ಅರಫಾತ್‌ಗೆ ಹರಿದುಬಂದ ಯಾತ್ರಿಕರ ಮಹಾಪೂರ

ಮಕ್ಕಾ,ಸೆ.11: ಪವಿತ್ರ ಹಜ್ ಯಾತ್ರೆಯು ರವಿವಾರ ಮಹತ್ವದ ಹಂತವನ್ನು ತಲುಪಿದ್ದು, ಜಗತ್ತಿನೆಲ್ಲೆಡೆಯಿಂದ ಆಗಮಿಸಿದ 15 ಲಕ್ಷಕ್ಕೂ ಅಧಿಕ ಮುಸ್ಲಿಮರು ಅರಫಾತ್ ಬೆಟ್ಟವನ್ನೇರಿ ಪ್ರಾರ್ಥನೆಗಳನ್ನು ಸಲ್ಲಿಸಿದರು. ಇಂದು ಮುಂಜಾನೆಯಾಗುತ್ತಿದ್ದಂತೆಯೇ ಲಕ್ಷಾಂತರ ಮುಸ್ಲಿಮರು, ಪವಿತ್ರ ಮಕ್ಕಾ ನಗರದಿಂದ 15 ಕಿ.ಮೀ. ದೂರದ ಅರಫಾತ್ ಬೆಟ್ಟದಲ್ಲಿ ಹಾಗೂ ಅದರ ಸುತ್ತಮುತ್ತಲೂ ಇರುವ ವಿಶಾಲವಾದ ಬಯಲು ಪ್ರದೇಶದಲ್ಲಿ ಜಮಾಯಿಸಿದರು.
‘ಇಹ್ರಾಂ’ ಎಂದು ಕರೆಯಲಾಗುವ ಬಿಳಿವಸ್ತ್ರವನ್ನು ಧರಿಸಿದ ಯಾತ್ರಿಕರ ಪ್ರವಾಹದಿಂದಾಗಿ ದೂರದಲ್ಲಿ ಇಡೀ ಅರಫಾತ್ ಬೆಟ್ಟವು ಶ್ವೇತಮಯವಾಗಿ ಕಂಗೊಳಿಸುತ್ತಿತ್ತು.
Next Story





