ಆಮ್‌ಆದ್ಮಿ ಹಿರಿಯ ಶಾಸಕ ದೇವಿಂದರ್ ಸೆಹ್ರಾವತ್ ಅಮಾನತು

ಹೊಸದಿಲ್ಲಿ, ಸೆಪ್ಟಂಬರ್ 13: ಪಂಜಾಬ್‌ನಲ್ಲಿ ಪಕ್ಷದ ಟಿಕೆಟ್‌ಗಾಗಿ ಪಕ್ಷದ ನಾಯಕರೇ ಮಹಿಳೆಯರನ್ನು ಬಳಸುತ್ತಿದ್ದಾರೆಂದು ಆರೋಪಿಸಿ ದಿಲ್ಲಿ ಮುಖ್ಯಮಂತ್ರಿ ಅರವಿಂದ್‌ಕೇಜ್ರಿವಾಲ್‌ಗೆ ಪತ್ರ ಬರೆದಿದ್ದ ಆಮ್ ಆದ್ಮಿ ಶಾಸಕ ದೇವಿಂದರ್ ಶೆರಾವತ್‌ರನ್ನು ಪಕ್ಷದಿಂದ ಅಮಾನತುಗೊಳಿಸಲಾಗಿದೆ ಎಂದು ವರದಿಯಾಗಿದೆ. ಪಂಜಾಬ್ ಸಂದರ್ಶಿ ದಿಲ್ಲಿಗೆ ಮರಳಿದ್ದ ಅರವಿಂದ್ ಕೇಜ್ರಿವಾಲ್ ಶೆರಾವತ್ ವಿರುದ್ಧ ಕ್ರಮಜರಗಿಸಿದ್ದಾರೆ ಎನ್ನಲಾಗಿದೆ.
ಪಕ್ಷ ಮತ್ತು ಪಕ್ಷದ ನಾಯಕರಿಗೆ ಕೆಟ್ಟ ಹೆಸರು ತರುವಂತಹ ಹೇಳಿಕೆ ನೀಡಿದ್ದಕ್ಕಾಗಿ ದೇವಿಂದರ್ ವಿರುದ್ಧ ಕ್ರಮಕೈಗೊಳ್ಳಲು ಆಮ್‌ಆದ್ಮಿಪಾರ್ಟಿಯ ದಿಲ್ಲಿ ಘಟಕದ ಶಿಸ್ತು ಸಮತಿಯು ತೀರ್ಮಾನಿಸಿತ್ತು. ಅವರ ವಿರುದ್ಧ ತನಿಖೆ ನಡೆಯುವವರೆಗೆ ಅವರನ್ನು ಪಕ್ಷದಿಂದ ದೂರವಿಡಲಾಗುವುದು ಎಂದು ದಿಲ್ಲಿ ಘಟಕದ ಕನ್ವೀನರ್ ದಿಲೀಪ್ ಪಾಂಡೆ ತಿಳಿಸಿದ್ದಾರೆ.
ಪಂಜಾಬ್‌ನಲ್ಲಿ ಆಮ್ ಆದ್ಮಿ ನಾಯಕರು ಟಿಕೆಟ್ ಪಡೆಯಲಿಕ್ಕಾಗಿ ಮಹಿಳೆಯರನ್ನು ಶೋಷಣೆ ನಡೆಸುತ್ತಿದ್ದಾರೆಂದು ಬೆಟ್ಟು ಮಾಡಿ ಅರವಿಂದ್ ಕೇಜ್ರಿವಾಲ್‌ಗೆ ಪತ್ರ ಬರೆದಿದ್ದರು. ಪಾರ್ಟಿಯ ವರ್ಚಸ್ಸು ಕುಂದಿಸುವ ಕೆಲಸದಲ್ಲಿ ಆಶುತೋಷ್, ಸಂಯ್ ಸಿಂಗ್, ದಿಲೀಪ್ ಪಾಂಡೆ ವ್ಯಸ್ತರಾಗಿದ್ದಾರೆ ಎಂದು ಅವರು ಆರೋಪಿಸಿದ್ದರಲ್ಲದೆ, ಈ ವಿಷಯದಲ್ಲಿ ಕೇಜ್ರಿವಾಲ್ ತನ್ನ ನಿಲುವನ್ನು ವ್ಯಕ್ತಪಡಿಸಬೇಕೆಂದು ಪತ್ರ ಬರೆದು ಆಗ್ರಹಿಸಿದ್ದರು ಎನ್ನಲಾಗಿದೆ.





