ಕೂಳೂರು: ವಿದ್ಯುತ್‌ಕಂಬಕ್ಕೆ ಢಿಕ್ಕಿಯಾಗಿ ಆ್ಯಂಬುಲೆನ್ಸ್ ಪಲ್ಟಿ

ಮಂಗಳೂರು, ಸೆ.12: ಕುಳೂರು ಸಮೀಪ ಚಾಲಕ ನಿಯಂತ್ರಣ ತಪ್ಪಿ ಖಾಸಗಿ ಆ್ಯಂಬುಲೆನ್ಸ್‌ವೊಂದು ಹೆದ್ದಾರಿ ಮಧ್ಯದ ಬೀದಿದೀಪದ ಕಂಬಕ್ಕೆ ಢಿಕ್ಕಿ ಹೊಡೆದು ಪಲ್ಟಿಯಾದ ಘಟನೆ ಸೋಮವಾರ ನಡೆದಿದೆ.
ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪಾರಾಗಿದ್ದಾರೆ. ಆ್ಯಂಬುಲೆನ್ಸ್ ಸುರತ್ಕಲ್‌ನಿಂದ ವೇಗವಾಗಿ ಬರುತ್ತಿದ್ದಾಗ ವಾಹನವೊಂದು ಅಡ್ಡ ಬಂದಿದ್ದರಿಂದ ಆ್ಯಂಬುಲೆನ್ಸ್ ಬಲಬದಿಗೆ ಚಲಿಸಿ ಬೀದಿದೀಪದ ಕಂಬಕ್ಕೆ ಢಿಕ್ಕಿಯಾಗಿ ಪಲ್ಟಿಯಾಗಿದೆ.
ಇದರಿಂದ ವಾಹನ ಸಂಚಾರಕ್ಕೆ ಸ್ವಲ್ಪ ತಡೆಯಾಗಿದ್ದು, ಕೂಡಲೇ ಟ್ರಾಫಿಕ್ ಸಿಬ್ಬಂದಿ ನೇತೃತ್ವದಲ್ಲಿ ತೆರವುಗೊಳಿಸಲಾಯಿತು.
Next Story





