ಸುಪ್ರೀಂಕೋರ್ಟ್ ತೀರ್ಪು ದುರದೃಷ್ಟಕರ: ಸಚಿವ ಖಾದರ್

ಮಂಗಳೂರು, ಸೆ.12: ಹಿಂಸೆಯಿಂದ ಪ್ರಯೋಜನವಿಲ್ಲ. ಸುಪ್ರೀಂ ಕೋರ್ಟ್ ಆದೇಶವನ್ನು ಸರಕಾರ ಪಾಲಿಸುತ್ತಿದೆ. ಆದರೂ ತಮಿಳುನಾಡಿನಲ್ಲಿ ಹಿಂಸೆ ಆಗುತ್ತಿದೆ. ಸರಕಾರ ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುತ್ತಿದೆ. ಸುಪ್ರೀಂ ಕೋರ್ಟ್‌ನ ಆದೇಶ ದುರದೃಷ್ಟಕರ ಎಂದು ಆಹಾರ ಸಚಿವ ಯು.ಟಿ. ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿರೋಧ ಪಕ್ಷಗಳಿಗೆ ಸುಪ್ರೀಂ ಆದೇಶ ಪಾಲನೆಯಾಗದಿದ್ದರೆ ಏನು ಆಗುತ್ತದೆ ಎಂಬುದು ಗೊತ್ತಿದ್ದೂ ಕೂಡಾ ವೃಥಾ ಆರೋಪ ಮಾಡುತ್ತಿವೆ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಂಗಾರಪ್ಪಅವರು ಟ್ರಿಬ್ಯೂನಲ್ ಆದೇಶವನ್ನು ಧಿಕ್ಕರಿಸಿದ್ದರೆ ಹೊರತು ಸುಪ್ರೀಂ ಆದೇಶವನ್ನಲ್ಲ. ಸುಪ್ರೀಂ ಆದೇಶವನ್ನು ಧಿಕ್ಕರಿಸಲು ಸಾಧ್ಯವಿಲ್ಲ ಎಂದು ಹೇಳಿದರು.
Next Story





