ಆಯುರ್ವೇದ ಔಷಧಿಯೊಂದನ್ನು ತಾನೇ ಬಳಸಿದ ಈ ವೈದ್ಯನಿಗೆ ಏನಾಯಿತು ನೋಡಿ !

ಮೂವಾಟ್ಟುಪುಝ, ಸೆಪ್ಟಂಬರ್ 13: ತಾನು ಬರೆದು ಕೊಟ್ಟ ಔಷಧದಲ್ಲಿ ನಂಬಿಕೆಯನ್ನು ಸಾಬೀತುಪಡಿಸಲಿಕ್ಕಾಗಿ ರೋಗಿಯ ಸಂಬಂಧಿಕರ ಔಷಧವನ್ನೇ ಸೇವಿಸಿ ಒಂಬತ್ತು ವರ್ಷಗಳಿಂದೀಚೆಗೆ ಕೋವ ಸ್ಥಿತಿಯಲ್ಲಿದ್ದ ಆಯುರ್ವೇದ ವೈದ್ಯರಾದ ಮೂವಾಟ್ಟುಪುಝದ ಡಾ. ಪಿ.ಐ. ಬೈಜು ಎಂಬವರು ಮೃತರಾಗಿದ್ದಾರೆಂದು ವರದಿಯಾಗಿದೆ.
ಸೋಮವಾರ ಬೆಳಗ್ಗೆ ಐದು ಗಂಟೆಗೆ ಅವರು ಕೊನೆಯುಸಿರೆಳಿದಿದ್ದಾರೆ. ಸೈಬನ್ ವ್ಯಾಲಿಯ ಸರಕಾರಿ ಆಯುರ್ವೇದ ಆಸ್ಪತ್ರೆಯಲ್ಲಿ ಕೆಲಸದಲ್ಲಿದ್ದ ಅವರು 2007ರ ಜನವರಿ 24ಕ್ಕೆ ತನ್ನ ರೋಗಿಯಾದ ಶಾಂತಾ ಎಂಬವರಿಗೆ ಶಿಫಾರಸು ಮಾಡಿದ್ದ ಔಷಧವನ್ನು ತನ್ನ ಮೇಲೆಯೇ ಪರೀಕ್ಷಿಸಲು ಹೋಗಿದ್ದರು. ಔಷಧ ಸೇವಿಸಿದ ಕೂಡಲೇ ವೈದ್ಯರು ಪ್ರಜ್ಞೆ ಕಳಕೊಂಡಿದ್ದರು. ನಂತರ ಹಲವು ರೀತಿಯ ಚಿಕಿತ್ಸೆ ನೀಡಿದ್ದರು ಅವರ ಕೋಮ ಸ್ಥಿತಿಯಲ್ಲಿ ಸುಧಾರಣೆಯಾಗಿರಲಿಲ್ಲ. ವೈದ್ಯರು ಸೇವಿಸಿದ್ದ ಔಷಧದಲ್ಲಿ ಆರ್ಗನೊ ಫಾಸ್ಪರಸ್ ಎಂಬ ಕೀಟನಾಶಕ ಸೇರಿದ್ದುದು ಪತ್ತೆಯಾಗಿತ್ತು. ಔಷಧಕ್ಕೆ ಬೇರೆ ಯಾರೋ ಕೀಟನಾಶಕ ಬೆರೆಸಿರಬೇಕೆಂದು ಪೊಲೀಸರು ಶಂಕಿಸಿದ್ದರು. ಶಾಂತಾರ ಪತಿಯನ್ನು ಪೊಲೀಸರು ಈ ಕುರಿತು ಪ್ರಶ್ನಿಸಿದ್ದರೂ ಪ್ರಕರಣದಲ್ಲಿ ಯಾವುದೇ ಪ್ರಗತಿಯಾಗಿರಲಿಲ್ಲ ಎಂದು ವರದಿಯಾಗಿದೆ.





