ಭಟ್ಕಳದಲ್ಲಿ ಸಡಗರದ ಬಕ್ರೀದ್ ಆಚರಣೆ

ಭಟ್ಕಳ, ಸೆ.12: ತ್ಯಾಗ ಬಲಿದಾನಗಳ ಪ್ರತೀಕವಾಗಿರುವ ಈದುಲ್ ಅಝ್ ಹಾ ವನ್ನು ಮುಸ್ಲಿಮರು ಅತ್ಯಂತ ಸಡಗರ ಸಂಭ್ರಮದೊಂದಿಗೆ ಆಚರಿಸಿದರು.
ಸೋಮವಾರ ಬೆಳಗ್ಗೆ ಇಲ್ಲಿನ ಜಾಮಿಯಾ ಮಸೀದಿಯಲ್ಲಿ ಈದ್ ನಮಾಝ್ ನಿರ್ವಹಿಸುವುದರ ಮೂಲಕ ಪರಸ್ಪರ ಶುಭಾಶಯವನ್ನು ಕೋರಿದರು. ಈದ್ ನಮಾಝ್ ನೇತೃತ್ವ ವಹಿಸಿದ್ದ ಮೌಲಾನ ಅಬ್ದುಲ್ ಅಲೀಮ್ ನದ್ವಿ ಸಮಸ್ತ ಬಾಂಧವರನ್ನು ಉದ್ದೇಶಿಸಿ ಈದ್ ಸಂದೇಶ ನೀಡಿದರು.
ನೂರ್ ಮಸೀದಿ, ಖಲಿಫಾ ಜಾಮಿಯಾ ಮಸೀದಿ, ಸೈಯ್ಯದ್ ಇಬ್ರಾಹೀಂ ಜಾಮಿಯಾಬಾದ್, ತೆಂಗಿನಗುಂಡಿ ಜಾಮಿಯಾ ಮಸೀದಿ, ಅಹ್ಮದ್ ಸೈಯದ್ ಜಾಮಿಯಾ ಮಸೀದಿ ಹುರುಳೀಸಾಲ, ಸಲಫಿ ಮಸೀದಿ ನವಾಯತ್ ಕಾಲನಿ ಹಾಗೂ ಮದೀನಾ ಕಾಲನಿ ಜಾಮಿಯ ಮಸೀದಿಗಳಲ್ಲಿ ಈದ್ ನಮಾಝ್ ನೆರವೇರಿತು.
Next Story





