Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತಲೆಹಿಡುಕರಿಂದ ಯುವತಿಯನ್ನು ಬಚಾವ್ ಮಾಡಿದ...

ತಲೆಹಿಡುಕರಿಂದ ಯುವತಿಯನ್ನು ಬಚಾವ್ ಮಾಡಿದ ಟ್ರಾಫಿಕ್ ಪೇದೆ

ವಾರ್ತಾಭಾರತಿವಾರ್ತಾಭಾರತಿ12 Sept 2016 8:33 AM IST
share
ತಲೆಹಿಡುಕರಿಂದ ಯುವತಿಯನ್ನು ಬಚಾವ್ ಮಾಡಿದ ಟ್ರಾಫಿಕ್ ಪೇದೆ

ಕೊಲ್ಕತ್ತಾ, ಸೆ.12: ಕಾಲೇಜು ಯುವತಿಯನ್ನು ಅಪಹರಿಸಿ ಕೆಂಪುದೀಪ ಪ್ರದೇಶಕ್ಕೆ ತಳ್ಳುವ ಪಿಂಪ್‌ಗಳ ಸಂಚನ್ನು ಟ್ರಾಫಿಕ್ ಪೊಲೀಸ್ ಒಬ್ಬರು ಸಮಯಪ್ರಜ್ಞೆ ಮೆರೆದು ವಿಫಲಗೊಳಿಸಿದ ಘಟನೆ ಇಲ್ಲಿನ ಕೆಂಪುದೀಪ ಪ್ರದೇಶದ ಸಮೀಪ ನಡೆದಿದೆ.

ಶನಿವಾರ ರಾತ್ರಿ 10ರ ಬಳಿಕ ಟ್ರಾಫಿಕ್ ಪೊಲೀಸ್ ರಣಬೀರ್ ದಾಸ್, ಪಾನಪತ್ತರಾಗಿ ಬೈಕ್ ಚಲಾಯಿಸುವವರಿಗೆ ಬಲೆ ಬೀಸಲು ಚಿತ್ಪುರ ರಸ್ತೆ ಬಳಿ ಕಾವಲು ಕಾಯುತ್ತಿದ್ದರು. ನಿಯಮ ಉಲ್ಲಂಘಿಸಿದ್ದಕ್ಕಾಗಿ ಒಂದು ಬೈಕ್ ಹಿಡಿದ ಸಂದರ್ಭ, ಪಕ್ಕದಲ್ಲಿ ಹುಡುಗಿಯ ಚೀರಾಟ ಕೇಳಿಬಂತು. ತಕ್ಷಣ ಅಲ್ಲಿಗೆ ಧಾವಿಸಿದಾಗ, ಮಬ್ಬು ಬೆಳಕಿನಲ್ಲಿ ಕೆಲ ಯುವಕರು, ಯುವತಿಯ ಸುತ್ತ ನೆರೆದಿದ್ದುದು ಗಮನಕ್ಕೆ ಬಂತು. ದಾಸ್ ಅವರ ಪ್ರಕಾರ, ಈ ಯುವಕರು ಸೋನಾಗಚ್ಚಿ ಪ್ರದೇಶದ ವೇಶ್ಯಾದಲ್ಲಾಳಿಗಳು. ಯಾರೂ ಆ ಪ್ರದೇಶವನ್ನು ಪ್ರವೇಶಿಸುವ ಧೈರ್ಯ ಮಾಡುವುದಿಲ್ಲ. ಈ ಯುವಕರು ಯುವತಿಯರಿಗೆ ಬಲೆ ಬೀಸಿ ಅವರನ್ನು ಮಾಂಸದಂಧೆಗೆ ತಳ್ಳುವವರು.

ರಿವಾಲ್ವರ್ ತೆಗೆದುಕೊಂಡು ಅವರತ್ತ ದಾಸ್ ಶೂಟ್ ಮಾಡಿದರು. ತಕ್ಷಣ ಯುವತಿಯನ್ನು ಅಲ್ಲಿ ಬಿಟ್ಟು, ಯುವಕರು ಪರಾರಿಯಾದರು. "ದಾಸ್ ಅಲ್ಲಿಗೆ ಬಂದಾಗ ಯುವತಿ ಭೀತಿಯಿಂದ ನಡುಗುತ್ತಿದ್ದಳು. ಹತ್ತು ನಿಮಿಷ ಕಾಲ ಆಕೆಗೆ ಮಾತನಾಡಲೂ ಸಾಧ್ಯವಾಗಲಿಲ್ಲ. ಆಕೆ ಸಾವರಿಸಿಕೊಳ್ಳಲು ದಾಸ್ ಅವಕಾಶ ನೀಡಿದರು" ಎಂದು ಟ್ರಾಫಿಕ್ ಗಾರ್ಡ್ ಉಸ್ತುವಾರಿಯ ಅಧಿಕಾರಿ ಅಲೋಕ್ ಸನ್ಯಾಲ್ ವಿವರಿಸಿದರು.

ನಾರ್ತ್ 24 ಪರಗಣಾ ಜಿಲ್ಲೆಯ ಖರ್ದ್ ಒರದೇಶದ ನಿವಾಸಿಯಾಗಿದ್ದ ಯುವತಿ ಉತ್ತರ ಕೊಲ್ಕತ್ತಾ ಕಾಲೇಜಿನಲ್ಲಿ ಮನಃಶಾಸ್ತ್ರ ಅಧ್ಯಯನ ಮಾಡುತ್ತಿದ್ದಳು. ಮನೆಯಲ್ಲಿ ಯಾತನೆ ಹೆಚ್ಚಿದ ಹಿನ್ನೆಲೆಯಲ್ಲಿ ಬೆಳಗ್ಗೆ ಕೊಲ್ಕತ್ತಾ ಬಿಟ್ಟು ಎಸ್ಪಾಂಡೆ ಸೇರಿದ್ದಳು. ಇಡೀ ದಿನ ಅಲೆದಾಡಿ ಕತ್ತಲಾಗುವ ವೇಳೆಗೆ ಕಾಲೇಜಿನತ್ತ ಹೆಜ್ಜೆ ಹಾಕಿದ್ದಳು. ಆಕೆಯನ್ನು ಅನುಸರಿಸಿದ ಯುವಕರ ಗುಂಪು ಆಕೆಯನ್ನು ಸುತ್ತುವರಿದಿತ್ತು ಎನ್ನುವುದು ಆಕೆಯನ್ನು ವಿಚಾರಿಸಿದಾಗ ತಿಳಿದುಬಂತು. ಆಕೆಯನ್ನು ಬರ್ಟೋಲಾ ಠಾಣೆವರೆಗೂ ಕರೆದೊಯ್ದ ಪೇದೆ, ಪಾಲಕರಿಗೆ ಸುದ್ದಿ ಮುಟ್ಟಿಸಿದರು.

share
ವಾರ್ತಾಭಾರತಿ
ವಾರ್ತಾಭಾರತಿ
Next Story
X