ಬೆಳ್ತಂಗಡಿ: ಡೆಂಗ್‌ಗೆ ವಿದ್ಯಾರ್ಥಿ ಬಲಿ

ಬೆಳ್ತಂಗಡಿ,ಸೆ.13: ಡೆಂಗ್ ಜ್ವರದಿಂದ ಬಳಲುತ್ತಿದ್ದ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಬೆಳ್ತಂಗಡಿ ತಾಲೂಕಿನ ಲಾಯ್ಲ ಗ್ರಾಮದ ಪುತ್ರಬೈಲು ಎಂಬಲ್ಲಿ ಸಂಭವಿಸಿದೆ. ‘
ಮೃತ ವಿದ್ಯಾರ್ಥಿಯನ್ನು ತಾಲೂಕಿನ ಲಾಯ್ಲ ಗ್ರಾಮದ ಪುತ್ರಬೈಲು ನಿವಾಸಿ ಚಂದಪ್ಪರ ಪುತ್ರ, ಬೆಳ್ತಂಗಡಿ ನಡ ಸರಕಾರಿ ಪ್ರೌಢಶಾಲೆಯ 9ನೆ ತರಗತಿಯ ವಿದ್ಯಾರ್ಥಿ ನವೀನ್ (15) ಎಂದು ಗುರುತಿಸಲಾಗಿದೆ.
ಈತ ಕಳೆದ ಕೆಲ ದಿನಗಳಿಂದ ಡೆಂಗ್ ಜ್ವರದಿಂದ ಬಳಲುತ್ತಿದ್ದು, ಬದ್ಯಾರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮುಂಜಾನೆ 2 ಗಂಟೆ ಸುಮಾರಿಗೆ ಈತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
Next Story





