ನ.5: ಉಪ್ಪಿನಂಗಡಿ ಹೋಬಳಿ ಮಟ್ಟದ ಕಸಾಪ ಸಮ್ಮೇಳನ
ಉಪ್ಪಿನಂಗಡಿ, ಸೆ.11: ಕಸಾಪ ಪುತ್ತೂರು ತಾಲೂಕು ಘಟಕದ ಆಶ್ರಯದಲ್ಲಿ ನ.5ರಂದು ಉಪ್ಪಿನಂಗಡಿಯಲ್ಲಿ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.
ತಾಲೂಕು ಘಟಕದ ಅಧ್ಯಕ್ಷ ಐತಪ್ಪ ನಾಯ್ಕ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಸಂದರ್ಭ ರಚಿಸಲಾದ ಹೋಬಳಿ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನ ಸಮಿತಿಯ ಗೌರವಾಧ್ಯಕ್ಷರಾಗಿ ಯು.ವಿ.ಭಟ್, ಅಧ್ಯಕ್ಷರಾಗಿ ಧನ್ಯಕುಮಾರ್ ರೈ, ಕಾರ್ಯದರ್ಶಿಯಾಗಿ ರವೀಂದ್ರ ದರ್ಬೆ, ಕೋಶಾಧಿಕಾರಿಯಾಗಿ ಕರುಣಾಕರ ಸುವರ್ಣ, ಸಂಚಾಲಕರಾಗಿ ಸುಂದರ ಗೌಡ ಅರ್ಬಿ ಅವರನ್ನು ನೇಮಕ ಮಾಡಲಾಯಿತು.
Next Story





