ಕಾವೇರಿ ವಿಚಾರದಲ್ಲಿ ನಾವೆಲ್ಲ ಸಿಎಂ ಜೊತೆಗಿದ್ದೇವೆ: ಎಚ್.ಡಿ.ದೇವೇಗೌಡ

ಬೆಂಗಳೂರು, ಸೆ.12: ಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡ ಅವರು ಪದ್ಮನಾಭ ನಗರದಲ್ಲ್ಲಿರುವ ತಮ್ಮ ನಿವಾಸದಲ್ಲಿ ನೀರಾವರಿ ತಜ್ಞರು, ನೀರಾವರಿ ಇಲಾಖೆಯ ನಿವೃತ್ತ ಅಧಿಕಾರಿಗಳ ಜೊತೆ ಪ್ರತ್ಯೇಕ ಮಾತುಕತೆ ನಡೆಸಿದರು. ಕಾವೇರಿ ನದಿ ನೀರು ಹಂಚಿಕೆ ಕುರಿತ ವಿವಾದದಲ್ಲಿ ಮುಂದಿನ ಕಾರ್ಯತಂತ್ರ ಹೇಗಿರಬೇಕು ಎಂಬ ಕುರಿತು ವಿವಿಧ ಕಾನೂನು ತಜ್ಞರ ಜತೆ ಸಮಾಲೋಚನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಅವರು, ಕಾವೇರಿ ವಿಷಯದಲ್ಲಿ ಪ್ರತಿಭಟನೆ ಎಂಬುದು ಕೇಂದ್ರ ಸರಕಾರಕ್ಕೆ ತಲುಪಿಸುವ ರಾಜ್ಯದ ಒಗ್ಗಟ್ಟಿನ ಸಂದೇಶ.ಮುಂದಿಡಬೇಕಾದ ಹೆಜ್ಜೆಗಳ ವಿಷಯದಲ್ಲಿ ನಾವೆಲ್ಲ ನಿಮ್ಮ ಜತೆಗಿದ್ದೇವೆ ಎಂದು ಹೇಳಿದರು.
Next Story





