ಹಾಸನ: ದುಷ್ಕರ್ಮಿಗಳಿಂದ ಬೇಕರಿ ಧ್ವಂಸ
ತಮಿಳರ ಅಂಗಡಿ ಎಂದು ಭಾವಿಸಿ ಧ್ವಂಸಗೈದಿರುವ ಶಂಕೆ

ಹಾಸನ, ಸೆ.12: ಮಫ್ಲರ್ ಧರಿಸಿದ ದುಷ್ಕರ್ಮಿಗಳು ಬೇಕರಿಯೊಂದರ ಗಾಜುಗಳನ್ನು ಪುಡಿಗೈದು, ಧ್ವಂಸ ಮಾಡಿದ ಘಟನೆ ನಗರದ ಸರಸ್ವತಿ ದೇವಾಲಯದ ಬಳಿ ಸೋಮವಾರ ಸಂಜೆ ಸಂಭವಿಸಿದೆ.
ಕೇರಳ ಮೂಲದವರೆನ್ನಲಾದ ಶಶಿಧರ್ ಎಂಬುವರಿಗೆ ಸೇರಿದ ಐನ್ಸ್ ಬೇಕರಿಗೆ ನಾಲ್ಕೈದು ಜನರ ಗುಂಪೊಂದು ದಾಳಿ ನಡೆಸಿದ್ದು, ಕಲ್ಲು ಹಾಗೂ ಕೋಲಿನಿಂದ ಬೇಕರಿಯ ಗಾಜನ್ನು ಹೊಡೆದು ಧ್ವಂಸ ಮಾಡಿದೆ.
ದಾಳಿ ಮಾಡಿದ ದುಷ್ಕರ್ಮಿಗಳ ತಂಡ ಬೇಕರಿಯಿಂದ ನಗದು ಸಹಿತ ಯಾವ ಸೊತ್ತನ್ನೂ ದೋಚದೆ ಪರಾರಿಯಾಗಿದೆ. ಬೇಕರಿ ಹೆಸರು ತಮಿಳು ಹೆಸರನ್ನು ಹೋಲುತ್ತಿದ್ದು, ತಮಿಳುನಾಡಿನಲ್ಲಿ ಕನ್ನಡಿಗರ ಮೇಲೆ ನಡೆದ ದೌರ್ಜನ್ಯಕ್ಕೆ ಪ್ರತಿಯಾಗಿ ದುಷ್ಕರ್ಮಿಗಳು ಬೇಕರಿಯನ್ನು ಧ್ವಂಸ ಮಾಡಲು ಉದ್ದೇಶಿಸಿದ್ದರು ಎಂದು ಶಂಕಿಸಲಾಗಿದೆ.
ದುಷ್ಕರ್ಮಿಗಳ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
Next Story





