ಸಾಕ್ಷಿ ಮಲಿಕ್ ಜೀವನಶ್ರೇಷ್ಠ ಸಾಧನೆ
ವಿಶ್ವ ಕುಸ್ತಿ ರ್ಯಾಂಕಿಂಗ್:

ಹೊಸದಿಲ್ಲಿ, ಸೆ.12: ರಿಯೋ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕವನ್ನು ಜಯಿಸಿದ್ದ ಭಾರತದ ಕುಸ್ತಿತಾರೆ ಸಾಕ್ಷಿ ಮಲಿಕ್ ಯುಡಬ್ಲುಡಬ್ಲು(ಯುನೈಟೆಡ್ ವರ್ಲ್ಡ್ ರೆಸ್ಲಿಂಗ್) ರ್ಯಾಂಕಿಂಗ್‌ನಲ್ಲಿ ಜೀವನಶ್ರೇಷ್ಠ 4ನೆ ರ್ಯಾಂಕಿಗೆ ಲಗ್ಗೆ ಇಟ್ಟಿದ್ದಾರೆ.
ಈ ಹಿಂದೆ ರ್ಯಾಂಕ್‌ರಹಿತರಾಗಿದ್ದ ಸಾಕ್ಷಿ ಬ್ರೆಝಿಲ್‌ನಲ್ಲಿ ನಡೆದ ರಿಯೋ ಒಲಿಂಪಿಕ್ಸ್‌ನಲ್ಲಿ ಮಹಿಳೆಯರ 58 ಕೆಜಿ ತೂಕ ವಿಭಾಗದಲ್ಲಿ ಪದಕ ಜಯಿಸಿದ್ದರು. ಸಾಕ್ಷಿ ಒಲಿಂಪಿಕ್ಸ್‌ನಲ್ಲಿ ಪದಕ ಜಯಿಸಿದ ಭಾರತದ ಮೊದಲ ಮಹಿಳಾ ಕುಸ್ತಿಪಟು ಆಗಿದ್ದರು.
ಒಲಿಂಪಿಕ್ಸ್‌ನಲ್ಲಿ ಕ್ವಾರ್ಟರ್‌ಫೈನಲ್‌ನಲ್ಲಿ ಗಾಯಗೊಂಡು ಸ್ಪರ್ಧೆಯಲ್ಲಿ ಸೋತಿದ್ದ ಭಾರತದ ಇನ್ನೋರ್ವ ಕುಸ್ತಿತಾರೆ ವಿನೇಶ್ ಫೋಗತ್ 2 ಸ್ಥಾನ ಮೇಲಕ್ಕೇರಿ 11ನೆ ಸ್ಥಾನ ತಲುಪಿದ್ದಾರೆ,. ಪುರುಷರ ಫ್ರೀಸ್ಟೈಲ್ ವಿಭಾಗದಲ್ಲಿ ಸಂದೀಪ್ ಥೋಮರ್ ಹಾಗೂ ಬಜರಂಗ್ ಪೂನಿಯಾ ಅಗ್ರ-20ರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
Next Story





