಂಗ್‌ನಲ್ಲಿ ಸೌರವ್ ಘೋಷಾಲ್ 17ನೆ ಸ್ಥಾನದಿಂದ 21ನೆ ಸ್ಥಾನಕ್ಕೆ ಕುಸಿದಿದ್ದಾರೆ. ಮಹೇಶ್ ಮಾನ್‌ಗಾಂವ್ಕರ್ 60ನೆ ಸ್ಥಾನ ಪಡೆದಿದ್ದಾರೆ. ವಿಕ್ರಂ ಮಲ್ಹೋತ್ರಾ 73ನೆ ಸ್ಥಾನ ಉಳಿಸಿಕೊಂಡಿದ್ದಾರೆ.
ಹರಿಂದರ್ ಪಾಲ್ ಸಿಂಗ್ 79ನೆ ಸ್ಥಾನಕ್ಕೇರಿದ್ದಾರೆ. ಮಹಿಳೆಯರ ವಿಭಾಗದಲ್ಲಿ ಸಚಿಕಾ ಇಂಗ್ಳೆ 84ನೆ ಸ್ಥಾನಕ್ಕೆ ಕುಸಿದಿದ್ದಾರೆ. ಚಿನ್ನಪ್ಪ ಹಾಗೂ ಘೋಷಾಲ್ ಇತ್ತೀಚೆಗೆ ಕೊನೆಗೊಂಡ 100,000 ಡಾಲರ್ ಬಹುಮಾನ ಮೊತ್ತದ ಚೀನಾ ಓಪನ್‌ನಲ್ಲಿ ಕ್ವಾರ್ಟರ್ ಫೈನಲ್‌ಗೆ ತಲುಪಿದ್ದರು.
Next Story





