ಸುರಕ್ಷತೆಗೆ ಕಾರಿನಲ್ಲಿ ಬರಲಿವೆ ವಿನೂತನ ಕ್ರಮಗಳು
ಮುಂದಿನ ವರ್ಷದಿಂದ ಜಾರಿ

ಹೊಸದಿಲ್ಲಿ, ಸೆ.12: ಪ್ರತಿ ವರ್ಷ ರಸ್ತೆ ಅಪಘಾತಗಳಲ್ಲಿ ಲಕ್ಷಕ್ಕೂ ಅಧಿಕ ಮಂದಿ ಜೀವ ಕಳೆದುಕೊಳ್ಳುತ್ತಾರೆ. ಈ ಹಿನ್ನೆಲೆಯಲ್ಲಿ ಪ್ರಯಾಣಿಕರು ಹಾಗೂ ಪಾದಚಾರಿಗಳ ಸುರಕ್ಷತೆಗೆ ಸರಕಾರ ಗಮನ ಹರಿಸಿದೆ. ಇದಕ್ಕಾಗಿ ಹೊಸ ನಿಯಮಾವಳಿಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧರಿಸಿದ್ದು, ಇದು ಮುಂದಿನ ವರ್ಷದಿಂದ ಕಾನೂನಾಗಿ ಬದಲಾಗಲಿದೆ. ನಿಮ್ಮ ಕಾರು ಹೆಚ್ಚು ಸುರಕ್ಷಿತವಾಗಲು ಅನುಸರಿಸುತ್ತಿರುವ ಕ್ರಮಗಳು ಯಾವುವು ಗೊತ್ತೇ?
ಮ್ಯಾನ್ಯುವಲ್ ಓವರ್‌ರೈಡ್
ಮುಂದಿನ ವರ್ಷದ ಅಕ್ಟೋಬರ್‌ನಿಂದ ಈ ವ್ಯವಸ್ಥೆ ಎಲ್ಲ ಮಾದರಿಯ ಕಾರುಗಳಲ್ಲೂ ಕಡ್ಡಾಯವಾಗಲಿದೆ. ವ್ಯಕ್ತಿಯ ವಿದ್ಯುತ್ ಸಹಯದಿಂದ ಅಥವಾ ವಿದ್ಯುತ್ ಇಲ್ಲದಿದ್ದರೂ, ವಾಹನದ ಬಾಗಿಲನ್ನು ತೆರೆಯಲು ಈ ಸಾಧನ ಅನುಕೂಲ ಮಾಡಿಕೊಡುತ್ತದೆ.
ರಿವರ್ಸ್ ಗೇರ್ ಸೆನ್ಸಾರ್ ವ್ಯವಸ್ಥೆ
ಎಲ್ಲ ಹೊಸ ಮಾದರಿಯ ಕಾರುಗಳು ರಿವರ್ಸ್ ಗೇರ್ ಸೆನ್ಸಾರ್ ವ್ಯವಸ್ಥೆ ಹೊಂದಿರಬೇಕಾಗುತ್ತದೆ. ಇದು ಕಾರಿನ ಹಿಂದೆ ಯಾವುದೇ ವಸ್ತು ಇದ್ದರೂ ಚಾಲಕ ಗುರುತಿಸಲು ಇದು ನೆರವಾಗುತ್ತದೆ.
ಸೀಟ್‌ಬೆಲ್ಟ್ ಅಲರ್ಟ್
ಎಲ್ಲ ಕಾರುಗಳಲ್ಲೂ ಇನ್ನೆರಡು ಅಂಶಗಳು ಕಡ್ಡಾಯವಾಗಲಿವೆ. ಒಂದು ಸೀಟ್‌ಬೆಲ್ಟ್ ಅಲರ್ಟ್ ಮತ್ತು ಸ್ಪೀಡ್‌ಮೀಟರ್ 80 ಕಿಲೋಮೀಟರ್ ಮೀರಿದ ತಕ್ಷಣ ಎಚ್ಚರಿಕೆ ಸಂದೇಶ ನೀಡುವ ವ್ಯವಸ್ಥೆ.
ಮುಂಭಾಗ ಅಪಘಾತ ಪರೀಕ್ಷೆ
ಕಾನೂನು ವಿಭಾಗದಿಂದ ಕ್ಲಿಯರೆನ್ಸ್ ಪಡೆದು ಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಈ ಕ್ರಮಗಳಿಗೆ ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ. ಸಚಿವಾಲಯ ಇವೆಲ್ಲವನ್ನೂ ಒಂದೇ ಅಧಿಸೂಚನೆಯಲ್ಲಿ ಪ್ರಕಟಿಸಿ, ಸಾರ್ವಜನಿಕ ಅಭಿಪ್ರಾಯ ಸಂಗ್ರಹಿಸಲು ಮುಂದಾಗಿದೆ.
ಕಡ್ಡಾಯ ಮುಂಭಾಗ ಅಪಘಾತ ಪರೀಕ್ಷೆ ವ್ಯವಸ್ಥೆಯು 2017ರ ಅಕ್ಟೋಬರ್‌ನಿಂದ ಎಲ್ಲ ಹೊಸ ಮಾದರಿಯ ಕಾರುಗಳಿಗೆ ಬರಲಿದೆ. ಹಾಲಿ ಇರುವ ಕಾರುಗಳಿಗೆ 2018ರ ಅಕ್ಟೋಬರ್‌ನ ಗಡುವು ವಿಧಿಸಲಾಗಿದೆ







