ರಾಜೀವ್ ಗಾಂಧಿ ಹಂತಕ ಪೇರರಿವಾಲನ್‌ಗೆ ಜೈಲಿನಲ್ಲಿ ಹಲ್ಲೆ

ಹೊಸದಿಲ್ಲಿ, ಸೆಪ್ಟಂಬರ್ 13: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಅಪರಾಧಿಯಲ್ಲೊಬ್ಬನಾದ ಪೇರರಿವಾಲನ್‌ಗೆ ವೆಲ್ಲೂರು ಜೈಲಿನಲ್ಲಿ ಸಹಕೈದಿಗಳು ಹಲ್ಲೆ ಎಸಗಿದ್ದಾರೆಂದು ವರದಿಯಾಗಿದೆ. ಹಲ್ಲೆಯಿಂದ ಗಂಭೀರ ಗಾಯಗೊಂಡ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನಿಗೆ ಕಬ್ಬಿಣದ ರಾಡ್‌ನಿಂದ ಹೊಡೆಯಲಾಗಿದೆ ಎಂದು ತಿಳಿದು ಬಂದಿದೆ. ಸುಪ್ರೀಂಕೋರ್ಟ್ ಆತನ ಬಿಡುಗಡೆಗೆ ತಡೆ ವಿಧಿಸಿದತ್ತು:
ಪೇರರಿವಾಲನ್ ವಕೀಲ ಶಿವಕುಮಾರ್ ಆತನ ಬಿಡುಗಡೆಗಾಗಿ ಸುಪ್ರೀಂ ಕೋರ್ಟಿಗೆ ಅಪೀಲು ಮಾಡಿದ್ದರೂ ಪ್ರಯೋಜನವಾಗಿರಲಿಲ್ಲ. 1991ರ ನಂತರ ಪೇರರಿವಾಲನ್‌ಗೆ ಪೆರೋಲ್ ಕೂಡಾ ಸಿಕ್ಕಿಲ್ಲ ಎನ್ನಲಾಗಿದೆ. ಶಿವರಾಸನ್‌ಗೆ ಪೇರರಿವಾಲನ್ ಒಂಬತ್ತು ವೋಲ್ಟ್‌ನ ಬ್ಯಾಟರಿಯೊಂದನ್ನು ಖರೀದಿಸಿ ನೀಡಿದ್ದು, ಶಿವರಾಸನ್ ಅದನ್ನು ಬಾಂಬು ತಯಾರಿಸಲು ಬಳಸಿಕೊಂಡಿದ್ದಾನೆ ಎಂಬ ಆರೋಪ ಪೇರರಿವಾಲನ್ ವಿರುದ್ಧ ಸಾಬೀತಾಗಿದೆ. ಪೇರರಿವಾಲನ್‌ರ ಹೇಳಿಕೆ ಪಡೆದ ಸಿಬಿಐಯ ಮಾಜಿ ಎಸ್ಪಿ ಟಿ,ರಾಜನ್ ಕೂಡಾ ಪೇರರಿವಾಲನ್‌ಗೆ, ತಾನು ಖರೀದಿಸಿಕೊಟ್ಟ ಬ್ಯಾಟರಿಯಿಂದ ಬಾಂಬ್ ತಯಾರಿಸಲಾಗುತ್ತದೆ ಎಂಬ ಅರಿವಿರಲಿಲ್ಲ ಎಂದು ಹೇಳಿದ್ದಾರೆಂದು ವರದಿ ತಿಳಿಸಿದೆ.





