ಭದ್ರತೆಯ ಭೀತಿ: ಬಾಂಗ್ಲಾದೇಶ ಪ್ರವಾಸಕ್ಕೆ ಮೊರ್ಗನ್, ಹೇಲ್ಸ್ ಅಲಭ್ಯ

ಲಂಡನ್, ಸೆ.12: ಭದ್ರತೆಯ ಭೀತಿಯ ಹಿನ್ನೆಲೆಯಲ್ಲಿ ಇಂಗ್ಲೆಂಡ್‌ನ ಸೀಮಿತ ಓವರ್ ಕ್ರಿಕೆಟ್‌ನ ನಾಯಕ ಇಯಾನ್ ಮೊರ್ಗನ್ ಹಾಗೂ ಬ್ಯಾಟ್ಸ್‌ಮನ್ ಅಲೆಕ್ಸ್ ಹೇಲ್ಸ್ ಮುಂದಿನ ತಿಂಗಳು ಬಾಂಗ್ಲಾದೇಶದಲ್ಲಿ ಆರಂಭವಾಗಲಿರುವ ಸರಣಿಗೆ ಲಭ್ಯವಿರುವುದಿಲ್ಲ ಎಂದು ಇಂಗ್ಲೆಂಡ್ ಹಾಗೂ ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ದೃಢಪಡಿಸಿದೆ.
ಎರಡು ಟೆಸ್ಟ್ ಹಾಗೂ ಮೂರು ಏಕದಿನಗಳಿರುವ ಸರಣಿಯು ಸೆ.30 ರಿಂದ ಆರಂಭವಾಗಲಿದೆ. ಜುಲೈನಲ್ಲಿ ಢಾಕಾದ ಕಫೆಯೊಂದರ ಮೇಲೆ ಉಗ್ರಗಾಮಿಗಳು 18 ವಿದೇಶೀಗರನ್ನು ಒತ್ತೆಯಾಳಾಗಿ ಇಟ್ಟುಕೊಂಡು ಹತ್ಯೆ ಮಾಡಿದ ಬಳಿಕ ಇಂಗ್ಲೆಂಡ್ ಕ್ರಿಕೆಟ್ ತಂಡ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳುವ ಬಗ್ಗೆ ಗೊಂದಲ ಏರ್ಪಟ್ಟಿತ್ತು.
ಈ ಹಿಂದೆ ಭಾರತ ಹಾಗೂ ಬಾಂಗ್ಲಾದೇಶ ಪ್ರವಾಸದಲ್ಲಿ ಭದ್ರತೆಯ ಭೀತಿ ಎದುರಿಸಿದ್ದ ಮೊರ್ಗನ್ ವೈಯಕ್ತಿಕ ಕಾರಣ ನೀಡಿ ಬಾಂಗ್ಲಾ ಪ್ರವಾಸದಿಂದ ಹಿಂದೆ ಸರಿದಿದ್ದಾರೆ.
Next Story





