ಇನ್ನು ಚೀನದಲ್ಲಿಯೂ ಸ್ಕೈ ಟ್ರೈನ್
.jpg)
ಜರ್ಮನಿ,ಸೆ. 13: ಜಪಾನ್ ನಂತರ ಈಗ ಚೀನಾವೂ ಸ್ಕೈ ಟ್ರೈನ್ (ಆಕಾಶ ರೈಲು) ಯೋಜನೆಯನ್ನು ಪೂರ್ತಿಗೊಳಿಸುವ ಹಂತಕ್ಕೆ ತಲುಪಿದೆ. ನಾನ್‌ಜಿಯಾಂಗ್ ನಗರದಲ್ಲಿ ಚೀನದಲ್ಲಿ ಪ್ರಥಮವಾಗಿ ಸ್ಕೈಟ್ರೈನ್ ಮುಂದಿನ ವರ್ಷದಿಂದ ಪ್ರಯಾಣ ಆರಂಭಿಸಲಿದೆ ಎಂದು ವರದಿಯೊಂದುತಿಳಿಸಿದೆ. ಚೈನಾ ರೈಲ್ವೆ ರೋಲಿಂಗ್ ಸ್ಟಾಕ್ ಕಾರ್ಪೊರೇಷನ್ ಅಧೀನದ ನಾನ್‌ಜಿಯಾಂಗ್ ಫ್ಯೂಸನ್ ಕಂಪೆನಿ ಲಿಮಿಟೆಡ್ ಇದರ ಅಂತಿಮಘಟ್ಟದ ಕೆಲಸವನ್ನೂಪೂರ್ತಿಗೊಳಿಸಿದೆ.
ಎರಡು ಕಂಪಾರ್ಟ್ ಮೆಂಟ್ ಇರುವ ರೈಲು ಇದಾಗಿದ್ದು, ಗರಿಷ್ಠ 200 ಪ್ರಯಾಣಿಕರು ಇದರಲ್ಲಿ ಪ್ರಯಾಣಿಸಬಹುದಾಗಿದೆ. ಸಬ್‌ವೇ.ಗಳಿಗೆ ಹೋಲಿಸಿದರೆ ಇದು ಖರ್ಚು ಕಡಿಮೆ ಮತ್ತು ಹೆಚ್ಚು ಸರಕ್ಷಿತ ಎಂದು ಚೀನಾದ ಅಧಿಕಾರಿಗಳು ತಿಳಿಸಿದ್ದಾರೆ. ನಿರ್ಮಾಣ ಖರ್ಚು ಮತ್ತು ಸಬ್‌ವೇ ವ್ಯವಸ್ಥೆಯನ್ನು ಹೋಲಿಸುವಾಗ ಕಡಿಮೆ ತಗಲುತ್ತದೆ ಎಂದು ಅವರು ಹೇಳುತ್ತಾರೆ.
ಈ ರೈಲಿನ ಇಂಜಿನ್ ವಿದ್ಯುತ್‌ಚಾಲಿತವಾಗಿದೆ. ಒಮ್ಮೆ ಚಾರ್ಜ್ ಮಾಡಿದರೆ ರೈಲು ನಾಲ್ಕು ಗಂಟೆವರೆಗೆ ಓಡುತ್ತದೆ. ಎರಡು ನಿಮಿಷದೊಳಗೆ ನಿಲ್ದಾಣಗಳಲ್ಲಿ ರೈಲಿನ ಬ್ಯಾಟರಿ ಬದಲಾಯಿಸಲು ಸಾಧ್ಯವಿದೆ ಎಂದು ವರದಿ ತಿಳಿಸಿದೆ.





