ಕಾವೇರಿದ ವಿವಾದ: ಗೋಕುಲ್‌ರಾಜ್ ಟ್ರಾನ್ಸ್‌ಪೋರ್ಟ್ ಕಂಪೆನಿಯ 25 ಲಾರಿಗಳಿಗೆ ಬೆಂಕಿ

ಬೆಂಗಳೂರು, ಸೆ.12: ಮೈಸೂರು ರಸ್ತೆಯ ನ್ಯೂ ಟಿಂಬರ್‌ಯಾರ್ಡ್ ಲೇಔಟ್‌ನಲ್ಲಿರುವ ಗೋಕುಲ್ ರಾಜ್ ಟ್ರಾನ್ಸ್‌ಪೋರ್ಟ್ ಕಂಪೆನಿಗೆ ಸೇರಿರುವ 25 ಲಾರಿಗಳಿಗೆ ಬೆಂಕಿ ಹಚ್ಚಲಾಗಿದೆ.
ತಮಿಳುನಾಡು ನೋಂದಣಿಯ ಲಾರಿಗಳನ್ನು ಗುರಿಯಾಗಿರಿಸಿಕೊಂಡಿರುವ ಕನ್ನಡ ಪರ ಸಂಘಟನೆಗಳು ಕಂಪೆನಿಯ ಗೋಡೌನ್‌ನಲ್ಲಿ ನಿಲ್ಲಿಸಲಾಗಿದ್ದ 25 ಲಾರಿಗಳಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಂಕಿಯ ಕೆನ್ನಾಲಿಗೆಗೆ ಲಾರಿಯಲ್ಲಿದ್ದ ಸಾಮಾನುಗಳು ಸುಟ್ಟು ಕರಕಲಾಗಿವೆ.
ಇದೇ ವೇಳೆ ಕೆಂಗೇರಿ ಬಳಿಯ ನೈಸ್ ರಸ್ತೆಯಲ್ಲಿ ತಮಿಳುನಾಡಿನ ಸರಕಾರಿ ಬಸ್‌ಗೆ ಬೆಂಕಿ ಹಚ್ಚಲಾಗಿದೆ.
Next Story





