ತಮಿಳುನಾಡಿನಲ್ಲಿ ಕರ್ನಾಟಕದ ಬಸ್‌ಗಳ ಗಾಜು ಪುಡಿಪುಡಿ
ಕಾವೇರಿಯ ಕಿಚ್ಚು

ಚೆನ್ನೈ, ಸೆ.11: ಕಾವೇರಿಯ ಕಿಚ್ಚು ಇದೀಗ ಕರ್ನಾಟಕ ಮಾತ್ರವಲ್ಲ ತಮಿಳುನಾಡಿನಲ್ಲಿ ಹಬ್ಬಿದ್ದು, ಅಲ್ಲಿನ ಪ್ರತಿಭಟನಾಕಾರರು ಕನ್ನಡಿಗರ ಒಡೆತನದ ಹೊಟೇಲ್‌ಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಕರ್ನಾಟಕದ ರಾಜ್ಯ ನೋಂದಣಿಯ 10ಕ್ಕೂ ಹೆಚ್ಚು ವಾಹನಗಳ ಗಾಜುಗಳನ್ನು ಪುಡಿಪುಡಿ ಮಾಡಿದ್ದಾರೆ.
ಸುಪ್ರೀಂಕೋರ್ಟ್ ಇತ್ತೀಚೆಗೆ ಕಾವೇರಿಗೆ ಸಂಬಂಧಿಸಿ ನೀಡಿದ ತೀರ್ಪನ್ನು ಪುನರ್‌ಪರಿಶೀಲಿಸಬೇಕೆಂದು ಕರ್ನಾಟಕ ಸಲ್ಲಿಸಿರುವ ಮೇಲ್ಮನವಿ ಅರ್ಜಿಯನ್ನು ಸುಪ್ರೀಂ ಸೋಮವಾರ ಬೆಳಗ್ಗೆ 10:30 ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದೆ. ಸುಪ್ರೀಂ ವಿಚಾರಣೆಗೆ ಮೊದಲು ತಮಿಳುನಾಡಿನಲ್ಲಿ ಕಿಡಿಗೇಡಿಗಳು ದಾಂಧಲೆ ನಡೆಸಿದ್ದಾರೆ.
ತಮಿಳುನಾಡಿನ ರಾಮೇಶ್ವರ, ನಾಗಪಟ್ಟಣಂ, ತಿರುಚ್ಚಿ ಹಾಗೂ ತಂಜಾವೂರಿನಲ್ಲಿ ಕನ್ನಡಿಗರ ಮೇಲೆ ದಾಳಿ ನಡೆದಿದೆ ಎನ್ನಲಾಗಿದೆ. ಕೆಲವು ಕಿಡಿಗೇಡಿಗಳು ಕನ್ನಡಿಗರಿಂದ ನಡೆಸಲ್ಪಡುತ್ತಿರುವ ವುಡ್‌ಲ್ಯಾಂಡ್ ಹೊಟೇಲ್ ಮೇಲೆ ಪೆಟ್ರೋಲ್ ಬಾಂಬ್‌ನ್ನು ಎಸೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕನ್ನಡಿಗರು ನಡೆಸುತ್ತಿರುವ ಉದ್ಯಮಗಳಿಗೆ ತಮಿಳುನಾಡು ಪೊಲೀಸರು ಬಿಗಿ ಭದ್ರತೆ ಒದಗಿಸಿದ್ದಾರೆ.





