ಸುಳ್ಯ: ಬೈಕ್ ಗೆ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ; ಸವಾರ ಸ್ಥಳದಲ್ಲೇ ಮೃತ್ಯು

ಸುಳ್ಯ, ಸೆ.13: ಅಡ್ಕಾರು ಬಳಿ ಬಸ್ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ.
ಮೈಸೂರಿನಿಂದ ಕುಂದಾಪುರಕ್ಕೆ ಹೋಗುವ ಕೆಎಸ್ಸಾರ್ಟಿಸಿ ಬಸ್ ಅಡ್ಕಾರಿನಿಂದ ಬೈತಡ್ಕಕ್ಕೆ ಹೋಗುತ್ತಿದ್ದ ಬೈಕ್‌ಗೆ ಢಿಕ್ಕಿ ಹೊಡೆದಿದ್ದು, 10 ಮೀಟರ್‌ನಷ್ಟು ದೂರಕ್ಕೆ ಎಳೆದೊಯ್ದಿದೆ. ಗಂಭೀರ ಗಾಯಗೊಂಡ ಉದಯ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಅಡ್ಕಾರಿನ ಆನಂದ ಟೈಲರ್ ಎಂಬವರ ಟೈಲರಿಂಗ್ ಶಾಪ್‌ನಲ್ಲಿ ಉದಯ ಕಳೆದ ಒಂದು ವರ್ಷದಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಮಧ್ಯಾಹ್ನ ಜಾಲ್ಸೂರಿನ ಸಹಕಾರಿ ಸಂಘಕ್ಕೆ ತೆರಳಿ ಪಡಿತರ ಪಡೆದು ಸ್ನೇಹಿತರ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದಾಗ ವನವಾಸಿ ಹಾಸ್ಟೆಲ್ ಬಳಿ ತಿರುವಿನಲ್ಲಿ ಬಸ್ ಢಿಕ್ಕಿ ಹೊಡೆದಿದೆ ಎನ್ನಲಾಗಿದೆ.
Next Story





