ಪ್ರಧಾನಿ ಉಭಯ ರಾಜ್ಯಗಳ ಸಿಎಂಗಳ ಸಭೆ ಕರೆಯಲಿ: ಮಲ್ಲಿಕಾರ್ಜುನ ಖರ್ಗೆ

ಬೆಂಗಳೂರು, ಸೆ.13: ಕಾವೇರಿ ಜಲವಹಂಚಿಕೆ ಕುರಿತಂತೆ ಉದ್ಭವಿಸಿರುವ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಪ್ರಧಾನಿ ಮೋದಿ ಮಧ್ಯಪ್ರವೇಶ ಮಾಡಬೇಕು ಎಂದು ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾಜು೯ನ ಖಗೆ೯ ಹೇಳಿದ್ದಾರೆ.
ಸಿಎಂ ಗೃಹಕಚೇರಿ ಕೃಷ್ಣಾದಲ್ಲಿ ನಡೆದ ಕಾಂಗ್ರೆಸ್ ಮುಖಂಡರ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಜನ ತಾಳ್ಮೆಯಿಂದ ಇರಬೇಕು .ಶಾಂತಿಯಿಂದ ವತಿ೯ಸಬೇಕು ಎಂದು ಮನವಿ ಮಾಡಿಕೊಂಡರು.
ರಾಜ್ಯ ಸರಕಾರ ರೈತರ, ಜನರ ಸಮಸ್ಯೆಗೆ ಯಾವಾಗಲೂ ಸ್ಪಂದಿಸಿದೆ. ಅಂತಾರಾಜ್ಯ ಸಮಸ್ಯೆಗಳು ಎದುರಾದಾಗ ಪ್ರಧಾನಿ ಮಧ್ಯಪ್ರವೇಶಿಸುವುದು ಅಗತ್ಯ. ಪ್ರಧಾನಿಯ ಪಾತ್ರ ಬಹಳ ಮುಖ್ಯ. ಇಂದಿರಾ ಗಾಂಧಿಯವರು ಕೂಡಾ ಇಂತಹ ಅನೇಕ ಸಮಸ್ಯೆಗಳಿಗೆ ಮದ್ಯಸ್ಥಿಕೆ ವಹಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮದ್ಯಸ್ಥಿಕೆ ವಹಿಸಬೇಕು. ಸಂಬಂಧಪಟ್ಟ ರಾಜ್ಯಗಳ ಸಿಎಂರನ್ನು ಕರೆಸಿ ಮಾತಾಡಬೇಕು. ಈ ವಿಚಾರದಲ್ಲಿ ತಮಿಳುನಾಡು ಸಿಎಂ ಪಾತ್ರವೂ ಬಹಳ ಮುಖ್ಯ. ಹೀಗಾಗಿ ಪ್ರಧಾನಿ ಮೋದಿ ಎರಡೂ ರಾಜ್ಯಗಳ ಸಿಎಂ ರನ್ನು ಕರೆಸಿ ಮಾತಾಡಿದರೆ ಬಹಳ ಸೂಕ್ತ ಎಂಬುದು ನನ್ನ ಅಭಿಪ್ರಾಯ ಎಂದು ಖರ್ಗೆ ಹೇಳಿದರು





