ಕಾಸರಗೋಡು ಜಿಲ್ಲೆಯಲ್ಲಿ ಸಡಗರದ ಬಕ್ರೀದ್

ಕಾಸರಗೋಡು, ಸೆ.12: ಕಾಸರಗೋಡು ಜಿಲ್ಲೆಯಲ್ಲೂ ಬಕ್ರೀದ್ ಹಬ್ಬವನ್ನು ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸುತ್ತಿದ್ದಾರೆ.
ಇಲ್ಲಿನ ಪ್ರಸಿದ್ಧ ತಳಂಗರೆ ಮಾಲಿಕ್ ದಿನಾರ್ ಮಸೀದಿ, ಟೌನ್ ಹಸ್ನಾತುಲ್ ಜಾರಿಯಾ ಮಸೀದಿ, ಟೌನ್ ಮುಬಾರಕ್ ಮಸೀದಿ, ನೆಲ್ಲಿಕುಂಜೆ ಮುಹಿಯುದ್ದೀನ್ ಮಸೀದಿಗಳಲ್ಲಿ ಈದ್ ನಮಾಝ್ ನೆರವೇರಿತು. ನೂರಾರು ಮಂದಿ ಮುಸ್ಲಿಂ ಬಾಂಧವರು ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಶುಭಾಶಯ ವಿನಿಮಯ ಮಾಡಿಕೊಂಡರು.
ಅದೇ ರೀತಿ ಜಿಲ್ಲೆಯ ಕುಂಬಳೆ, ಉಪ್ಪಳ, ಬದಿಯಡ್ಕ, ಮುಳ್ಳೇರಿಯ, ಕಾಞಂಗಾಡ್, ಮಂಜೇಶ್ವರ ವ್ಯಾಪ್ತಿಯ ಮಸೀದಿಗಳಲ್ಲೂ ಬಕ್ರೀದ್ ಹಬ್ಬದ ಪ್ರಯುಕ್ತ ಈದ್ ನಮಾಝ್ ನೆರವೇರಿತು.
Next Story





